ಬೆಳಗಾವಿ ಪೊಲೀಸ್‌ ಠಾಣೆಗೆ ಇವರೇ ಇನ್ಸ್‌ಪೆಕ್ಟರ್‌, ಇವರೇ ಯೋಗ ಮಾಸ್ಟರ್‌

ಬೆಳಗಾವಿ :   ಸದಾ ಸಮಾಜದ ಒಳಿತಾಗಿ ದುಡಿಯುವ ಪೊಲೀಸರು ತಮ್ಮ ಆರೋಗ್ಯ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೊಲೀಸ ಸಿಬ್ಬಂಧಿ ಅನೇಕ ಕಾಯಿಲೆಗೆ ತುತ್ತಾಗುವುದು ರಾಜ್ಯದ ಅನೇಕ ಕಡೆಗಳಲ್ಲಿ ನಾವು ಕೇಳಿದ್ದೇವೆ. ಆದರೆ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಆರೋಗ್ಯದ ಕಾಳಜಿಯನ್ನು ಸ್ವತಃ ಇಲ್ಲಿನ ಇನ್ಸ್ ಪೆಕ್ಟರ್ ಜೋತಿರ್ಲಿಂಗ ನೋಡಿಕೊಳ್ಳುತ್ತಿದ್ದಾರೆ.

ಪ್ರತಿನಿತ್ಯ ಠಾಣೆಯ ಸಿಬ್ಬಂದಿಗೆ ಯೋಗಭ್ಯಾಸ ಮಾಡಿಸುತ್ತಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸುವ ನಾವು ಮೊದಲು ಗಟ್ಟಿಯಾರಬೇಕು. ಆಗ ಮಾತ್ರ ನಮ್ಮ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೆ ನೀಡಲು ಸಾಧ್ಯ ಎಂದಿದ್ದಾರೆ. ಅಲ್ಲದೆ ಸಾತ್ವಿಕ ಆಹಾರದ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವ ಇವರು, ತಾವು ಮೊದಲು ಪ್ರಯೋಗ ಮಾಡಿ ಯಶಸ್ವಿಯಾದ ಬಳಿಕ ತಮ್ಮ ಸಿಬ್ಬಂದಿಗೆ ಸಲಹೆ ನೀಡುತ್ತಿದ್ದಾರೆ. ಇದರಿಂದ ಸಿಬ್ಬಂದಿಯ ಕಾಯಿಲೆಗಳು ಕಡಿಮೆಯಾಗಿದ್ದು, ಉಲ್ಲಾಸದಿಂದ ಕೆಲಸಲ್ಲಿ ತೊಡಗಿಕೊಂಡಿದ್ದಾರೆ. ತಾವು ಸದೃಢಗೊಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ.

 

 

 

 

 

 

 

 

Comments are closed.

Social Media Auto Publish Powered By : XYZScripts.com