ಸಿಬಿಐ ಹೆಸರಿನಲ್ಲಿ ರೋಲ್‌ ಕಾಲ್: ಪೊಲೀಸರಿಂದ ಮೂವರ ಬಂಧನ

ಬೆಂಗಳೂರು: ಪೊಲೀಸರಿಗೆ ಸಮನಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡು ರೋಲ್‌ಕಾಲ್‌ ಮಾಡುತ್ತಿದ್ದ ಗುಂಪನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಅಪರಾಧ ತನಿಖಾ ದಳದ ಹೆಸರಿನಲ್ಲಿ ಇತ್ತೀಚೆಗಷ್ಟೇ ಸ್ಪಾ ಒಂದರ ಮೇಲೆ ದಾಳಿ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಅಲ್ಲಿನ ಮಹಿಳಾ ಸಿಬ್ಬಂದಿಯ ವಿಡಿಯೊ ಮಾಡಿ ಬೆದರಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರದೀಪ್‌ ಎಂಬಾತ ಈ ಗುಂಪಿನ ನಾಯಕನಾಗಿದ್ದು, ಆರು ಮಂದಿಯನ್ನು ಈತ ಕೆಲಸಕ್ಕಿಟ್ಟುಕೊಂಡಿದ್ದ. ಅಲ್ಲದೆ ಅವರಿಗೆ ಗುರುತಿನ ಚೀಟಿ ಮಾಡಿಸಿ ಸಿಬಿಐ ಹೆಸರಿನಲ್ಲಿ ರೇಡ್ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಪ್ರದೀಪ್‌ ತಲೆ ಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Comments are closed.