Father’s Day : “ಅಪ್ಪ-ಅಪ್ಪ ನನಗೆ ನೀನು ಬೇಕಪ್ಪಾ ——” 

“ವಿದ್ಯೆ ಕಲಿಸದಾ ತಂದೆ ಬುದ್ಧಿ ಹೇಳದು
ಬಿದ್ದಿರಲು ಬಂದು ನೋಡದಾ ತಾಯಿ ಶುದ್ಧ ವೈರಿಗಳು ಸರ್ವಜ್ಞ” ||
ಹೌದು ಈ ಸರ್ವಜ್ಞನ ವಚನ ತಂದೆ-ತಾಯಿ ಗುರುವಿನ ಪಾತ್ರವನ್ನು ಎತ್ತಿ-ತೋರಿಸುತ್ತದೆ.
“ಅಪ್ಪ-ಅಪ್ಪ ನನಗೆ ನೀನು ಬೇಕಪ್ಪಾ ——“
ಎಂಬ ಸಿನಿಮಾದ ಹಾಡೊಂದು ಹೀಗೆ ಮನಸ್ಸಲ್ಲಿ ಸುಳಿಯುವ ಸಮಯ ಏಕೆಂದರೆ ಜೂನ್ 18 ರಂದು ಅಪ್ಪಂದಿರ ದಿನ.
ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವ ಕಾಲಕ್ಕೆ. ಹೆಣ್ಣು-ಗಂಡು ಸಮಾನತೆಯ ದೃಷ್ಠಿಯಲ್ಲಿ ಮೇ ತಿಂಗಳಲ್ಲಿ ಅಮ್ಮಂದಿರ ದಿನವನ್ನು ಆಚರಿಸಿ ಈ ತಿಂಗಳು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ.
ಆಧುನಿಕ ಸಮಾಜದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಿರುವ ಕಾಲದಲ್ಲಿ ಚಿಕ್ಕ-ಕುಟುಂಬಗಳೇ ಹೆಚ್ಚಾಗಿರುವ ಈ ವ್ಯವಸ್ಥೆಯಲ್ಲಿ, ಖಂಡಿತವಾಗಿಯೂ ಅಪ್ಪನ ಪಾತ್ರ, ಅಮ್ಮನಷ್ಟೇ ಮುಖ್ಯವಾಗಿರುತ್ತದೆ.
ಅಪ್ಪನ ಈ ದಿನ ಮಕ್ಕಳಿಗೆ ಅಪ್ಪನನ್ನು ಪ್ರೀತಿಸುವ, ಕಾಣಿಕೆ ನೀಡಲು ಒಂದು ನೆಪ ಅಷ್ಟೇ, ಏಕೆಂದರೆ ಪ್ರತಿ-ದಿನವೂ ತಂದೆ-ತಾಯಿ ಮಕ್ಕಳು ತಮ್ಮದೇ ಆದ ವ್ಯವಸ್ಥೆಯಲ್ಲಿ ಪ್ರೀತಿಯಿಂದಲೇ ಬದುಕುತ್ತಾರೆ. ಆಧುನಿಕರಣ ಸತ್ತ ಸಾಗುತ್ತಿರುವ ಈ ಕಾಲದಲ್ಲಿ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಇಲ್ಲಿ ಅಪ್ಪಂದಿರ ದಿನ ಕೇವಲ ಶೋಕಿ ಆಚರಣೆಯಾಗಿ ಉಳುಯದೇ ತಂದೆ-ಮಗನೆಂಬ ಪ್ರೀತಿಗೆ ಅಲ್ಲಿ ಪ್ರಮುಖ ಸ್ಥಾನಪಡೆಯಬೇಕಾಗಿದೆ.
ಹೀಗೊಂದು ಸಣ್ಣ ಝಲಕ್ “ಅಪ್ಪಾ ನಾನು ಹುಟ್ಟಿದಾಗ ಪ್ರೀತಿಯಿಂದ ಅಪ್ಪಿ ಮುದ್ದಾಡಿದಿಯಲ್ಲವೇ, ನನ್ನ ಪ್ರತಿಯೊಂದು ಮೊದಲ ಕೆಲಸಗಳನ್ನೆಲ್ಲಾ ಫೋಟೋದಲ್ಲಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದೀಯಲ್ಲವೇ ? ನಾನೊಮ್ಮೆ ಜಾತ್ರೆಯಲ್ಲಿ ಬೂಲೂನ್‌ಗಾಗಿ ನಿನಗಿ ಗೊತ್ತಿಲ್ಲದಂತೆ, ಹಿಂದೆ ಸರಿದಾಗ, ತಮ್ಮನನ್ನು ಎತ್ತಿಕೊಂಡ ಅವನೋಡನೆ ಅಳುತ್ತಾ ನನಗಾಗಿ ಹುಡುಕಾಡಿ, ಕೊನೆಗೆ ನನ್ನ ಗೆಜ್ಜೆಯ ಘಲ್ ನಿನಾದಕ್ಕೆ ನನ್ನನ್ನು ಕಂಡು ಹಿಡಿದು ಬಿಟ್ಟಿದ್ದಿಯಲ್ಲವೇ? ನಾನು ಶಾಲೆಗೆ ಹೊರಟಾಗ, ಅವ್ವ ನನ್ನ ಕೈ ಹಿಡಿದು ತಿದ್ದಿಸಿದಾಗ, ಓಡೋಡಿ ಸಂಭ್ರಮದಿಂದ ಸ್ಕೂಲ್‌ಬ್ಯಾಗ ಯುನಿಫಾರ್ಮ್, ಪುಸ್ತಕಗಳನ್ನೆಲ್ಲಾ ತಂದು ನನ್ನ ಪುಸ್ತಕಕ್ಕೆ ಕವರ್ ಕೂಡಾ ಹಾಕಿ ಅವ್ವನೊಡನೆ ಸಂಭ್ರಮಿಸಿದ್ದಿಯಲ್ಲ !
ನಾನಂದು ಶಾಲೆಗೆ ಪ್ರಥಮ ಸ್ಥಾನ ಬಂದೆ, ಆದರ್ಶ ವಿದ್ಯಾರ್ಥಿನಿಯಾಗಿದ್ದಾಗ, ನಿನ್ನ ಫ್ರೆಂಡ್ಸಗೆಲ್ಲಾ ಸಣ್ಣ ಪಾರ್ಟಿಕೊಟ್ಟು ಸಂಭ್ರಮಿಸಿದ್ದೆಲ್ಲಾ ಕೊನೆಗೆ ನನ್ನ ಮದುವೆಯಾದಾಗ, ನನ್ನನ್ನು ಕಳುಹಿಸಿಕೊಡಲು, ಅವ್ವನೊಡಗೂಡಿ ಎಷ್ಟು ಅತ್ತಿದ್ದೆಯಪ್ಪಾ ! ನನಗೊಂದು ಕರಳಬಿಳ್ಳಿ ಹುಟ್ಟಿದಾಗ, ಅಯ್ಯೋ ನೀ ಪಟ್ಟ ಸಂಭ್ರಮ ಅಷ್ಟೀಷ್ಟಲ್ಲ ಇಷ್ಟೆಲ್ಲಾ ಮಾಡಿದ ನಿನಗೆ ನಾ ಏನು ತಾನೇ ಕೊಡಬಲ್ಲೆ ಇದೋ ಅಪ್ಪ ದಿನದಂದು ನಿನಗೊಂದು ಪ್ರೀತಿಯ ನಮನ”
ಅದಕ್ಕೆ ಜನಪದರು ತಂದೆ ಕುರಿತು ಈ ರೀತಿ ಹೇಳುತ್ತಾರೆ.
“ಉಂಡು ಕೂತಿಹ ನನ್ನ ದುಂಡ ಮೋರೆಯ ತಂದೆ,
ಬಿಂದುಲಿಯ ಬೇಡು ನನ ಕಂದಾ ||
ಬಿಂದುಲಿಯ ಬೇಡು ನನ ಕಂದ
ನಿಮ್ಮಜ್ಜ ಬಿಂದಿಗ್ಗಿನ್ನಿರುವ ದೊರೆ ಕಾಣೋ.”
ಅದಕ್ಕೆ ತಂದೆ ತಾಯಿಗಳು ಮಕ್ಕಳ ಕುರಿತು ಯಾವಾಗಲೂ ಆಶಾಭಾವವನ್ನು ಹೊಂದಿರುತ್ತಾರೆ.
“ಹಸುಕೂಸು ಹುಟ್ಟಲಿ ಹೊಸಪೇಟೆ ಕಟ್ಟಲಿ,
ರಸಬಾಳೆ ಕಬ್ಬು ಬೆಳೆಯಲಿ ನಮ್ಮೂರು
ಬಸವಣ್ಣನ ತೇರು ಎಳೆಯಲಿ.”
ಸುರಿದಾವು ಅದನ್ನೇ ಷೇಕ್ಸ್‌ಪಿಯರ್ ಈ ರೀತಿ ಹೇಳುತ್ತಾನೆ.
“When a father gives to his both laugh when a son gives his father both cry”
ಹೌದು ಸಂಬಂಧಗಳ ರೀತಿಯೇ ವಿಚಿತ್ರ ಅಪ್ಪ ತನ್ನ ಮಗನಿಗಾಗಿ ಎಲ್ಲವನ್ನೂ ನೀಡಲು ಕಾತರನಾಗಿರುತ್ತಾನೆ. ಈ ವೇಳೆಯಲ್ಲಿ ಮಗ ಅತ್ಯಂತ ಖುಷಿಯಿಂದ ಅಪ್ಪನಿಗೆ ಧನ್ಯವಾದ ಅರ್ಪಿಸುವ ಅದೇ ರೀತಿ ಮುಂದೆ ಮಗ ಬೆಳೆದು ದೊಡ್ಡವಾದ ಮೇಲೆ ತನ್ನ ಜೀವನದ ಮೊದಲ ಹೀರೋ ಆದ ತನ್ನಪ್ಪನಿಗೆ ಏನಾದರೂ ಕಾಣಿಕೆ ಕೊಡಲು ಹೋದಾಗ, ಖುಷಿ ತಡೆಯಲಾರದ ತಂದೆಯ ಕಣ್ಣಲ್ಲಿ ಆನಂದ ಭಾಷ್ಪದ ಅಭಿನಂದನೆಯಲ್ಲದೇ ಮತ್ತೇನು ?

4 thoughts on “Father’s Day : “ಅಪ್ಪ-ಅಪ್ಪ ನನಗೆ ನೀನು ಬೇಕಪ್ಪಾ ——” 

 • October 18, 2017 at 11:48 AM
  Permalink

  Admiring the time and effort you put into your website and detailed information you provide. It’s great to come across a blog every once in a while that isn’t the same out of date rehashed information. Great read! I’ve bookmarked your site and I’m adding your RSS feeds to my Google account.

 • October 18, 2017 at 3:08 PM
  Permalink

  I am sure this piece of writing has touched all
  the internet users, its really really nice article on building up new web site.

 • October 21, 2017 at 2:36 AM
  Permalink

  whoah this blog is fantastic i like reading your articles.
  Stay up the good work! You know, many people are hunting around for this information,
  you could help them greatly.

Comments are closed.

Social Media Auto Publish Powered By : XYZScripts.com