ಪ್ರತಿದಿನ ಬದಲಾಗಲಿದೆ ಪೆಟ್ರೋಲ್, ಡೀಸೆಲ್ ದರ; ಶುಕ್ರವಾರದಿಂದ ದೇಶದಾದ್ಯಂತ ಜಾರಿ !

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇನ್ಮೇಲೆ ಪ್ರತಿದಿನ ಬದಲಾಗಲಿವೆ, ಅಂದರೆ ಪರಿಷ್ಕರಣೆ ಆಗಲಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗುವ ಏರಿಳಿತ ನೇರವಾಗಿ ಗ್ರಾಹಕನಿಗೇ ತಲುಪಿಸಲು ಪೆಟ್ರೋಲಿಯಂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ನಿಯಮ ಜಾರಿಗೆ ತಂದಿದ್ದಾರೆ. ಆದರೆ ಇದು ಪೆಟ್ರೋಲ್ ಬಂಕ್ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬುಧವಾರ ನಡೆದ ಮಹತ್ತರ ಸಭೆಯಲ್ಲಿ ಕೇಂದ್ರ ಸಚಿವರು ಈ ವಿಚಾರವನ್ನು ತಿಳಿಸಿದ್ದಾರೆ. ಜೂನ್ 16, ಶುಕ್ರವಾರದಿಂದ ಈ ನಿಯಮ ಜಾರಿಗೆ ಬರಲಿದೆ. ಆದರೆ ಮಧ್ಯರಾತ್ರಿ 12 ಗಂಟೆಗೆ ಪರಿಷ್ಕರಣೆಯಾಗುತ್ತಿದ್ದ ಪೆಟ್ರೋಲ್ ದರಗಳನ್ನು ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಯಂತೆ ಬೆಳಗ್ಗಿನ  6 ಗಂಟೆಗೆ ಬದಲಾಯಿಸಲಾಗಿದೆ. ಅಂದರೆ ಪ್ರತಿದಿನ ಬೆಳಗ್ಗೆ  6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾವಣೆಯಾಗಲಿವೆ.

ನಾಳೆ ಒಂದು ದಿನದ ಮಟ್ಟಿಗೆ ಪೆಟ್ರೋಲ್ ಬಂಕುಗಳು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯನ್ನು ನಿಲ್ಲಿಸಲಿವೆ. ಇರುವ ಸ್ಟಾಕ್ ಖಾಲಿಯಾಗುವವರಗೆ ಮಾತ್ರ ಪೆಟ್ರೋಲ್ ಬಂಕುಗಳಲ್ಲಿ ವಹಿವಾಟು ನಡೆಯಲಿದೆ. ಒಟ್ಟಾರೆಯಾಗಿ ಚಿನ್ನದ ಬೆಲೆಯಂತೆ ಪೆಟ್ರೋಲ್ ಬೆಲೆಗಳು ಕೂಡಾ ಪ್ರತಿದಿನ ಬದಲಾವಣೆ ಕಾಣಲಿವೆ. ಇದೆಲ್ಲದರ ಪರಿಣಾಮವಾಗಿ ನಾಳೆಯಿಂದ ನಡೆಯಬೇಕಾಗಿದ್ದ ಪಟ್ರೋಲ್ ಬಂಕ್ ಮಾಲೀಕರ ಮುಷ್ಕರವನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಪ್ರತಿದಿನ ಪರಿಷ್ಕೃತ ದರವನ್ನು ಪೆಟ್ರೋಲ್ ಬಂಕ್ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ಕೆಲಸವನ್ನು ತೈಲ ಕಂಪೆನಿಗಳು ಮಾಡಲಿವೆ. ದರದ ಪಟ್ಟಿಯನ್ನು ಪೆಟ್ರೋಲ್ ಬಂಕುಗಳಲ್ಲಿ ಕಡ್ಡಾಯವಾಗಿ ಫಲಕ ಹಾಕಬೇಕಾಗಿದ್ದು ಇದನ್ನು ತಪ್ಪಿದಲ್ಲಿ 50 ಸಾವಿರದಿಂದ 5 ಲಕ್ಷ ರೂಪಾಯಿಯವರಗೆ ದಂಡ ಹಾಕುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.

6 thoughts on “ಪ್ರತಿದಿನ ಬದಲಾಗಲಿದೆ ಪೆಟ್ರೋಲ್, ಡೀಸೆಲ್ ದರ; ಶುಕ್ರವಾರದಿಂದ ದೇಶದಾದ್ಯಂತ ಜಾರಿ !

 • October 18, 2017 at 12:02 PM
  Permalink

  Hi there, just changed into alert to your weblog thru Google, and located that it’s really informative. I’m going to be careful for brussels. I’ll appreciate if you happen to proceed this in future. Numerous people might be benefited from your writing. Cheers!|

 • October 18, 2017 at 1:49 PM
  Permalink

  What’s up, yeah this piece of writing is in fact pleasant and I have learned lot of things from it concerning blogging. thanks.|

 • October 18, 2017 at 3:31 PM
  Permalink

  wonderful submit, very informative. I’m wondering why the opposite experts of this sector do not understand this. You should proceed your writing. I am sure, you’ve a great readers’ base already!|

 • October 20, 2017 at 6:08 PM
  Permalink

  We’re a gaggle of volunteers and starting a new scheme in our community. Your site provided us with helpful information to work on. You have done an impressive job and our entire group shall be grateful to you.|

 • October 21, 2017 at 12:03 AM
  Permalink

  There is certainly a great deal to find out about this subject. I really like all the points you made.|

Comments are closed.

Social Media Auto Publish Powered By : XYZScripts.com