West Indies tour : ಕದನಕ್ಕೆ ಟೀಮ್ ಇಂಡಿಯಾ ಸಜ್ಜು, ಕೆರೆಬಿಯನ್ ರ ವಿರುದ್ದ ಇಂದು ಮೊದಲ ಪಂದ್ಯ..

ಚಾಂಪಿಯನ್ಸ್​ ಟ್ರೋಫಿ ಮುಗಿದು ದಿನಗಳಷ್ಟೇ ಕಳಿದಿವೇ ಆಗಲೇ ಮತ್ತೊಂದು ಟೂರ್ನಿಗೆ ಆಟಗಾರರು ಸಿದ್ಧರಾಗಿದ್ದು ಶುಕ್ರವಾರ ಟೀಮ್​ ಇಂಡಿಯಾ ಮತ್ತೊಂದು ಕದನಕ್ಕೆ ಸನ್ನದ್ಧವಾಗಿದೆ.. ವೆಸ್ಟ್​ ಇಂಡೀಸ್​ನಲ್ಲಿ ಕೊಹ್ಲಿ ಪಡೆ15 ದಿನಗಳ ಕಾಲ ಕ್ರಿಕೆಟ್ ಸರಣಿಯನ್ನಾಡಲಿದೆ. ಇದರಲ್ಲಿ 5 ಏಕದಿನ ಹಾಗೂ 1 ಟಿ-20 ಸೇರಿವೆ..
ಪೋರ್ಟ್​ ಆಫ್​ ಸ್ಪೇನ್​​​ನ,  ಕ್ವೀನ್ಸ್​​ ಪಾರ್ಕ್​​​ ಓವಲ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಗೆಲ್ಲುವ ಹಾಟ್​ ಫೇವರಿಟ್​ ಅಂದ್ರೆ ಭಾರತ.. ಇತ್ತೀಚಿಗೆ ಇಂಗ್ಲೆಂಡ್​ನಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್​ನಲ್ಲಿ ಮುಗ್ಗರಿಸಿತ್ತು. ಫೈನಲ್​​ನಲ್ಲಿ ಕಲಿತ ಪಾಠಗಳಿಂದ ವಿರಾಟ್​ ಪಡೆ ಪಾಠ ಕಲಿಯಬೇಕಿದೆ.. ಅಂದಾಗ ಮಾತ್ರ ವಿಂಡೀಸ್​ ವಿರುದ್ಧ ಜಯದ ಕೇಕೆ ಹಾಕಲು ಸಾಧ್ಯ..
ಇನ್ನು,  ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ರೂ, ಕೂಡ ಅತಿಯಾದ ಆತ್ಮವಿಶ್ವಾಸ ವಿರಾಟ್ ಕೊಹ್ಲಿ ಪಡೆಗೆ ಮುಳುವಾಗಿ ಪರಿಣಮಿಸಿದೆ. ಮತ್ತೊಂದೆಡೆ, ತಂಡಕ್ಕೆ ಮುಖ್ಯ ಕೋಚ್ ಅಲಭ್ಯತೆ ಕೂಡ ಕಾಡಲಿದೆ. ಇನ್ನು ರೋಹಿತ್​ ಶರ್ಮಾ ಹಾಗೂ ಬೂಮ್ರ ಅವರ ಬದಲಿಗೆ ಯುವ ಆಟಗಾರ ರಿಷಬ್​ ಪಂತ್​ ಹಾಗೂ ಕುಲ್ದೀಪ್​ ಯಾದವ್​ ತಂಡ ಸೇರಿಕೊಂಡಿದ್ದಾರೆ.. ಮೊದಲ ಪಂದ್ಯದಲ್ಲಿ ಶಿಖರ್​ ಅವರೊಂದಿಗೆ ರಹಾನೆ ಇನಿಂಗ್ಸ್​ ಆರಂಭಿಸುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ , ಯುವಿ, ಧೋನಿ, ಕೇದಾರ್​, ತಂಡಕ್ಕೆ ಆಸರೆಯಾಗಬಲ್ಲರು. ವೇಗದ ನೊಗವನ್ನು ಉಮೇಶ್​ ಹೊರಲಿದ್ದಾರೆ.. ಈ ಸರಣಿಯಲ್ಲಾದ್ರೂ ಶಮಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.. ಇನ್ನು ಆಡುವ ಹನ್ನೊಂದರ ಬಳಗದಲ್ಲಿ ಇಬ್ಬರು ಸ್ಪಿನ್​ ಬೌಲರ್​​ಗಳಿಗೆ ಮತ್ತೇ ಸ್ಥಾನ ನೀಡುತ್ತಾ ಎಂಬ ಕಾತೂರ ಮನೆ ಮಾಡಿದೆ..
ಇನ್ನು ವೆಸ್ಟ್ ಇಂಡೀಸ್ ವಿರುದ್ಧ 2015 ರ ಬಳಿಕ ಇದುವರೆಗೂ ಒಂದೇ ಒಂದು ಏಕದಿನ ಪಂದ್ಯವನ್ನಾಡಿಲ್ಲ. ಹೀಗಾಗಿ 2 ವರ್ಷಗಳ ಬಳಿಕ ಏಕದಿನ ಸರಣಿಯನ್ನಾಡ್ತಿರೋ ಉಭಯ ತಂಡಗಳು ಗೆಲುವಿಗಾಗಿ ಸಖತ್ ಪ್ರಾಕ್ಟೀಸ್ ಮಾಡ್ತಿವೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನ ತಪ್ಪಿಸಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಕೂಡ ತವರಿನಲ್ಲೆ ಕೊಹ್ಲಿ ಪಡೆಯನ್ನ ಕಟ್ಟಿಹಾಕೋ ಲೆಕ್ಕಾಚಾರದಲ್ಲಿದೆ. ಅಲ್ದೇ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇಲ್ಲದಿದ್ರೂ, ಯುವ ಆಟಗಾರರು ಕೊಹ್ಲಿ ಪಡೆಯ ಸವಾಲನ್ನ ಮೆಟ್ಟಿನಿಲ್ಲೋಕೆ ರೆಡಿಯಾಗಿದ್ದಾರೆ.

Comments are closed.

Social Media Auto Publish Powered By : XYZScripts.com