ಚಾಂಪಿಯನ್ಸ್ ಚಾಲೆಂಜ್ : ಫೈನಲ್ ಗೆ ಮುನ್ನ ಭಾರತ – ಪಾಕ್ ಗೆಲುವಿನ ಲೆಕ್ಕಾಚಾರ

ಗಡಿಯಲ್ಲಿ ಇಂಡೋ-ಪಾಕ್​ ನಡುವೆ ಸಮರ… ಪದೇ ಪದೇ ಗಡಿ ರೇಖೆಯನ್ನು ದಾಟಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್​.. ಎದುರಾಳಿಗಳಿಗೆ ತಕ್ಕ ಉತ್ತರ ನೀಡುತ್ತಿರುವ ಭಾರತ… ಎರಡೂ ದೇಶದ ಜನರ ಮಧ್ಯ ಎದ್ದಿರುವ ಬಿರುಕು.. ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಫೈನಲ್​​ ಫೈಟ್​ಗೆ ವೇದಿಕೆ ಸಜ್ಜಾಗಿದೆ…
ಓವಲ್​ ಅಂಗಳದಲ್ಲಿ ನಡೆಯುವ ಕಾಳಗದಲ್ಲಿ ನಡೆಯುವ ಪಂದ್ಯ ಹೈ ವೋಲ್ಟೇಜ್​ ಸೃಷ್ಟಿಸಿದೆ.. ಫೈನಲ್​ ಪಂದ್ಯಕ್ಕೆ ಕಾಯುತ್ತಿರುವ ಕ್ರೀಡಾ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಲು ಆಟಗಾರರು ಸಜ್ಜಾಗಿದ್ದಾರೆ.. ಇನ್ನು ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ರೋಚಕತೆ ಹುಟ್ಟಿಸಿದೆ..
ಟೂರ್ನಿಯಲ್ಲಿ ಅತಿ ಹೆಚ್ಚು ರನ್​ಗಳನ್ನು ಕಲೆ ಹಾಕಿರುವ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ಜೋಡಿ ಪಾಕಿಸ್ತಾನ ವಿರುದ್ಧದ ಫೈನಲ್​​ ಪಂದ್ಯದಲ್ಲಿ ಮತ್ತೊಮ್ಮೆ ಶತಕದ ಜೊತೆಯಾಟ ನೀಡುವ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ. ಇನ್ನು ರೋಹಿತ್​ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಶಿಖರ್​ ಧವನ್​ ರನ್​ ವೇಗ ಹೆಚ್ಚಿಸಲು ಪ್ಲಾನ್​ ಮಾಡಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಡೆಲ್ಲಿ ಡ್ಯಾಶಿಂಗ್​ ಬ್ಯಾಟ್ಸ್​​ಮನ್​ ವಿರಾಟ್​ ಕೊಹ್ಲಿ ಹಾಗೂ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಮತ್ತೊಮ್ಮೆ ಅಬ್ಬರದ ಆಟ ಆಡಲು ರಣ ತಂತ್ರವನ್ನು ಹೆಣೆದುಕೊಂಡಿದ್ದಾರೆ.. ಇನ್ನು ಮೊದಲ ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಿದ್ದ ಹಾರ್ದಿಕ್​ ಪಾಂಡ್ಯ ಅವರು ಸ್ಫೋಟಿಸಲು ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.. ಇನ್ನು ಕೇದಾರ್​ ಜಾದವ್​ ಅವಕಾಶ ಸಿಕ್ಕಲ್ಲಿ ತಮ್ಮ ಬ್ಯಾಟ್​​ನ ಖದರ್​​ ಪ್ರದರ್ಶಿಸಲಿದ್ದಾರೆ..
ಇನ್ನು ಭಾರತದ ಬೌಲಿಂಗ್​ ವಿಭಾಗದಲ್ಲಿ ಜಸ್ಪ್ರಿತ್​ ಬೂಮ್ರ ಹಾಗೂ ಭುವನೇಶ್ವರ್​ ಕುಮಾರ್​ ಹೊಸ ಚೆಂಡಿನಲ್ಲಿ ಮಿಂಚಿನ ದಾಳಿ ನಡೆಸಲು ರಣ ತಂತ್ರ ರೂಪಿಸಿಕೊಂಡಿದ್ದಾರೆ.. ಮಿಡ್ಲ್​​​ ಓವರ್​ಗಳಲ್ಲಿ ಹಾರ್ದಿಕ್​ ಪಾಂಡ್ಯ ಶಿಸ್ತು ಬದ್ಧ ದಾಳಿ ಸಂಘಟಿಸಬಲ್ಲರು.. ಸ್ಪಿನ್​ ವಿಭಾಗದಲ್ಲಿ ಅಶ್ವಿನ್​​ ಹಾಗೂ ಜಡೇಜಾ ಬಿಗುವಿನ ದಾಳಿ ನಡೆಸಬಲ್ಲರು..
ಪಾಕಿಸ್ತಾನ ತಂಡ ಲೀಗ್​ ಹಂತದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದು, ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಪ್ರದರ್ಶನವನ್ನು ನೀಡಿ ಗಮನ ಸೆಳೆದಿತ್ತು.. ಭಾನುವಾರ ನಡೆಯುವ ಫೈನಲ್​ ವಾರ್​​ನಲ್ಲಿ ಪಾಕ್​ ಸ್ಟಾರ್​ ಬೌಲರ್​ಗಳು ಮೊನಚಾದ ದಾಳಿ ನಡೆಸುವ ವಿಶ್ವಾಸದಲಿದ್ದಾರೆ.. ಇನ್ನು ಉಪಾಂತ್ಯ ಪಂದ್ಯದಿಂದ ದೂರ ಉಳಿದಿದ್ದ ಮೊಹಮ್ಮದ್​ ಅಮೀರ್​ ತಂಡವನ್ನು ಸೇರುವ ಸಾಧ್ಯತೆ ಇದೆ..
ಜುನೈದ್​ ಖಾನ್​, ಹಸನ್​ ಅಲಿ, ಶಿಸ್ತು ಬದ್ಧ ದಾಳಿಯನ್ನು ನಡೆಸಬಲ್ಲರು.. ಇನ್ನು ಯುವ ಸ್ಪಿನ್​ ಬೌಲರ್​ ಶಾದಾಬ್​ ಖಾನ್​ ಭಾರತದ ಬ್ಯಾಟ್ಸ್​​ಮನ್ಸ್​​ಗಳನ್ನು ಕಟ್ಟಿಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ.. ಇನ್ನು ಆರಂಭಿಕ ಅಜರ್​ ಅಲಿ, ಫಖರ್​ ಜಮಾನ್
 ಉತ್ತಮ ಆರಂಭ ನೀಡುವ ವಿಶ್ವಾಸದಲ್ಲಿದ್ದಾರೆ.. ಇನ್ನು ಬಾಬಾರ್​ ಅಜಮ್​, ಮೊಹಮ್ಮದ್​ ಹಫೀಜ್​, ಶೊಯಿಬ್​ ಮಲಿಕ್​, ಸರ್ಫರಾಜ್ ಅಹ್ಮದ್​ ಜವಾಬ್ದಾರಿಯುತ ಆಟ ಆಡುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

Comments are closed.