BMTC ಆಗಿದೆ Smart, ವಿದ್ಯಾರ್ಥಿಗಳಿಗೆ ನೀಡುತ್ತಿದೆ Card, ಇದು ದೇಶದಲ್ಲೆ ಮೊದಲ ಬಾರಿ..

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಮಾರ್ಟ್ ದಿಕ್ಕಿನತ್ತ ಸಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಸಹಾಯವಾಗುವಂತೆ ಹಾಗೂ ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಮುಂದಾಗಿದೆ.

ಸ್ಮಾರ್ಟ್ ಕಾರ್ಡ್‌ಗಳನ್ನು ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ವಿತರಿಸಲು ಬಿಎಂಟಿಸಿ ಮುಂದಾಗಿದ್ದು, ಇದು ಯಶಸ್ವಿಯಾದ ನಂತರದಲ್ಲಿ ಸಾಮಾನ್ಯ ನಾಗರೀಕರಿಗೂ ಸ್ಮಾರ್ಟ್ ಕಾರ್ಡ್ ವಿತರಿಸುವ ಯೋಜನೆಯನ್ನು ರೂಪಿಸಿದೆ.

ಸ್ಮಾರ್ಟ್ ಕಾರ್ಡ್ ಪಡೆಯಲು ವಿದ್ಯಾರ್ಥಿಗಳು ಅರ್ಜಿಗಳನ್ನು ತುಂಬಿ, ಸಂಬಂಧ ಪಟ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಆನ್‌ಲೈನ್ ಮೂಕಲವೂ ಅರ್ಜಿ ಸಲ್ಲಿಸಬಹುದಾಗಿದೆ. transit.axisbank.co.in ಇಲ್ಲವೇ www.mybmtc.com/passes ವೈಬ್ ಸೈಟಿನಲ್ಲಿ ಇ-ಅಪ್ಲಿಕೇಶನ್ ಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಒಂದು ಟೋಕನ್ ಸಂಖ್ಯೆಯನ್ನು ನೀಡಲಾಗುತ್ತದೆ. ಅದರ ಜೊತೆಯಲ್ಲಿ ಶಾಲೆ ಅಥವಾ ಕಾಲೇಜಿನ ಸಿಲ್ ಪಡೆದು, ಅರ್ಜಿಯನ್ನು ಕೌಂಟರ್ ಗಳಲ್ಲಿ ಸಲ್ಲಿಕೆ ಮಾಡಿ. ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.

ಸ್ಮಾರ್ಟ್ ಕಾರ್ಡ್ ಗೆ ಹಣ ತುಂಬಿಸುವುದು ಹೇಗೆ…? ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಮಾಡುವ ರೀತಿಯಲ್ಲಿ ಹಣ ನೀಡಿ ಈ ಕಾರ್ಡ್ ನ್ನು ಆಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಆಪ್ ಮಾಡಿಕೊಳ್ಳಬಹುದಾಗಿದೆ. ರೂ.100 ರಿಂದ 1,000 ಟಾಪ್ ಅಪ್ ದೊರೆಯಲಿದೆ. ಗರಿಷ್ಠ ರೂ.10,000 ಸಾವಿರ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ ಕಾರ್ಡ್ ಎಲ್ಲೆಲ್ಲಿ ಸಿಗಲಿದೆ..?

ಪ್ರಮುಖ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್‌ ವಿತರಿಸಲಾಗುತ್ತಿದ್ದು, ಮೆಜೆಸ್ಟಿಕ್, ಶಿವಾಜಿನಗರ, ಕೆಂಗೇರಿ, ದೊಮ್ಮಲೂರು, ಬನಶಂಕರಿ, ಐಟಿಪಿಎಲ್, ಜಯನಗರ, ವಿಜಯನಗರ, ಕೋರಮಂಗಲ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ.

ಬೆಂಗಳೂರು ಒನ್ ಕೇಂದ್ರದಲ್ಲೂ ಲಭ್ಯ

ಬೆಂಗಳೂರಿನಲ್ಲಿರುವ ಒಟ್ಟು 13 ಬೆಂಗಳೂರು ಒನ್ ಕೇಂದ್ರಗಳಲ್ಲೂ ಸ್ಮಾರ್ಟ್ ಕಾರ್ಡ್‌ ವಿತರಿಸುವ ಕ್ರಮಕ್ಕೆ ಬಿಎಂಟಿಸಿ ಮುಂದಾಗಿದೆ. ಜೆ.ಪಿ.ನಗರ, ಸಂಜಯ್ ನಗರ, ನಾಗರಭಾವಿ, ಜೀವನಹಳ್ಳಿ, ರಾಜಾಜಿನಗರ, ಕೆ.ಆರ್.ಪುರಂ, ಆರ್.ಟಿ.ನಗರ, ಕವಲ್ ಭೈರಸಂದ್ರ, ಇಂದಿರಾನಗರ, ಮಲ್ಲೇಶ್ವರಂ, ಕೊಡಿಗೆಹಳ್ಳಿ, ಬಸವೇಶ್ವರನಗರ ಎಲ್ಐಸಿ ಕಾಲೋನಿ ಮತ್ತು ಅರ್ಕೆರೆ ಬೆಂಗಳೂರು ಒನ್ ಕೇಂದ್ರ ಸ್ಮಾರ್ಟ್ ಕಾರ್ಡ್ ಲಭ್ಯವಿದೆ.

Comments are closed.

Social Media Auto Publish Powered By : XYZScripts.com