BMTCಗಾಗಿ 3000 ಹೊಸ ಬಸ್‌ಗಳ ಬಿಡುಗಡೆ : ಸಿ.ಎಂ ಬಿಡುಗಡೆಗೊಳಿಸಿದ ಪ್ರಯಾಣಿಕನ ‘ಸ್ಮಾರ್ಟ್‌ ಕಾರ್ಡ್‌’

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಇನ್ನಷ್ಟು ಜನ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತವಾಗಿರುವ ರಾಜ್ಯ ಸರ್ಕಾರ 3 ಸಾವಿರ ಹೊಸ ಬಸ್ಸ್ ಗಳನ್ನು BMTC ಸೇವೆಗಾಗಿ ಸರ್ಕಾರ ನೀಡಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.  ಪ್ರಯಾಣಿಕರ ಅನುಕೂಲಕ್ಕಾಗಿ ಬಹು ಉಪಯೋಗಿ ಸ್ಮಾರ್ಟ್ ಕಾರ್ಡ್‌‌ನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು,  ಇದೇ ಸಂದರ್ಭದಲ್ಲಿ ನವೀಕೃತ ಮೇಲ್ಸೆತ್ತುವೆಯನ್ನೂ ಸಿ.ಎಂ ಉದ್ಘಾಟಿಸಿದರು.⁠⁠⁠⁠ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ,  ಬೆಂಗಳೂರಿನಲ್ಲಿ ಒಂದು ಕೋಟಿ ಹತ್ತು ಲಕ್ಷ ಜನ ವಾಸಿಸುತ್ತಿದ್ದು. 67 ಲಕ್ಷ ವಾಹನ ನೊಂದಣಿಯಾಗಿದ್ದು ಅದರಲ್ಲಿ 43 ಲಕ್ಷ ದ್ವಿಚಕ್ರವಾಹನಗಳಾಗಿವೆ.  ಈ ವರ್ಷದ ಬಜೆಟ್ ನಲ್ಲಿ 3 ಸಾವಿರ ಹೊಸ ಬಸ್ಸ್  ಖರೀದಿಗೆ ಒಪ್ಪಿಗೆ ನೀಡಲಾಗಿದ್ದು,  1500 ಬಸ್ಸ್ ಖರೀದಿ ಗೆ ಸರ್ಕಾರವೇ ಹಣ ನೀಡುತ್ತದೆ. ಮೆಟ್ರೋ ರೈಲು ಮೊದಲ ಹಂತ ಪೂರ್ಣಗೊಳ್ಳವುದರಿಂದ ಪ್ರತಿದಿನ 5 ಲಕ್ಷ ಮಂದಿ ಪ್ರಯಾಣಿಸುತ್ತಾರೆ ಕೋಚ್ ಸಂಖ್ಯೆ ಹೆಚ್ವಿಸುವುದರಿಂದ ಪ್ರಯಾಣಿಕರ ಸಂಖ್ಯೆ ಹತ್ತು ಲಕ್ಷಕ್ಕೆ ಹೆಚ್ಚುತ್ತದೆ. SECP. TSP ಹಣಕಾಸಿನ ನೆರವಿನಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ರಾಜ್ಯ ಸಾರಿಗೆ ಸಂಸ್ಥೆ ಬಸ್ಸ್ ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,  ದೇಶದಲ್ಲಿ ಪ್ರಥಮವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಪ್ರಯಾಣಿಕರಿಗೆ ಬಹು ಉಪಯೋಗಿ ಸ್ಮಾರ್ಟ್ ವಿತರಿಸುತ್ತಿರುವುದು BMTC ಸಂಸ್ಥೆಯೇ ಮೊದಲು. ಆರಂಭದಲ್ಲಿ ನಾಲ್ಕು ಲಕ್ಷ ವಿದ್ಯಾರ್ಥಿ ಗಳಿಗೆ RuPay ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಮುಂದಿನ ನವೆಂಬರ್ ಒಳಗೆ ಎಲ್ಲ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. BMTC ಯಲ್ಲಿ ಎಂಟು ಸಾವಿರ ಬಸ್ಸ್ ಗಳಿದ್ದು ಪ್ರತಿದಿನ 52 ಲಕ್ಷ ಮಂದಿ ಪ್ರಯಾಣಿಸುತ್ತಾರೆ ಎಂದರು.
BMTC ಸೇವೆಗೆ 3 ಸಾವಿರ ಹೊಸ ಬಸ್ಸ್ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೆ ಸಂದರ್ಭದಲ್ಲಿ ಚಾಲನೆ ನೀಡಿದರು. ಹಂತ ಹಂತವಾಗಿ ಮೂರು ತಿಂಗಳಲ್ಲಿ 3 ಸಾವಿರ ಹೊಸಬಸ್ಸ್ ಗಳನ್ನು ಬಿಎಂಟಿಸಿ ಸೇವೆಗೆ ಸೇರಿಸಲಾಗುತ್ತದೆ. ಸಂದರ್ಭದಲ್ಲಿ ಎರಡು ಸಾವಿರ ಹಳೆಯ ಬಸ್ಸ್ ಗಳನ್ನು ಸೇವೆಯಿಂದ ವಾಪಾಸ್ ಪಡೆಯಲಾಗುತ್ತದೆ.
⁠Axis Bank ಸಹಯೋಗದೊಂದಿಗೆ Rupy cardನ್ನು Smart Card ಆಗಿ BMTC ಪ್ರಯಾಣಿಕರಿಗೆ ನೀಡುತ್ತಿದ್ದು, ಈ ಕಾರ್ಡನ್ನು ಭವಿಷ್ಯದಲ್ಲಿ BMTC ಬಸ್ಸ್ ಪ್ರಯಾಣದ ಜೊತೆಗೆ ಮೆಟ್ರೋ ರೈಲು ಪ್ರಯಾಣಕ್ಕೂ ಬಳಸಬಹುದು. ಜೊತೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಈ ಕಾರ್ಡನ್ನು ಬಳಸಬಹುದಾಗಿದೆ. ಆಗಾಗ Rupy ಕಾರ್ಡಗೆ ಹಣ ರೀಚಾರ್ಜ್ ಮಾಡಿದರೆ ಇದನ್ನು ಬಹು ಉಪಯೋಗಿ ಕಾರ್ಡಾಗಿ ಬಳಸಬಹುದಾಗಿದೆ.⁠⁠⁠

Comments are closed.

Social Media Auto Publish Powered By : XYZScripts.com