ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಅಣ್ಣಾಮಲೈ ತಾತ್ಕಾಲಿಕ ನಿಯೋಜನೆ

ಮಂಗಳೂರು: ನಗರದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತ ಅಶ್ರಫ್ ಶವಯಾತ್ರೆಯಲ್ಲಿ ಉದ್ರಿಕ್ತರ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದೆ.

ಮಂಗಳೂರಿನ ಅಡ್ಯಾರ್ ಕಣ್ಣೂರು ಮಸೀದಿ ಬಳಿ ಅಶ್ರಫ್ ಶವಯಾತ್ರೆ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದಿದ್ದರೂ ಉದ್ರಿಕ್ತರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೂ ಕ್ಯಾರೆ ಎನ್ನದ ಕಿಡಿಗೇಡಿಗಳು ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವುದು ವಿಡೀಯೋನಲ್ಲಿ ಸೆರೆಯಾಗಿದೆ.

ಕಲ್ಲಡ್ಕದಲ್ಲಿ ಕೊಲೆ ಪ್ರಕರಣದ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಹಾಲಿ ಎಸ್‍ಪಿ ಭೂಷಣ್ ಗುಲಾಬ್‍ರಾವ್‍ ಬೊರಸೆ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ತೆರವಾದ ಸ್ಥಾನಕ್ಕೆ ಮಂಡ್ಯ ಎಸ್‍ಪಿ ಸುಧೀರ್‍ಕುಮಾರ್‍ ರೆಡ್ಡಿ ಅವರನ್ನು ನೇಮಿಸಲಾಗಿದೆ. ಬೆಂಜನಪದವಿಯಲ್ಲಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ಬೊರಸೆ ಅವರಿಗೆ ಅಣ್ಣಾಮಲೈ ಸಹಕರಿಸಿದ್ದರು. ಮೃತ ಅಶ್ರಫ್‍ ಮರಣೋತ್ತರ ಪರೀಕ್ಷೆ ವೇಳೆ ಅಣ್ಣಾಮಲೈ ಬಂದೋಬಸ್ತ್‍ ಕೈಗೊಂಡಿದ್ದರು.

ತಮ್ಮ ತಂಡದೊಂದಿಗೆ ಅಣ್ಣಾಮಲೈ ಫರಂಗಿಪೇಟೆಯಲ್ಲಿ ಮೊಕ್ಕಾಂ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ “ಎಸ್‍ಪಿ ಬೊರಸೆ ಕಲ್ಲಡ್ಕ ಘಟನೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದರು. ಆರ್‍ಎಸ್‍ಎಸ್‍ ಮುಖಂಡ ಡಾ.ಪ್ರಭಾಕರ್ ಭಟ್ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಎಸ್‍ಪಿಗೆ ತಾಕೀತು ಮಾಡಿದ್ದರು. ಈ ವಿಷಯ ವಿವಾದಕ್ಕೆ ಕಾರಣವಾಗಿತ್ತು. ಅಶ್ರಫ್ ಕೊಲೆ ನಂತರ ಪರಿಸ್ಥಿತಿ ನಿಭಾಯಿಸಲು ಅಣ್ಣಾಮಲೈ ಅವರಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್‍ ಒದಗಿಸಿದ್ದಾರೆ.

4 thoughts on “ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಅಣ್ಣಾಮಲೈ ತಾತ್ಕಾಲಿಕ ನಿಯೋಜನೆ

 • October 18, 2017 at 11:57 AM
  Permalink

  Can I simply say what a comfort to discover an individual who truly understands what they are discussing on the internet. You actually understand how to bring an issue to light and make it important. More people should read this and understand this side of your story. I was surprised you are not more popular because you definitely possess the gift.

 • October 20, 2017 at 11:15 PM
  Permalink

  Magnificent goods from you, man. I have be aware your stuff previous to and you’re just extremely fantastic. I actually like what you have got here, really like what you’re stating and the way in which you are saying it. You are making it entertaining and you still take care of to keep it wise. I can not wait to read much more from you. This is actually a great website.

 • October 25, 2017 at 9:41 AM
  Permalink

  If some one needs expert view concerning blogging and
  site-building afterward i recommend him/her to pay a
  visit this blog, Keep up the good work.

Comments are closed.