KIA ಶೇರುಗಳನ್ನು ಫೇರ್ ಫಾಕ್ಸ್ ಸಂಸ್ಥೆಗೆ ಮಾರುವುದನ್ನು ಪ್ರತಿಬಂಧಿಸಿ : ಸಿಎಂ ಗೆ ಡಿಕೆಶಿ ಒತ್ತಾಯ

ದೇವನಹಳ್ಳಿ ಬಳಿ ಕಾರ್ಯಾಚರಿಸುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಭಾಗಿದಾರರಾಗಿರುವ ಜಿ.ವಿ.ಕೆ.ಸಂಸ್ಥೆ ತನ್ನ ಪಾಲಿನ ಷೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್ ಸಂಸ್ಥೆ ಗೆ ಮಾರುವುದನ್ನು ಪ್ರತಿಬಂಧಿಸುವಂತೆ ರಾಜ್ಯ ಇಂಧನ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಗಳ ನ್ನು ಒತ್ತಾಯಿಸಿದ್ದಾರೆ.
ಅವರು ಮುಖ್ಯಮಂತ್ರಿ ಗಳಿಗೆ ಪತ್ರ ವೊಂದನ್ನು ಬರೆದು ವಿಮಾನ ನಿಲ್ದಾಣ ಸಂಸ್ಥೆ ಯಲ್ಲಿ ಜಂಟಿ ಪಾಲುದಾರಿಕೆ ಹೊಂದಿರುವ ರಾಜ್ಯ ಸರ್ಕಾರ ವಿಮಾನನಿಲ್ದಾಣದ ಆಡಳಿತ ಖಾಸಗಿ ವಿದೇಶಿ ಸಂಸ್ಥೆ ಯ ಕೈ ವಶ ವಾಗದಂತೆ ತಡೆಗಟ್ಟಬೇಕೆಂದು ಒತ್ತಾಯಿಸಿದ್ದಾರೆ. ೨೦೦೮ ರಲ್ಲಿ ಕಾರ್ಯಾರಂಭ ಗೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆ ಕರ್ನಾಟಕ ಸರಕಾರ, ಕೇಂದ್ರ ಸರಕಾರ, ಸೀಮೆನ್ಸ್ ಮತ್ತು ಜೂರಿಚ್ ವಿಮಾನ ನಿಲ್ದಾಣ ಸಂಸ್ಥೆ ಯ ಜಂಟಿ ಸಹಭಾಗಿತ್ವ ಆರಂಭವಾಯಿತು. ಅದಾಗಲೇ ಮುಂಬಯಿ ವಿಮಾನನಿಲ್ದಾಣ ವನ್ನು ನಿರ್ವಹಿಸುತ್ತಿದ್ದ ಜಿ.ವಿ.ಕೆ.ಸಮೂಹ ಸಂಸ್ಥೆ ಪ್ರತಿಶತ ೪೩ ರಷ್ಟು ಷೇರುಗಳನ್ನು ಪಡೆದು ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ವಾಗಿತ್ತು.

ಆದರೆ ಇದೀಗ ಜಿವಿಕೆ ಸಂಸ್ಥೆ ತನ್ನ ಷೇರುಗಳ ಪೈಕಿ ಪ್ರತಿಶತ ೩೫ ರಷ್ಟು ಶೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್ ಸಂಸ್ಥೆ ಗೆ ಮಾರಿಬಿಟ್ಟಿದೆ. ಪೇರ್ ಪಾಕ್ಸ್ ಸಂಸ್ಥೆ ಈಗಾಗಲೇ ಜೂರಿಚ್ ಸಂಸ್ಥೆ ಯಿಂದ ಶೇ ೫ ರಷ್ಠನ್ನು ವಿಕ್ರಯಿಸಿದೆ. ತನ್ನ ಉಳಿದ ಶೇರುಗಳನ್ನು ( ಶೇಕಡ ಹತ್ತು) ಷೇರುಗಳನ್ನು ಫೇರ್ ಪಾಕ್ಸ್ ಸಂಸ್ಥೆಗೆ ವರ್ಗಾಯಿಸುವುದಾಗಿ ಜಿವಿಕೆ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿದೇಶದ ಹೂಡಿಕೆದಾರರಾದ ಸೀಮೆನ್ಸ್ (ಶೇಕಡಾ ೨೬) ಹಾಗು ಫೇರ್ ಫಾಕ್ಸ್ ಸಂಸ್ಥೆ ( ಶೇಕಡ ೫+ಶೇ ೩೩+ ಶೇ ೧೦) ಒಟ್ಟು ಸೇರಿದರೆ ಶೇಕಡಾ ೭೪ ರಷ್ಠು ಷೇರುಗಳು ವಿದೇಶಿ ಸಂಸ್ಥೆ ಗಳ ಪಾಲಾಗುತ್ತದೆ. ಈ ಹಿನ್ನೆಲೆ ಯಲ್ಲಿ ವಿಮಾನ ನಿಲ್ದಾಣ ದ ನಿರ್ವಹಣೆ ಹಾಗು ಸ್ಥಾಪಿಸಿದ ಉದ್ದೇಶ ಈಡೇರದೆ ಹಿನ್ನಡೆಯಾಗಲಿದೆ. ಎರಡನೆ ಟರ್ಮಿನಲ್ ವಿಸ್ತರಣೆಯು ಕಾರ್ಯಪ್ರಗತಿ ಯಲ್ಲಿರುವಾಗ ವಿದೇಶಿ ಸಂಸ್ಥೆ ಗಳು ಬಹು ಪಾಲು ಷೇರುಗಳ ಮೇಲೆ ನಿಯಂತ್ರಣ ಹೊಂದುವುದು ದೇಶದ ಹಿತಾಸಕ್ತಿಗಳಿಗೆ ದಕ್ಕೆ ಯಾಗುತ್ತದೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಕೂಡಲೆ ಜಿವಿಕೆ ಸಂಸ್ಥೆ ತನ್ನುಳಿದ ಶೇ ಹತ್ತರಷ್ಟು ಷೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್ ಸಂಸ್ಥೆ ಗೆ ಮಾರದಂತೆ ಪ್ರತಿಬಂದಿಸಬೇಕು ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಗುಹೋಗುಗಳ ಬಗ್ಗೆ ರಾಜ್ಯ ಸರಕಾರ ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಎಂದು ಶ್ರಿ ಶಿವಕುಮಾರ್ ಒತ್ತಾಯಿಸಿದ್ದಾರೆ.

Comments are closed.

Social Media Auto Publish Powered By : XYZScripts.com