ಬ್ಯಾಡ್ಮಿಂಟನ್ : ಇಂಡೋನೇಷ್ಯಾ ಓಪನ್ ಸಿರೀಸ್ – ಕೆ . ಶ್ರೀಕಾಂತ್ ಫೈನಲ್ ಗೆ

ಭಾರತದ ಭರವಸೆಯ ಆಟಗಾರ ಕಿಡುಂಬೆ ಶ್ರೀಕಾಂತ್​ ಅವರು ಇಂಡೋನೇಷ್ಯಾ ಓಪನ್ ಸೂಪರ್ ಸಿರೀಸ್​ನ ಪುರುಷರ ಸಿಂಗಲ್ಸ್​ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಪ್ರಶಸ್ತಿ ಎತ್ತುವ ಕನಸು ಜೀವಂತವಾಗಿರಿಸಿಕೊಂಡಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಪಂದ್ಯದಲ್ಲಿ ಶ್ರೀಕಾಂತ್​​ 21-15, 14-21, 24-22 ಸೆಟ್​ಗಳಿಂದ ಕೋರಿಯಾದ ವಾನ್ ಹೂ ಸನ್ ರನ್ನ ಮಣಿಸಿ ಫೈನಲ್​ಗೆ ಎಂಟ್ರಿಯಾಗಿದ್ದಾರೆ. ಫೈನಲ್​ನಲ್ಲಿ ಶ್ರೀಕಾಂತ್ ಜಪಾನ್​ನ ಕುಜುಮಾ ಸಕಾಯಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಮೊದಲ ಸೆಟ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಶ್ರೀಕಾಂತ್​​, ಉತ್ತಮ ಆಟ ಆಡಿದ್ರು.. ಎದುರಾಳಿ ಆಟಗಾರರ ರಣತಂತ್ರವನ್ನು ಅರಿತು ಆಡಿದ ಶ್ರೀಕಾಂತ ಮೊದಲ ಸೆಟ್​​ನಲ್ಲಿ ಗೆಲುವಿನ ನಗೆ ಬೀರಿದ್ರು.. ಆದ್ರೆ ಎರಡನೇ ಸೆಟ್​​ನಲ್ಲಿ ಶ್ರೀಕಾಂತ್​ ಹಿಂದೆ ಬಿದ್ದರು. ಆದ್ರೆ ಮೂರನೇ ಸೆಟ್​​ನಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಆಡಿದ ಶ್ರೀಕಾಂತ್​ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ರು.. ಆದ್ರೆ ಕೊನೆಯ ಕ್ಷಣದ ವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಶ್ರೀಕಾಂತ್​ ಗೆಲುವಿನ ನಗೆ ಬೀರಿದರು.
ಎಚ್​.ಎಸ್​ ಪ್ರಣಯ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಜಪಾನ್​​ನ ಕುಜಮಾಸಕಿ 17-21, 28-26, 21-18ರಿಂದ ಪ್ರಣಯ್​ ಅವರನ್ನು ಮಣಿಸಿ, ಟೂರ್ನಿಯ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ ಪ್ರಣಯ್​ ಆಸೆಗೆ ತಣ್ಣೀರು ಬಿದ್ದಂತಾಗಿದೆ..
ಶುಕ್ರವಾರ ನಡೆದ ಪ್ರಿ ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಪ್ರಣಯ್​​, ಒಲಿಂಪಿಕ್ಸ್​​ನಲ್ಲಿ ಪದಕದ ಸಾಧನೆಯನ್ನು ಮಾಡಿರುವ ಚೀನಾದ ಸ್ಟಾರ್ ಆಟಗಾರ ಲೀ ಚಾಂಗ್​ ಅವರನ್ನು ಮಣಿಸಿದರು.. 16ರ ಘಟ್ಟದ ಪಂದ್ಯದಲ್ಲಿ ಪ್ರಣಯ್​ 21–18, 16–21, 21–19ರಿಂದ ಲಾಂಗ್​ ಅವರನ್ನು ಪರಾಜಯಗೊಳಿಸಿದ್ರು.. ಮೊದಲು ಸೆಟ್​​ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಪ್ರಣಯ್​​, ಎರಡನೇ ಸೆಟ್​​ನಲ್ಲಿ ಸೋಲು ಅನುಭವಿಸಿದ್ರು.. ಒತ್ತಡದಲ್ಲಿ ಅಮೋಘ ಆಟವಾಡಿದ ಪ್ರಣಯ ಅಚ್ಚರಿಯ ಗೆಲುವು ಸಾಧಿಸಿ, ವಿಶ್ವದ ಚಿತ್ತ ಕದ್ದರು.

Comments are closed.

Social Media Auto Publish Powered By : XYZScripts.com