ರೈಲ್ವೇ ಇಂಜಿನ್ ನಲ್ಲಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿ, ಪ್ರಯಾಣಿಕರು ಸುರಕ್ಷಿತ

ನೆಲಮಂಗಲ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತಿದ್ದ ಪ್ಯಾಸೆಂಜರ್ ಟ್ರೇನ್ ಇಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಇಂಜಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಬೆಲೆ ರೈಲು ನಿಲ್ದಾಣದ ಬಳಿ ನಡೆದಿದೆ.  ತಕ್ಷಣ ಟ್ರೇನ್ ಬೋಗಿಗಳಿಂದ ಇಂಜಿನ್ ನ್ನು ರೈಲ್ವೆ ಸಿಬ್ಬಂದಿಗಳು ಬೇರ್ಪಡಿಸಿದ್ದಾರೆ.

ಹುಬ್ಬಳ್ಳಿ ಪ್ಯಾಸೆಂಜರ್ ಕೆಜೆಎಂ 14025 ಸಂಖ್ಯೆಯ ರೈಲಿನ ಇಂಜಿನ್ ಇದಾಗಿದೆ, ಇಂಜಿನ್ ಹೀಟಾಗಿ ಬೆಂಕಿ ಹೊತ್ತಿಕೊಂಡಿರೊ ಸಾಧ್ಯತೆ ಇದ್ದು, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ನಂತರ ಬೇರೆ ಇಂಜಿನ್ ಮೂಲಕ ಪ್ರಯಾಣಿಕರನ್ನು ರವಾನಿಸಲಾಗಿದೆ.  ಸ್ಥಳಕ್ಕೆ ಧಾವಿಸಿ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

Comments are closed.