ಇಂಡೋ ಪಾಕ್ ಕದನಕ್ಕೆ ಕ್ಷಣಗಣನೆ : ಗೆಲುವಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ

ಕಲಬುರ್ಗಿ : ಇಂಡಿಯಾ ಪಾಕ್ ಆಟಗಾರರು ಗೆಲುವಿಗಾಗಿ ರಣತಂತ್ರಗಳನ್ನು ರೂಪಿಸಿಕೊಂಡು ಸಿದ್ಧರಾಗುತ್ತಿರುವಂತೆಯೇ, ಇತ್ತ ಅಭಿಮಾನಿಗಳೂ ಗೆಲುವಿಗಾಗಿ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಇಂಡಿಯಾ – ಪಾಕಿಸ್ತಾನ ಪಂದ್ಯದ ಕಾವು ದೇಶದೆಲ್ಲೆಡೆ ಕಂಡುಬರುತ್ತಿದ್ದು, ಕಲಬುರ್ಗಿಯಲ್ಲಿ ಪೇಜಾವರ ಶ್ರೀಸೇನೆ ಕಾರ್ಯಕರ್ತರಿಂದ ಬಾರತ ತಂಡದ ಗೆಲುವಿಗಾಗಿ ವಿಶೇಷ ಪೂಜೆ, ಹೋಮ ನಡೆಸಲಾಯಿತು. ಇಂದು ನಡೆಯಲಿರುವ ಭಾರತ ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಬೇಕೆಂದು ಕಲಬುರಗಿಯಲ್ಲಿ ಹೋಮ ಹವನ ಜೊತೆಗೆ ವಿಶೇಷ ಪೂಜೆ‌ ಸಲ್ಲಿಸಲಾಗಿದೆ

ಪೇಜಾವರ ಶ್ರೀಸೇನೆ ಕರ್ನಾಟಕ ಸಂಘಟನೆಯ ಕಾರ್ಯಕರ್ತರಿಂದ ಹೋಮ ನೇರವೇರಿಸಲಾಯಿತು. ನಗರದ ರಾಮ್ ಮಂದಿರದಲ್ಲಿ ಎಂಟು ಗಂಟೆಯಿಂದ ಪೂಜೆ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ‌ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಭಾಗಿ‌‌ಯಾಗಿದ್ದಾರೆ. ಪೇಜಾವರ ಶ್ರೀಸೇನೆ ಜಿಲ್ಲಾದ್ಯಕ್ಷ ಎಮ್.ಎಸ್ ಪಾಟೀಲ ನರಿಬೋಳ ನೇತೃತ್ವದಲ್ಲಿ ಹೋಮ ನಡೆಯಿತು.

 

One thought on “ಇಂಡೋ ಪಾಕ್ ಕದನಕ್ಕೆ ಕ್ಷಣಗಣನೆ : ಗೆಲುವಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ

 • October 20, 2017 at 7:21 PM
  Permalink

  Its like you read my thoughts! You appear to know so much
  about this, like you wrote the book in it or something.
  I feel that you simply could do with a few p.c.
  to drive the message house a little bit, but instead of that, this is
  fantastic blog. An excellent read. I will certainly be back.

Comments are closed.

Social Media Auto Publish Powered By : XYZScripts.com