World Yoga Day : ಪ್ರಾಣಿಗಳ ಯೋಗ, ಆರೋಗ್ಯದ ಗುಟ್ಟು ನೀವೇನು ಬಲ್ಲಿರಿ….

 

ಈಗ ಏನಿದ್ರೂ ಯೋಗ ಟ್ರೆಂಡ್. ದೇಹದ ಆರೋಗ್ಯ, ಫಿಟ್ ನೆಸ್‍, ಸೌಂದರ್ಯವರ್ಧನೆಗಾಗಿ ಯೋಗ ಮಾಡೋದು, ವ್ಯಾಯಾಮ ಮಾಡೋದು ರೂಢಿಯಾಗಿದೆ. ಆಯುರ್ವೇದದಲ್ಲಿ ಬಹಳ ವರ್ಷಗ ಹಿಂದೆ ರೂಢಿಯಲ್ಲಿದ್ದ ಯೋಗ ಇಂದಿನ ಜೀವನ ಶೈಲಿಗೆ ಬೇಕೇ ಬೇಕು ಎಂಬಂತಾಗಿದೆ. ಯೋಗ ಮಾಡಿದ್ರೆ ಮನುಷ್ಯ ಆರೋಗ್ಯವಾಗಿರ್ತಾನೆ. ಹೆಚ್ಚು ಆಯುಷ್ಯವಂತನಾಗ್ತಾನೆ ಅನ್ನೋದು ನಮಗೆಲ್ಲರಿಗೂ ಗೊತ್ತಿರೋದೆ. ನಮಗೆ ಇರುವಷ್ಟು ಫಿಟ್‍ನೆಸ್‍ ಕಾಳಜಿಗಿಂತಲೂ ಪ್ರಾಣಿಗಳಲ್ಲಿ ದೈಹಿ ಆರೋಗ್ಯದ ಕಾಳಜಿ ಹೆಚ್ಚಿರುತ್ತದೆ. ಒಂದು ದಿನ ನಾವು ಸೋಮಾರಿಗಳಾಗಿ ಯೋಗ ಮಾಡದೇ ಇರಬಹುದು. ಆದರೆ ಪ್ರಾಣಿಗಳು ಒಂದು ದಿನಕ್ಕೂ ಹಾಗಿರುವುದಿಲ್ಲ.

ಮನುಷ್ಯನಿಗಿಂತ ತುಸು ಹೆಚ್ಚೇ ಸೌಂದರ್ಯಪ್ರಜ್ಞೆ ಹೊಂದಿರುವ ಪ್ರಾಣಿಗಳು ಯೋಗದ ಭಂಗಿಗಳನ್ನು ತೋರಿಸಿದರೆ ನಮಗಿಂತ ಹೆಚ್ಚು ಖುಷಿ ಪಡುವವರಾದರೂ ಯಾರು? ಬೆಕ್ಕು ಆಕಳಿಸುವುದು, ಮುಂದಿನ ಕಾಲೆರಡನ್ನು ಮೇಲೆತ್ತಿ ಓಡಿ ಬರುವ ನಾಯಿ, ಮಂಡಿಯೂರಿ ಸೊಂಡಿಲೇರಿಸುವ ಆನೆ, ಲಗಾಟೆ ಹೊಡಿಯುವ ಅಳಿಲು, ಮನುಷ್ಯನಂತೆ ಕೈಕಾಲುಗಳನ್ನಾಡಿಸುವ ಚಿಂಪಾಂಜಿ, ತನ್ನೆರಡು ಕಾಲುಗಳಿಗೆ ಮುಖ ತಾಗಿಸುವ ಭಂಗಿಯಲ್ಲಿ ಕುಳಿತ ಪಾಂಡಾ….ಹೀಗೆ ಹಲವು ಪ್ರಾಣಿಗಳು ನಮ್ಮ ನಡುವೆ ಇದ್ದುಕೊಂಡೇ ಯೋಗ ಮಾಡುತ್ತವೆ.

ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೆಗೆಯುವುದು, ಜಿಗಿಯುವುದು, ಆಹಾರಕ್ಕಾಗಿ ಬೇಟೆಯಾಡುವುದು, ಸುತ್ತುವುದು, ತಮಗೆ ಅನುಕೂಲ ಮತ್ತು ಸೂಕ್ತ ಸ್ಥಳವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಇತ್ತೀಚೆಗೆ ಮನೆಗಳಲ್ಲಿ ಸಾಕುವ ನಾಯಿ ಮತ್ತು ಬೆಕ್ಕುಗಳಿಗೆ ಶಿಸ್ತು, ಯೋಗ ಕಲಿಸುವುದು, ಅಪರಿಚಿತರು ಮನೆಗೆ ಬಂದರೆ ಸಂಜ್ಞೆ ಮಾಡುವ ತಂತ್ರಗಳನ್ನು, ಬೆಳಗ್ಗೆ ವಾಯುವಿಹಾರದ ತರಬೇತಿಯನ್ನೂ ಪ್ರಾಣಿಗಳಿಗೆ ಕೊಡಲಾಗುತ್ತದೆ.

 

ಪ್ರಾಣಿಗಳು ಮಾಡುವ ಕೆಲವು ಭಂಗಿಗಳು ನಮಗೆ ಸಂತಸ ಮತ್ತು ಮನರಂಜನೆ ಉಂಟು ಮಾಡುತ್ತವೆ. ಆದರೆ ಅವುಗಳ ಮೈ ಮಣಿಸುವ ಪರಿಯ ಯಾತನೆ ಅವುಗಳಿಗೆ ಮಾತ್ರ ಗೊತ್ತು. ನಾಯಿಯೊಂದು ಕತ್ತನ್ನು ಕೆಳಗೆ ಮೇಲೆ ಮಾಡುವುದು, ಹಿಂಗಾಲುಗಳನ್ನು, ಮುಂಗಾಲುಗಳನ್ನು ಅಗಲಿಸಿ ಕೂರುವುದು, ನಿಲ್ಲುವುದು, ಕಾಲನ್ನು ಎತ್ತಿ ತಲೆಯ ಹಿಂಭಾಗದಲ್ಲಿಟ್ಟುಕೊಳ್ಳುವುದು ಸೇರಿದಂತೆ ನಾನಾ ಭಂಗಿಗಳನ್ನು ಮಾಡುತ್ತದೆ. ಪ್ರಾಣಿಗಳು ಮಾಡುವ ಯೋಗದ ಬಗ್ಗೆ ಹೇಳುವುದಕ್ಕಿಂತ ನೋಡುವುದೇ ಆನಂದ. ಸಹಜವಾಗಿ ಕೈಕಾಲುಗಳನ್ನಾಡಿಸುತ್ತ ಪ್ರಾಣಿಗಳ ಆಟವೇ ನೋಡಲು ಅಂದ…ಅದೇ ಅವುಗಳ ಆರೋಗ್ಯದ ಒಳಗುಟ್ಟು…

 

ಪ್ರಾಣಿಗಳು ಮಾಡುವ ಕೆಲವು ಆಸನಗಳಿಂದಲೇ ಯೋಗದ ನಾನಾ ಭಂಗಿಗಳಿಗೆ ಅಥವಾ ಪ್ರಮುಖ ಭಮಗಿಗಳಿಗೆ ಪ್ರಾಣಿಗಳ ಹೆಸರನ್ನೇ ಇಡಲಾಗಿದೆ. ಗರುಡಾಸನ, ಮಕ್ರಾಸನ, ಗೋಮುಖಾಸನ, ಸಿಂಹಾಸನ, ಮತ್ಸ್ಯಾಸನ…

ಹೀಗೆ ಒಂದೊಂದು ಆಸನಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾವು ಹೊಂದುತ್ತೇವೆ. ಮೂಳೆ, ಮಾಂಸ, ಮಜ್ಜೆ, ಕೈ, ಕಾಲು, ಕಣ್ಣು, ಮುಖ ಹೀಗೆ ದೇಹದ ಪ್ರತಿ ಅಂಗಕ್ಕೂ ವ್ಯಾಯಾಮ ಬೇಕು….

ಇವು ಬಾಬಾ ರಾಮದೇವ್, ಶಿಲ್ಪಾ ಶೆಟ್ಟಿ ಗೆ ಸ್ಪರ್ದೆ ಒಡ್ಡುತ್ತಿಲ್ಲ, ಇವು ಇರೋದೆ ಹಾಗೆ…

10 thoughts on “World Yoga Day : ಪ್ರಾಣಿಗಳ ಯೋಗ, ಆರೋಗ್ಯದ ಗುಟ್ಟು ನೀವೇನು ಬಲ್ಲಿರಿ….

 • October 20, 2017 at 10:00 PM
  Permalink

  Hi, I think your blog might be having browser compatibility issues.
  When I look at your site in Safari, it looks fine however when opening
  in Internet Explorer, it has some overlapping
  issues. I simply wanted to give you a quick heads up!

  Besides that, excellent website!

 • October 20, 2017 at 11:10 PM
  Permalink

  Hi there, i read your blog from time to time and i own a similar one and i was just wondering if you get a lot
  of spam comments? If so how do you reduce it, any plugin or anything you can recommend?
  I get so much lately it’s driving me crazy so any
  support is very much appreciated.

 • October 21, 2017 at 12:12 AM
  Permalink

  Hi, I do think this is a great blog. I stumbledupon it 😉 I’m going to come back once again since i have bookmarked it. Money and freedom is the greatest way to change, may you be rich and continue to help other people.|

 • October 21, 2017 at 12:28 AM
  Permalink

  This post will help the internet people for building up new website or even a blog from start
  to end.

 • October 21, 2017 at 12:54 AM
  Permalink

  Amazing things here. I am very glad to see your
  post. Thank you a lot and I’m taking a look ahead to touch you.
  Will you please drop me a mail?

 • October 24, 2017 at 2:46 PM
  Permalink

  I’m not that much of a online reader to be honest but your sites really nice,
  keep it up! I’ll go ahead and bookmark your site to come back later on. All
  the best

 • October 24, 2017 at 8:15 PM
  Permalink

  Excellent blog! Do you have any tips and hints for aspiring writers?
  I’m hoping to start my own website soon but I’m a little
  lost on everything. Would you recommend starting with a free
  platform like WordPress or go for a paid option? There are so many choices out
  there that I’m completely confused .. Any suggestions?
  Thanks a lot!

Comments are closed.