ವಿಷಾಹಾರ ನೀಡಿ ನವಿಲುಗಳನ್ನು ಕೊಂದ ವಿಕೃತರು : ಪ್ರಕರಣ ಮುಚ್ಚಿಹಾಕಲಿದೆಯಾ ಇಲಾಖೆ..?

ಕೊಪ್ಜಪಳ: ಜಮೀನಿನಲ್ಲಿ ತಾನು  ಬೆಳೆದ ಬೆಳೆಯನ್ನ ಹಾಳು ಮಾಡುತ್ತವೆ ಎಂಬ ಕಾರಣಕ್ಕೆ ನವಿಲುಗಳಿಗೆ ವಿಷ ನೀಡಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಮಾನವನ ವಿಕೃತ ಕೃತ್ಯಕ್ಕೆ ಸುಮಾರು 10 ನವಿಲುಗಳು ಮೃತಪಟ್ಟಿರುವ ಘಟನೆ ಸೋಮವಾರ ಕೊಪ್ಪಳ ತಾಲೂಕಿನ ಕುಣಕೇರಿಯಲ್ಲಿ ನಡೆದಿದೆ.

ಜಮೀನಿನಲ್ಲಿ ಒಟ್ಟೂ 3 ನವಿಲುಗಳ ಮೃತದೇಹ ಮಾತ್ರ ದೊರಕಿದ್ದು, ಇನ್ನುಳಿದ 7 ನವಿಲುಗಳ ಮೃತದೇಹಗಳನ್ನು ಎಲ್ಲಿಯೂ ಹೂತು ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನವಿಲಿನ ಮೃತದೇಹ ಪತ್ತೆಯಾಗಿರುವ ಜಮೀನು ಮಾಲೀಕ ಹುಚ್ಚಪ್ಪ ಗಡಗಿ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈತನೇ ನವಿಲುಗಳಿಗೆ ವಿಷ ಆಹಾರ ನೀಡಿರಬಹುದು ಎಂದೂ ಅನುಮಾನಿಸಲಾಗುತ್ತಿದ್ದು, ಸತ್ಯವನ್ನು ಇನ್ನೂ ಈತ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಇದು ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿರುವ ಕೃತ್ಯ, 3 ನವಿಲುಗಳ ಮೃತದೇಹ ಮಾತ್ರ ಸಿಕ್ಕಿದೆ ಎನ್ನುತ್ತಿರುವ ಅರಣ್ಯ ಇಲಾಖೆ, ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Comments are closed.

Social Media Auto Publish Powered By : XYZScripts.com