ಬಳ್ಳಾರಿ : ನಕಲಿ ಚಿನ್ನವನ್ನು ಮಾರಿ ವಂಚಿಸಲು ಯತ್ನ, ಮೂವರ ಬಂಧನ

ಬಳ್ಳಾರಿ : ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ನಿಧಿಯಲ್ಲಿ ದೊರೆತ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ವಂಚನೆ ಮಾಡಿದ ಮೂರು ಜನರನ್ನು ಹೊಸಪೇಟೆ ಪೊಲೀಸರು ಬಂಧಿಸಿ 8 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಆಂದ್ರ ಪ್ರದೇಶದ ತೆನಾಲಿ ಗ್ರಾಮದ ಸ್ವಪ್ನ ಅವರಿಗೆ ದಾವಣಗೆರೆ ಜಿಲ್ಲೆಯ ಹಲವರು ತಮಗೆ ನಿಧಿಯಲ್ಲಿ ಎರೆಡು ಕಿಲೋ ಚಿನ್ನ ದೊರೆತಿದ್ದು ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ ಹೊಸಪೇಟೆ ನಗರದ ಪುಣ್ಯ ಮೂರ್ತಿ ವೃತ್ತದ ಬಳಿ ಚಿನ್ನದ ಸರಕನ್ನು ತೋರಿಸಿದ್ದಾರೆ. ನಕಲಿ ಚಿನ್ನದ ಬಿಲ್ಲೆಗಳನ್ನು ಜೂನ್ 4 ರಂದು ನೀಡಿ ಅವರಿಂದ. 12 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗಿದ್ದಾರೆ.

ಅವರು ನೀಡಿದ ಬಿಲ್ಲೆಗಳು ನಕಲಿ ಎಂದು ಗೊತ್ತಾಗಿ ನೀಡಿದ ದೂರಿನ ಮೇರೆಗೆ ಪೊಲೀಸರು ದಾವಣಗೆರೆ ಜಿಲ್ಲೆಯ  ರಾಣೆಬೆನ್ನೂರು ಗ್ರಾಮದ ತಿಮ್ಮಪ್ಪ, (28). ನಾಗಪ್ಪ (23) ಮಾಚಿಹಲ್ಲಿ ಕೊರಚರಹಟ್ಟು ಮತ್ತು ಉಚ್ಚಂಗಿ ದುರ್ಗದ ಉಮಾಪತಯ್ಯ (42) ಇವರನ್ನು ಹೊಸಪೇಟೆಯ ಶ್ರೀರಾಮುಲು ಪಾರ್ಕ್ ಹತ್ತಿರ ಇಂದು ಬಂಧಿಸಿ ಅವರಿಂದ 8 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದ್ದಾರೆ‌. ಈ ಪ್ರಕರಣಕ್ಕೆ ಸಂಬಂಧಿಸಿ ಗೂಬನಹಳ್ಳಿಯ ರಮೇಶ್ ,ನಾಗಪ್ಪ ಮತ್ತು ಪವನ ಪುರದ ಪಿ.ಮಂಜುನಾಥ ತಲೆ ಮರೆಸಿಕೊಂಡಿದ್ದಾರೆ. ಇವರ ಪತ್ತೆ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com