ಜಬ್ ಹೈರಿ ಮೆಟ್ ಸೇಜಲ್ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ

ನವದೆಹಲಿ: ಶಾರುಕ್‍ ಖಾನ್ ಮತ್ತು ಅನುಷ್ಕಾ ಶರ್ಮಾ ನಟಿಸಿರುವ “ಜಬ್ ಹೈರಿ ಮೆಟ್ ಸೇಜಲ್” ಚಿತ್ರದ ಹಾಡುಗಳ ಆಡಿಯೋ ಬಿಡುಗಡೆಗೊಂಡಿದೆ. ರಾಧಾ ಎಂಬ ಹಾಡಿಗೆ ಪಂಜಾಬಿ ಟಚ್ ನೀಡಲಾಗಿದ್ದು, ಈ ಹಾಡು ಚಾರ್ಟಬಸ್ಟರ್‍ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಎಂಬ ನಿರೀಕ್ದುಷೆಯನ್ನು ಶಾರುಕ್‍ ತಮ್ಮ ಪ್ರೊಡಕ್ಷನ್ ಟ್ವಿಟ್ಟರ್‍ ಪೇಜ್‍ನಲ್ಲಿ ವ್ಯಕ್ತಪಡಿಸಿದ್ದಾರೆ.

 

ಹಾಡಿನ ಆರಂಭದಲ್ಲಿ ಶಾರುಕ್‍ಖಾನ್‍, ಅನುಷ್ಕಾಳಿಗೆ ಪಂಜಾಬ್ ಹಾಡುಗಾರರು ಯಾಕೆ ಏರಿದ ಧ್ವನಿಯಲ್ಲಿ ಹಾಡುತ್ತಾರೆ ಎಂಬುದನ್ನು ತಿಳಿಸಿದ್ದಾರಂತೆ. ಹಾಡನ್ನು ಕಾಮಿಲ್‍ ಬರೆದಿದ್ದಾರೆ. ಗಾಯಕ ಸುನಿಧಿ ಚೌಹಾನ್ ಮತ್ತು ಶಾಹೀದ್ ಮಾಲ್ಯ ಇಂಪಾಗಿ ಹಾಡುಗಳನ್ನು ಹಾಡಿದ್ದರೆ, ಸಂಗೀತ ಪ್ರೀತಮ್ ಅವರದ್ದು. ಈ ಚಿತ್ರದಲ್ಲಿ ಶಾರುಕ್ ಪಂಜಾಬಿ ಹುಡುಗನಾಗಿ ಮತ್ತು ಅನುಷ್ಕಾ ಗುಜರಾತ್ ಬೆಡಗಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಶಾರುಕ್ ಪಂಜಾಬಿನ ಮಾರ್ಗದರ್ಶಿಯಾಗಿ ಹರವಿಂದರ್ ಸಿಂಹ ನೆಹ್ರಾ ಪಾತ್ರದಲ್ಲಿ ನಟಿಸಿದ್ದಾರೆ. ಅನುಷ್ಕಾ ಗುಜರಾತಿ ಮೂಲದ ಸುಂದರ ಯುವತಿಯಾಗಿ ಸೇಜಲ್ ಪಾತ್ರದಲ್ಲಿ ನಟಿಸಿದ್ದಾರೆ. ಸೇಜಲ್ ಯೂರೋಪ್ ಪ್ರವಾಸಕ್ಕೆ ಹೋದಾಗ ಹರವಿಂದರ್‍ನನ್ನು ಭೇಟಿಯಾಗುತ್ತಾಳೆ. ನಂತರ ಇಬ್ಬರೂ ಹೇಗೆ ಪ್ರೇಮದಲ್ಲಿ ಬಂಧಿಯಾಗುತ್ತಾರೆ ಎಂಬುದರಿಂದ ಕಥೆ ಮುಂದಿನ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ.

One thought on “ಜಬ್ ಹೈರಿ ಮೆಟ್ ಸೇಜಲ್ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ

Comments are closed.

Social Media Auto Publish Powered By : XYZScripts.com