ಉತ್ತರ ಪ್ರದೇಶ : 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಸ್ಥಳಿಯರಿಂದ ಆರೋಪಿಯ ಹತ್ಯೆ..!

ಉತ್ತರ ಪ್ರದೇಶ : 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆಗೈದ ಗಟನೆ ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆ ಭೀಕಮ್ ಪುರ್ ಗ್ರಾಮದಲ್ಲಿ ನಡೆದಿದೆ.   ಆರೋಪಿ ಅರವಿಂದ್ (32), ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ತಿಂಗಳ ಹಿಂದೆ ಬಾಲಕಿಯ ತಂದೆ ಕೆಲಸದಿಂದ ತೆಗೆದುಹಾಕಿದ ನಂತರ ಆರೋಪಿ ಹಳ್ಳಿಯಲ್ಲಿ ಕಾಣಿಸಿಕೊಂಡಿರಲಿಲ್ಲ.  ಕೆಲದಿನಗಳ ನಂತರ ಮತ್ತೆ ಬಂದ ಅರವಿಂದ್, ಬಾಲಕಿಗೆ ಪ್ರಲೋಭನವೊಡ್ಡಿ ಸಮೀಪದ ಹೊಲಕ್ಕೆ ಕರೆದುಕೊಂಡು ಹೊಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಆರೋಪಿಯನ್ನು ಮನಬಂದಂತೆ ಥಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೋಲೀಸರು ಆರೋಪಿಯನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರೂ, ಅಲ್ಲಿಯೇ ಆತ ಕೊನೆಯುಸಿರೆಳೆದಿದ್ದಾನೆ.

 

Comments are closed.

Social Media Auto Publish Powered By : XYZScripts.com