ಅಮೇರಿಕದಿಂದ ಭಾರತದ ರಾಯಭಾರಿಯಾಗಿ ಕೆನೆಥ್ ಜೋಸ್ಟರ್ ಆಯ್ಕೆ

ಅಮೇರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಾಯಭಾರಿಯನ್ನಾಗಿ ಅವರ ಆತ್ಮೀಯನಾಗಿರುವ ಕೆನೆಥ್ ಜೋಸ್ಟರ್ ಅವರನ್ನು ನೇಮಿಸಿದ್ದಾರೆ. ಜೋಸ್ಟರ್‍ ಮಾಜಿ ರಿಚರ್ಡ್ ವರ್ಮಾ ಅವರ ಸ್ಥಾನವನ್ನು ಪಡೆಯಲಿದ್ದಾರೆ. ಅಮೇರಿಕದ ರಾಷ್ಟ್ರಪತಿ ಕಾರ್ಯಾಲಯವಾದ ವೈಟ್ ಹೌಸ್‍ನಿಂದ ಇದನ್ನು ಅಂಗೀಕರಿಸಿದೆ. ಜೋಸ್ಟರ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಾರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳನ್ನು ಮತ್ತು ರಾಷ್ಟ್ರೀಯ ಆರ್ಥಿಕ ಕೌನ್ಸಿಲ್‍ನಲ್ಲಿ ಡೆಪ್ಯೂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ವೈಟ್ ಹೌಸ್‍ನ ಉಪ ಪ್ರವರ್ತಕ ಲಿಂಡಸ್ ಈ ವಾಲ್ಟರ್ಸ್ ಈ ಸುದ್ದಿಗೆ ಪುಷ್ಠಿ ನೀಡಿದ್ದಾರೆ. ಜೋಸ್ಟರ್ ರಾಯಭಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ವೈಟ್ ಹೌಸ್‍ನಲ್ಲಿ ಜೋಸ್ಟರ್ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಅವರನ್ನು ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗುತ್ತಿದೆ. ಈ ನಿರ್ಣಯವನ್ನು ಅಮೇರಿಕದಲ್ಲಿ ವಾಸಿಸುತ್ತಿರುವ ಅನೇಕ ಭಾರತೀಯರು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಐಲೆ ಟೆಲಿಸ್ ಎಂಬ ವಿಶೇಷ ತಜ್ಞ ಮಾತನಾಡಿ, ಕೆನೆಥ್ ಜೋಸ್ಟರ್ ಭಾರತವನ್ನು ಚೆನ್ನಾಗಿ ಅರಿತಿದ್ದಾರೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಭಾರತೀಯರು ಜೋಸ್ಟರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದಾರೆ. ಅವರು ಬಹುತೇಕ ಭಾರತೀಯರಿಗೆ ಪರಿಚಯಸ್ಥರು. ಅಲ್ಲದೇ ರಿಚರ್ಡ್ ವರ್ಮಾ ಈ ಹುದ್ದೆಯನ್ನು ನಿಭಾಯಿಸಿದ ಮೊದಲ ಭಾರತೀಯ ಅಮೇರಿಕದ ಪ್ರಜೆಯಾಗಿದ್ದರು. ಟ್ರಂಪ್ ಅಧ್ಯಕ್ಷರಾದ ನಂತರ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

One thought on “ಅಮೇರಿಕದಿಂದ ಭಾರತದ ರಾಯಭಾರಿಯಾಗಿ ಕೆನೆಥ್ ಜೋಸ್ಟರ್ ಆಯ್ಕೆ

  • October 16, 2017 at 4:41 PM
    Permalink

    I in addition to my guys were found to be taking note of the great tricks found on the website while instantly I got a horrible feeling I never expressed respect to the site owner for those secrets. Those boys ended up consequently excited to read through them and have now definitely been using these things. Thanks for getting considerably helpful and then for pick out such nice ideas most people are really desperate to know about. My personal sincere regret for not expressing appreciation to sooner.

Comments are closed.

Social Media Auto Publish Powered By : XYZScripts.com