ಧಾರವಾಡ : ಟೀಮ್ ಇಂಡಿಯಾ ಗೆಲುವಿಗಾಗಿ ಆಂಜನೇಯನಿಗೆ ವಿಶೇಷ ಪೂಜೆ

ಧಾರವಾಡ : ಸಾಂಪ್ರದಾಯಿಕ  ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದ್ದು,  ಟ್ರೋಫಿಗಾಗಿ  ಎರಡೂ ತಂಡಗಳು ತಮ್ಮ ಸಂಪೂರ್ಣ ಬಲಾಬಲವನ್ನು ಪ್ರದರ್ಶಿಸಲಿವೆ. ಬಾರತ ಕಳೆದ ಬಾರಿಯ ಚಾಂಪಿಯನ್ ಆಗಿದ್ದು, ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ದೇಶದೆಲ್ಲೆಡೆ ಫೈನಲ್ ಪಂದ್ಯದ ಕಾವು ಏರುತ್ತಿದ್ದು, ಧಾರವಾಡದಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಗೆಲುವಿಗಾಗಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ನಾಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ನಗರದ ಲೈನ್ ಬಜಾರ್ ಆಂಜನೇಯ ದೇವಾಲಯದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪೂಜೆ ವಿಶೇಷ ಪೂಜೆ ಸಲ್ಲಿಸಲಾಗಿದೆ.  ಬ್ಯಾಟ್, ಬಾಲ್, ಸ್ಟಂಪ್ ಗಳಿಗೆ ವಿಶೇಷ ಪೂಜೆಯನ್ನು ಕಾರ್ಯಕರ್ತರು ಮಾಡಿದ್ಧಾರೆ. ‘ಗೆದ್ದು ಬಾ ಟೀಂ ಇಂಡಿಯಾ’ ಎಂದು ಅಭಿಮಾನಿಗಳು ಶುಭಕೋರಿದ್ಧಾರೆ.

2 thoughts on “ಧಾರವಾಡ : ಟೀಮ್ ಇಂಡಿಯಾ ಗೆಲುವಿಗಾಗಿ ಆಂಜನೇಯನಿಗೆ ವಿಶೇಷ ಪೂಜೆ

  • October 25, 2017 at 9:51 AM
    Permalink

    I¡¦ll immediately take hold of your rss feed as I can’t find your e-mail subscription link or e-newsletter service. Do you have any? Kindly permit me understand so that I may subscribe. Thanks.

Comments are closed.