ಒಡೆಯರ್ ಮನೆತನಕ್ಕೆ ಮತ್ತೆ ಬಂತು ಸಂತಾನಭಾಗ್ಯ, ತಂದೆಯಾಗುತ್ತಿದ್ದಾರೆ ಮಹಾರಾಜ ಯದುವೀರ್

ಬರೋಬ್ಬರಿ 60 ವರ್ಷಗಳ ನಂತರ ಮೈಸೂರು ಒಡೆಯರ್ ಮನೆತನದಲ್ಲಿ ಮಗುವಿನ ಸದ್ದು ಕೇಳಿಬರಲಿದೆ. ಮಹಾರಾಣಿ ತ್ರಿಷಿಕಾ ಸಿಂಗ್ ಯದುವೀರ್ 5 ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಅರಮನೆಯ ರಾಜಪುರೋಹಿತರು ತಿಳಿಸಿದ್ದಾರೆ.

ಜೂನ್ 27, 2016ರಂದು ಯದುವೀರ್ ಮತ್ತು ತ್ರಿಷಿಕಾ ಸಿಂಗ್ ಮದುವೆ ಅದ್ಧೂರಿಯಾಗಿ ಮೈಸೂರಿನಲ್ಲಿ ನೆರವೇರಿತ್ತು. ಕಳೆದ 1 ವರ್ಷದಲ್ಲಿ ತ್ರಿಷಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಈಗ ಈ ಸಿಹಿಸುದ್ದಿ ಹೊರಬಂದಿರುವುದು ಮೈಸೂರು ಅರಮನೆಯಲ್ಲಿ ಸಂತಸ ಮನೆಮಾಡಿದೆ.

ಮಹಾಲಿಂಗು ಮಾಡುವಾಗಿ ತಲಕಾಡು ಮರುಳಾಗಿ ರಾಜರಿಗೆ ಮಕ್ಕಳಾಗದಿರಲಿ ಎಂದಿದ್ದ ಅಲಮೇಲಮ್ಮ ಶಾಪದಿಂದ ರಾಜರಿಗೆ ಈವರೆಗೆ ಮಕ್ಕಳಾರಲಿಲ್ಲ. ಆದರೆ ರಾಜರು ದತ್ತು ತೆಗೆದುಕೊಂಡ ಮಕ್ಕಳಿಗೆ ಮಾತ್ರ ಮಕ್ಕಳಾಗುತ್ತವೆ ಎಂದಿದ್ದರು. ಅದರಂತೆ ಯದುವೀರ್ ತಂದೆಯಾಗುತ್ತಿದ್ದಾರೆ. ಇದಕ್ಕಾಗಿ ಅವರು ಕಳೆದ ಒಂದು ವರ್ಷದಿಂದ ಎಲ್ಲಾ ದೇವರಿಗೂ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

Comments are closed.

Social Media Auto Publish Powered By : XYZScripts.com