ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ಶಾರುಕ್‌ ಪುತ್ರಿ..? ಮಗಳ ಆಕ್ಟಿಂಗ್‌ ಸೈಫ್‌ಗೆ ಇಷ್ಟವಿಲ್ಲವಂತೆ..?

ಮುಂಬೈ: ಮುಂಬರುವ ವರ್ಷದಲ್ಲಿ ಅಂದ್ರೆ 2018ರಲ್ಲಿ ಬಾಲಿವುಡ್‌ ಸ್ಟಾರ್‌ ಕಿಡ್ಸ್‌ ತಮ್ಮ ತಮ್ಮ ಡೆಬ್ಯೂ ಮಾಡುವ ಮೂಲಕ ಚಿತ್ರ ರಸಿಕರ ಮುಂದೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಿದ್ದರಾಗಿರುವ ವಿಷಯ ಆಗಾಗ ಸುದ್ದಿಯಾಗುತ್ತಲೇ ಇದೆ. ಶಾಹೀದ್‌ ಕಪೂರ್‌ ತಮ್ಮ ಇಶಾನ್‌ ಕತ್ತರ್‌, ಶ್ರೀದೇವಿ ಮಗಳು ಜಾನ್ಹವಿ ಕಪೂರ್‌, ಸೈಫ್‌ ಅಲಿ ಖಾನ್ ಮಗಳು ಸರಾ ಅಲಿ ಖಾನ್‌ ಈ ಮುಂತಾದ ಸ್ಟಾರ್‌ ಕಿಡ್ಸ್‌ ಬಾಲಿವುಡ್‌  ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿ ಆಗಿರೋ ಸುದ್ದಿ ಸ್ವಲ್ಪ ಹಳೆಯದೇ ಆದರೂ, ಶಾರುಕ್‌ ಖಾನ್‌ ಮಗಳು ಸುಹಾನಾ ಖಾನ್‌ ಡೆಬ್ಯೂ ಕೂಡ ಸಿದ್ದವಾಗ್ತಿದೆ ಎಂಬ ಸುದ್ದಿ ಶಾರುಕ್‌ ಖಾನ್‌ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟಿಸಿದೆ.
ಸುಹಾನಾ ಖಾನ್‌ರ ಬಿಗ್‌ ಬಾಲಿವುಡ್‌ ಡೆಬ್ಯೂಗಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿವೆ ಎಂಬ ಸುದ್ದಿ ಹರಡಿದ್ದು, ಸ್ವತಃ ಶಾರುಕ್‌ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂಬುದು ಅವರ ಆಪ್ತ ವಲಯದಿಂದಲೇ ತಿಳಿದುಬಂದಿದೆ. ಮಗಳ ನಟನೆಯ ಬಗ್ಗೆ ಸ್ವತಃ ಶಾರುಕ್‌ ಮಾತನಾಡಿದ್ದು, ‘ನಟನಾ ಕೌಶಲ್ಯ ಸುಹಾನಾಳಲ್ಲಿ ಹುಟ್ಟಿನಿಂದ ಬಂದಿದೆ, ರಂಗಭೂಮಿಯ ಮೇಲೆಯೂ ನಾಟಕ ಪ್ರದರ್ಶನ ಮಾಡಿರುವ ಅನುಭವ ಅವಳಿಗಿದೆ. ಹಿರಿಯ ನಟಿ, ರಂಗಭೂಮಿ ಕಲಾವಿದೆ ಶಬಾನಾ ಅಜ್ಮಿ ಕೂಡ ಸುಹಾನ ಅಭಿನಯವನ್ನ ಹೊಗಳಿದ್ದಾರೆ. ರಂಗದ ಮೇಲೆ ಸುಹಾನ ನಟನೆಯನ್ನ ನೋಡಿ ದಂಗಾಗಿದ್ದಾರೆ’ ಎಂದಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಶಾರುಕ್‌ ಖಾನ್‌ರ ಆಪ್ತ ಸ್ನೇಹಿತ ಕರಣ್‌ ಜೋಹರ್‌, ಸುಹಾನಾ ಡೆಬ್ಯೂ ಸಿನಿಮಾಕ್ಕಾಗಿ ಸ್ಕ್ರಿಪ್ಟ್‌ ಸಿದ್ಧಗೊಳಿಸುತ್ತಿದ್ದಾರಂತೆ. ಇತ್ತೀಚೆಗೆ ಸುಹಾನ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದು, ಇಂದಿನ ಬಾಲಿವುಡ್‌ ನಟಿಯರಿಗೆ ಸೆಡ್ಡು ಹೊಡೆಯೋಕೆ ತಾಲೀಮು ನಡೆಸಿರುವ ಕುರುಹು ಅವರ ಮುಖದಲ್ಲಿ ಕಾಣಿಸುತ್ತಿದೆ ಅಂತ ಬಾಲಿವುಡ್‌ ಜಗತ್ತು ಮಾತನಾಡಿಕೊಳ್ಳುತ್ತಿದೆ.
ಇತ್ತೀಚೆಗಷ್ಟೇ, ಬಾಂದ್ರಾದಲ್ಲಿ ಶಾರುಕ್‌ ಖಾನ್‌ ಪತ್ನಿ ಗೌರಿ ಖಾನ್‌ ಇಂಟೀರಿಯರ್‌ ಡಿಸೈನ್‌ ಮಾಡಿರುವ ಹೊಸ ಫೈವ್‌ ಸ್ಟಾರ್‌ ಹೋಟೇಲ್‌ ಒಂದರ ಉದ್ಘಾಟನೆಯಲ್ಲಿ ತಂದೆಯೊಂದಿಗೆ ಪಾಲ್ಗೊಂಡಿದ್ದ ಸುಹಾನ ಆ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ನಟನೆಗೆ ಸಿದ್ದರಾಗಿರುವ ಆತ್ಮವಿಶ್ವಾಸ ಅವರ ಮುಖದಲ್ಲಿ ಕಾಣಿಸುತ್ತಿದ್ದು, ಮಾದಕವಾದ ದಿರಿಸಿನಲ್ಲಿ ಬಂದಿದ್ದ ಸುಹಾನ ಪತ್ರಕರ್ತರ ಕೋರಿಕೆಯಂತೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೆ, ಅಪ್ಪ ಶಾರುಕ್‌ ಅವರ ಜೊತೆಯಲ್ಲಿಯೇ ನಿಂತು ಮಗಳಿಗೆ ಆಧಾರವಾದರು.
ಆದರೆ, ಸೈಫ್‌ ಅಲಿ ಖಾನ್‌, ಮತ್ತು ಅವರ ಮಾಜಿ ಪತ್ನ ಅಮೃತಾ ಸಿಂಗ್‌ ಮಗಳು ಸರಾ ಅಲಿ ಖಾನ್‌ ಕೂಡ ಗ್ರ‍್ಯಾಂಡ್‌ ಎಂಟ್ರಿ ಕೊಡೋಕೆ ತಾಲೀಮು ನಡೆಸುತ್ತಿದ್ದರೆ, ಸ್ವತಃ ಸೈಫ್‌ ಗೆ ಮಗಳು ನಟನಾ ವೃತ್ತಿಯನ್ನೇ ಹಿಂಬಾಲಿಸುವುದು ಇಷ್ಟವಿಲ್ಲವಂತೆ. ಹೀಗಂತ ಸ್ವತಃ ಸೈಫ್‌ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಗಳು ಸರಾ ಆಯ್ದುಕೊಂಡಿರುವ ಕೆರಿಯರ್‌ ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ನ್ಯೂಯಾರ್ಕ್‌‌ನ ಕೋಲಂಬಿಯಾ ಯೂನಿವರ್ಸಿಟಿಯಲ್ಲಿ ಪದವಿ ಅಭ್ಯಾಸ ಮಾಡಿ ಬಂದಿರುವ ಸರಾ ಅಲ್ಲಿಯೇ ತನ್ನ ಕೆರಿಯರ್‌ ರೂಪಿಸಿಕೊಳ್ಳಲಿ ಎಂಬುದು ಸೈಫ್‌ ಆಸೆ.  ಅವಳು ಓದುವುದಾದರೆ ನನ್ನ ಪ್ರೋತ್ಸಾಹ ಇದ್ದೇ ಇದೆ, ಅವಳು ಎಷ್ಟೇ ಓದಿದರೂ ತಾನು ಓದಿಸುತ್ತೇನೆ ಎಂಬ ಸೈಫ್‌ ಪ್ರಸ್ತಾಪವನ್ನ  ಮಾಜಿ ಪತ್ನ ಅಮೃತಾ ಸಿಂಗ್‌ ತಳ್ಳಿ ಹಾಕಿದ್ದು, ಮಗಳನ್ನ ನಟಿ ಮಾಡುತ್ತೇನೆ ಎಂಬ ಉತ್ಸಾಹದಲ್ಲಿ ಅವರಿದ್ದಾರೆ.  ಅಮ್ಮ ಅಮೃತಾ ಪ್ರೋತ್ಸಾಹದಿಂದ ಸರಾ ನಟಿಯಾಗಲು ಒಪ್ಪಿಕೊಂಡಿದ್ದು, ಈಗ ಮಗಳ ಕೆರಿಯರ್‌ ವಿಚಾರದಲ್ಲಿ ಸೈಫ್‌ ಮತ್ತವರ ಮಾಜಿ ಹೆಂಡತಿ ಅಮೃತಾ ಸಿಂಗ್‌ ಮಧ್ಯೆ ಜಟಾಪಟಿ ಆರಂಭವಾಗಿದೆ.
ತಮ್ಮ ಹೆತ್ತವರ ಗಳಿಸಿಕೊಂಡ ಹೆಸರು, ಪ್ರಚಾರವನ್ನ ನೋಡುತ್ತಾ ಬೆಳೆದಿರುವ ಸ್ಟಾರ್‌ ಕಿಡ್ಸ್‌ ನಟನಾ ವೃತ್ತಿಯಂಥ ಆಕರ್ಷಕ ವೃತ್ತಿಯನ್ನ ಬಿಟ್ಟು ದೂರ ಸರಿಯುವುದು ಅತ್ಯಂತ ಅಪರೂಪ. ಜನರ ಮುಂದೆ ತಾವೂ ನಟನೆ ಮಾಡಿ ಹೆಸರು ಗಳಿಸಬೇಕು ಎಂಬ ಆಸೆ ಅವರಲ್ಲಿ ಇದ್ದೇ ಇರುತ್ತೆ. ಅಂತೆಯೇ ಶಾರುಕ್‌ ಪುತ್ರಿ, ಸೈಫ್‌ ಮಗಳು, ಶ್ರೀದೇವಿ ಮಗಳು ಮತ್ತು ಶಾಹಿದ್‌ ಸಹೋದರ ಮುಂದಿನ ವರ್ಷ್ ಗ್ರ‍್ಯಾಂಡ್ ಎಂಟ್ರಿ ಕೊಡುವವರಿದ್ದಾರೆ. ಅವರಲ್ಲಿ ಯಾರ‍್ಯಾರನ್ನ ಬಣ್ಣದ ಲೋಕ ಅಪ್ಪಿಕೊಳ್ಳುತ್ತೆ, ಯಾರ‍್ಯಾರು ಸೋತು ಹಿಂದಿರುಗುತ್ತಾರೆ ಅನ್ನೋದು ಸದ್ಯತ ಕುತೂಹಲ ಅಷ್ಟೆ.

2 thoughts on “ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ಶಾರುಕ್‌ ಪುತ್ರಿ..? ಮಗಳ ಆಕ್ಟಿಂಗ್‌ ಸೈಫ್‌ಗೆ ಇಷ್ಟವಿಲ್ಲವಂತೆ..?

  • October 16, 2017 at 5:03 PM
    Permalink

    Thank you a lot for providing individuals with remarkably breathtaking chance to check tips from this site. It can be so cool and also packed with a good time for me and my office peers to search your web site no less than three times every week to study the fresh things you have. And of course, I’m so actually astounded with the exceptional creative concepts served by you. Some 1 areas in this posting are definitely the most impressive we have ever had.

Comments are closed.

Social Media Auto Publish Powered By : XYZScripts.com