ಜೂನ್‌ 21 : ಅಂತಾರಾಷ್ಟ್ರೀಯ ಯೋಗ ದಿನ …

ಸರಿಸುಮಾರು 5 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ,  ಪುರಾತನ ಭಾರತೀಯ ಸಂಸ್ಕೃತಿಯನ್ನ ಇಂದಿಗೂ ಪಸರಿಸುತ್ತಿರುವ ಯೋಗಕ್ಕೆ ಇಡೀ ಜಗತ್ತು ತಲೆ ಬಾಗುವ ದಿನ ಇಂದು. ವಿಶ್ವ ಸಂಸ್ಥೆಯಿಂದ ಘೋಷಿಸಲ್ಪಟ್ಟ ಮಹತ್ವದ ದಿನ. ಭಾರತೀಯರ ಪಾಲಿಗೆ  ಹೆಮ್ಮೆಯ ದಿನ. ಪುರಾತನ ಭಾರತ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗಾಗಿ ನೀಡಿರುವ ಅಮೂಲ್ಯವಾದ ಈ ಕೊಡುಗೆಯನ್ನ ವಿಶ್ವಸಂಸ್ಥೆ ಇಡೀ ಜಗತ್ತಿಗೆ ತಲುಪಿಸುವುದಕ್ಕಾಗಿ ಜಾರಿಗೆ ತಂದಿರುವ ದಿನ. ಅದುವೇ ‘ಅಂತಾರಾಷ್ಟ್ರೀಯ ಯೋಗ ದಿನ’.  
ಪ್ರತಿದಿನದ ಯೋಗಾಭ್ಯಾಸದ ಪರಿಣಾಮವನ್ನ ಜಗತ್ತಿಗೆ ತಿಳಿಸುವುದರ ಮೂಲಕ, ಸುದೃಢ ಜಗತ್ತನ್ನ ಕಟ್ಟಬಹುದು ಎಂಬ ಕಾರಣಕ್ಕೆ ವಿಶ್ವ ಸಂಸ್ಥೆ ಯೋಗ ದಿನವನ್ನ ಸಾರಿದೆ.  ಈ ದಿನದಂದು ಯುಎಸ್ಎ, ಚೀನಾ, ಕೆನಡಾ ಸೇರಿದಂತೆ 170 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನವನ್ನ ಆಚರಿಸಲಾಗುತ್ತದೆ.  ಯೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಎಲ್ಲ ದೇಶಗಳಲ್ಲಿ ಯೋಗ ತರಬೇತಿ ಶಿಬಿರಗಳು, ಯೋಗ ಸ್ಪರ್ಧೆಗಳು, ಯೋಗ ಸಾಧಕರಿಂದ ಭಾಷಣ ಕಾರ್ಯಕ್ರಮ ಈ ಮುಂತಾದ ಚಟುವಟಿಕೆಗಳು ನಡೆಯುತ್ತವೆ. ನಿಯಮಿತವಾದ ಯೋಗದಿಂದ ಉತ್ತಮ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಎಂಬ ಸತ್ಯವನ್ನ ಜಗತ್ತಿನಾದ್ಯಂತ ಸಾರಲಾಗುತ್ತದೆ. ಯೋಗ, ಧ್ಯಾನ, ಚರ್ಚೆಗಳು, ಸಭೆಗಳು, ಚರ್ಚೆಗಳು, ಯೋಗದ ಮೌಲ್ಯವನ್ನ ಸಾರುವ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ವಿಶ್ವಾದ್ಯಂತ ಯೋಗಾ ಡೇ ಆಚರಿಸಲಾಗುತ್ತದೆ.
2014 ರ ಸೆಪ್ಟೆಂಬರ್ 27ರಂದು ಅಮೆರಿಕಾಕ್ಕೆ ಭೇಟಿಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಮಾರ್ಮಿಕವಾಗಿ ಮಾತನಾಡಿದ್ದರು.  ‘ಯೋಗ’ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಯೋಗ ಎಂಬುದು ಮಾನವನ ಆರೋಗ್ಯಕಾರಿ ಚಿಂತನೆ ಮತ್ತು ಕ್ರಿಯೆ.  ಇದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯದ ಸಂಕೇತ.  ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನ. ಯೋಗ ಅಂದರೆ ಕೇವಲ ವ್ಯಾಯಾಮ ಮಾತ್ರವಲ್ಲ ಇದು ಮಾನವನ ಮನಸ್ಸು ಮತ್ತು ದೇಹದ ಆರೋಗ್ಯವನ್ನೇ ಕೇಂದ್ರೀಕರಿಸಿದ ಸಮಗ್ರ ಕಲೆ. ಮನುಷ್ಯ ಮನುಷ್ಯರೊಂದಿಗಿನ ಏಕತೆ ಬೆಸೆಯಬಲ್ಲದು. ನಮ್ಮ ಜೀವನಶೈಲಿಯನ್ನೇ ಬದಲಿಸುವ ಮೂಲಕ ನಮ್ಮೊಳಗಿನ  ಪ್ರಜ್ಞೆಯನ್ನ ಎಚ್ಚರಪಡಿಸುವ ಕಲೆ ಯೋಗ. ಹವಾಮಾನ ವೈಪರೀತ್ಯದಲ್ಲಿಯೂ ಆರೋಗ್ಯವಂತ ಜಗತ್ತಿನ ಸೃಷ್ಠಿಗಾಗಿ ಅತಿ ದೊಡ್ಡ ದಿನವಾದ ಜೂನ್‌ ೨೧ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸೋಣ’ ಎಂದು ಕರೆ ನೀಡಿದ್ದರು.
ವಿಶ್ವದ ಜೀವನಶೈಲಿಯನ್ನು ಧನಾತ್ಮಕವಾಗಿ ಬದಲಿಸುವ ಸಲುವಾಗಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನವನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರು. ಜಗತ್ತಿನ ಹಲವೆಡೆ ಹವಾಮಾನ ವೈಪರೀತ್ಯದಿಂದಲೇ ಆರೋಗ್ಯ ಹದಗೆಡುತ್ತಿದ್ದು, ಅಂಥ ಸಂದರ್ಭವನ್ನ ಎದುರಿಸಲು ಸಹಕಾರಿಯಾಗಿರುವ ಯೋಗವನ್ನ ಅಳವಡಿಸಿಕೊಳ್ಳಲು ವಿಶ್ವ ನಾಯಕರಿಗೇ ಸೂಚಿಸಿದ್ದರು. ಜೂನ್‌ 21 ವರ್ಷದ ಅತಿದೊಡ್ಡ ಹಗಲನ್ನ ಹೊಂದಿರುವ ದಿನವಾಗಿರುವ ಕಾರಣ ವಿಶ್ವ ಯೋಗ ದಿನದ ಆಚರಣೆಗೆ ಈ ದಿನವೇ ಸೂಕ್ತ ಎಂದಿದ್ದರು.  ನರೇಂದ್ರ ಮೋದಿಯವರ ಸಲಹೆ ಸ್ಪಂದಿಸಿದ ವಿಶ್ವಸಂಸ್ಥೆ 2014 ರ ಡಿಸೆಂಬರ್ 11 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನ ಪ್ರತಿವರ್ಷ ಜೂನ್ 21ರಂದು ಆಚರಿಸುವ ನಿರ್ಣಯವನ್ನ ತೆಗೆದುಕೊಳ್ಳಲಾಯ್ತು.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನ ಘೋಷಿಸಿದ ಕ್ಷಣ ಭಾರತೀಯರ ಪಾಲಿಗೆ ಮಹತ್ತರವಾದ ಕ್ಷಣ.  ಪ್ರಧಾನಿ ಮೋದಿ ನೀಡಿದ ಕರೆಗೆ ಓಗುಟ್ಟು ಜೂನ್‌ 21ರ ದಿನವನ್ನೇ ವಿಶ್ವ ಯೋಗ ದಿನವೆಂದು ಘೋಷಿಸಲು ಕೇವಲ 90 ದಿನಗಳ ಅವಧಿಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದು, ವಿಶ್ವಸಂಸ್ಥೆಯ ಇತಿಹಾಸದಲ್ಲಿಯೇ ಮೊದಲು ಎನ್ನಲಾಗಿದೆ.  ಇದುವರೆಗೆ 90 ದಿನಗಳ ಅವಧಿಯಲ್ಲಿ ಯಾವುದೇ ದೇಶದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಅಳವಡಿಸಿಕೊಂಡಿರಲಿಲ್ಲ ಆದರೆ, ವಿಶ್ವದ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಠಿಯಿಂದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಿಂದ ಗ್ಲೋಬಲ್ ಹೆಲ್ತ್ ಮತ್ತು ಫಾರಿನ್ ಪಾಲಿಸಿ ಅಡಿಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ವಿಶ್ವ ಯೋಗ ದಿನಾಚರಣೆಯ ಉದ್ದೇಶಗಳು: –

1. ಯೋಗದ ಅದ್ಭುತ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ವಿಶ್ವಕ್ಕೆ ಸಾರುವುದು.
2 ಪ್ರಪಂಚದಾದ್ಯಂತ ವಿಜ್ಞಾನಕ್ಕೆ ಸವಾಲು ನೀಡುತ್ತಿರುವ ರೋಗಗಳ ಪ್ರಮಾಣವನ್ನು ಕಡಿಮೆ ಮಾಡುವುದು
3 ಏಕತಾನತೆಯ ಜೀವನದಲ್ಲಿ ಒತ್ತಡದಲ್ಲಿರುವ ಜನರಿಗೆ ನೆಮ್ಮದಿಯ ಆರೋಗ್ಯಕರ ಜೀವನ ಶೈಲಿಯತ್ತ ಸೆಳೆಯುವುದು
4 ಪ್ರಪಂಚದಾದ್ಯಂತ ಶಾಂತಿಯನ್ನ ಹರಡುವುದು
5 ಯೋಗದ ಮೂಲಕ ಜನರಲ್ಲಿ ಜಾಗತಿಕ ಸಮನ್ವಯವನ್ನು ಬಲಪಡಿಸುವುದು
6 ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಬಗ್ಗೆ ಮತ್ತು ಅದರ ಪರಿಹಾರಗಳನ್ನು ಜನರಿಗೆ ತಿಳಿಸುವುದು
7. ಅನಾರೋಗ್ಯಕರ ಅಭ್ಯಾಸಗಳಿಂದ ಜನರನ್ನ ರಕ್ಷಿಸಿ, ಆರೋಗ್ಯಕಾರಿ ಜೀವನ ಪದ್ಧತಿಯತ್ತ ಸೆಳೆಯುವುದು

8 thoughts on “ಜೂನ್‌ 21 : ಅಂತಾರಾಷ್ಟ್ರೀಯ ಯೋಗ ದಿನ …

 • October 24, 2017 at 12:32 PM
  Permalink

  Nice read, I just passed this onto a colleague who was doing some research on that. And he actually bought me lunch since I found it for him smile So let me rephrase that: Thanks for lunch!

 • October 24, 2017 at 1:03 PM
  Permalink

  I’ve learn several good stuff here. Certainly worth bookmarking for revisiting. I wonder how much attempt you place to create such a excellent informative site.

 • October 24, 2017 at 1:29 PM
  Permalink

  One more thing. I believe that there are numerous travel insurance internet sites of dependable companies that permit you to enter your trip details to get you the rates. You can also purchase the actual international holiday insurance policy on-line by using your current credit card. All you have to do is to enter the travel particulars and you can begin to see the plans side-by-side. Simply find the plan that suits your financial allowance and needs and then use your credit card to buy the item. Travel insurance on the web is a good way to take a look for a dependable company regarding international travel insurance. Thanks for expressing your ideas.

 • October 25, 2017 at 9:48 AM
  Permalink

  It is in reality a nice and useful piece of information. I am happy that you simply shared this helpful information with us. Please stay us informed like this. Thank you for sharing.

 • October 25, 2017 at 9:49 AM
  Permalink

  I simply couldn’t go away your website before suggesting that I actually loved the standard info an individual supply on your visitors? Is gonna be back ceaselessly in order to inspect new posts

 • October 25, 2017 at 11:19 AM
  Permalink

  It’s in reality a great and useful piece of info. I am glad that you simply shared this useful information with us. Please keep us informed like this. Thank you for sharing.

Comments are closed.

Social Media Auto Publish Powered By : XYZScripts.com