ರಾಷ್ಟ್ರಪತಿಗಳ ಬೇಟಿಮಾಡಿದ  ರಾಜ್ಯ ನಿಯೋಗ : ಮೀಸಲು ತಿದ್ದುಪಡಿಗೆ ಅಂಕಿತ ಹಾಕಲು ಮನವಿ  

ನವದೆಹಲಿ: ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರ ನೇತೃತ್ವದಲ್ಲಿ ರಾಜ್ಯ ನಿಯೋಗ ಶುಕ್ರವಾರ ನವದೆಹಲಿಗೆ ತೆರಳಿದ್ದು,  ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಎಸ್ಸಿ, ಎಸ್ಟಿ ವರ್ಗಗಳಿಗೆ ಸರ್ಕಾರದ ಕಾಮಗಾರಿಗಳಲ್ಲಿ ಮೀಸಲು ನೀಡುವ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಲು ಮನವಿ ಮಾಡಿದ್ದಾರೆ.  ಸಂಸದರಾದ ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ಧ್ರುವನಾರಾಯಣ್, ಶ್ರೀ ಬಿ.ಎನ್. ಚಂದ್ರಪ್ಪ, ಬಿ.ವಿ.ನಾಯಕ್, ಶಾಸಕ ರಾಜು ಅಲಗೂರ್, ಸತೀಶ್ ಜಾರಕಿಹೊಳಿ, ದೆಹಲಿಯ ಹೆಚ್ಚುವರಿ ವಿಶೇಷ ಪ್ರತಿನಿಧಿ ಸಲೀಂ ಅಹಮದ್, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಶ್ರೀ ವೆಂಕಟಯ್ಯ ಈ  ನಿಯೋಗದಲ್ಲಿದ್ದರು.

ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಜಿಪಂ, ಗ್ರಾಮೀಣ ಸಮಗ್ರ ಮೂಲಸೌಕರ್ಯ ನಿಗಮ ಮತ್ತಿತರ ಇಲಾಖೆಗಳ ಕಾಮಗಾರಿಗಳ 50 ಲಕ್ಷ ರೂ. ವರೆಗಿನ ಗುತ್ತಿಗೆಯನ್ನು ಎಸ್ಸಿ, ಎಸ್ಟಿ ವರ್ಗಗಳಿಗೆ ಮೀಸಲು ಇಡುವಂತೆ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅವರು ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಅಂತಿಮ ಒಪ್ಪಿಗೆಗೆ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.⁠⁠⁠⁠

Comments are closed.