ಬೆಂಗಳೂರಿನಲ್ಲಿ ಮಹಿಳೆಯ ಬಟ್ಟೆಯೊಳಗೆ ಹಲ್ಲಿ ಎಸೆದು ಲೈಂಗಿಕ ಕಿರುಕುಳ ನೀಡಿದ ಕಾಮುಕರು ..

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಕಾಮುಕರ ದುಷ್ಕೃತ್ಯವೊಂದು ಬಯಲಾಗಿದ್ದು, ಹೊರ ರಾಜ್ಯದ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆರು ದಿನಗಳ ಹಿಂದೆಯೇ ಎಸಿಎಂಹೆಚ್ ರಸ್ತೆಯಲ್ಲಿ ಈ ಕೃತ್ಯ ನಡೆದಿತ್ತು.   ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳಾ ಟೆಕ್ಕಿಯೊಬ್ಬರ ಬಟ್ಟೆಯೊಳಗೆ ಕೃತಕ ಹಲ್ಲಿ ಎಸೆದು ಹಿಂಸೆ ನೀಡಿದ್ದಲ್ಲದೆ, ಬಳಿಕ ತೆಗೆಯುವ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ.
  ಬಿಹಾರ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ಈಗ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಡವಾಗಿ ಮಾಧ್ಯಮಗಳಿಗೆ ತಿಳಿದಿದೆ. ಈಗಾಗಲೇ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.