ಗಣೇಶ, ಬುದ್ಧನ ಮುಂದೆ ಲಿಪ್ ಲಾಕ್, ರೊಮ್ಯಾನ್ಸ್..ಸಂಚಲನ ಸೃಷ್ಟಿಸಿದ ಚೆಲುವೆ !

ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಪೋಸ್ಟ್‍ಗಳನ್ನ ಮಾಡಿ ಸದಾ ಸುದ್ದಿಯಲ್ಲಿರೋ ಚೆಲುವೆ ಸೋಫಿಯಾ ಹಯಾತ್. ಯಾವಾಗಲೂ ಹಾಟ್ ಹಾಟಾಗಿ ಕಾಣಿಸಿಕೊಳ್ತಿದ್ದ ಸೋಫಿಯಾ ಕಳೆದ ವರ್ಷ ಸನ್ಯಾಸಿಯಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ಲು. ಎರಡು ತಿಂಗಳ ಹಿಂದೆ ರುಮೇನಿಯಾದ ವ್ಲಾಡ್ ಟಾನೆಸ್ಕೋನ ಮದುವೆಯಾಗಿ ಮತ್ತೆ ಸುದ್ದಿಯಾಗಿದ್ಲು. ತನ್ನ ಪತಿ ಜೊತೆ ಸಿಕ್ಕಾಪಟ್ಟೆ ಆತ್ಮೀಯವಾಗಿರೋ ಫೋಟೋಸ್ ಮತ್ತು ವೀಡಿಯೋಸ್‍ನ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡೋದೇ ಹವ್ಯಾಸ ಮಾಡ್ಕೊಂಡಿರೋ ಈ ಚೆಲುವೆ ಮತ್ತೊಂದು ವೀಡಿಯೋದಿಂದ ಸಂಚಲನ ಸೃಷ್ಟಿಸಿದ್ದಾಳೆ. ಆಕೆಯ ಹೊಸ ಆಲ್ಬಮ್ ಸಾಂಗ್ ಈಗ ವೈರಲ್ಲಾಗಿದೆ. ಅದಕ್ಕೆ ಕಾರಣ ಗಣೇಶ ಮತ್ತು ಬುದ್ಧನ ಪ್ರತಿಮೆ ಮುಂದೆ ಆಕೆ ಪತಿ ಜೊತೆ ನಡೆಸಿರೋ ರೊಮ್ಯಾನ್ಸ್.

ಸೋಫಿಯಾ ಹಯಾತ್ ಓಂ ಶಾಂತಿ ಓಂ ಅನ್ನೋ ಆಲ್ಬಮ್ ಸಾಂಗ್ ಶೂಟ್ ಮಾಡಿ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದಾಳೆ. ನನ್ನ ಯೂಟ್ಯೂಬ್ ಚಾನಲ್‍ನಲ್ಲಿ ಈ ವೀಡಿಯೋ ನೋಡಿ ಅಂತ ಇನ್‍ಸ್ಟ್ರಾಗ್ರಾಂನಲ್ಲಿ ಸಣ್ಣ ವೀಡಿಯೋ ಸಮೇತ ಬರೆದುಕೊಂಡಿದ್ದಾಳೆ. ಸೋಫಿಯಾಳ ಹೊಸ ಬಗೆಯ ಆಲ್ಬಮ್ ಸಾಂಗ್ ನೋಡಿ ನೆಟ್ಟಿಗರು ಕೆಂಡಮಂಡಲವಾಗಿದ್ದಾರೆ. ಬೆಡ್ ರೂಂನಲ್ಲಿ ನಡೆಸಬೇಕಾದ ರೊಮ್ಯಾನ್ಸ್ ಅನ್ನ ದೇವರ ಫೋಟೊ ಮತ್ತು ವಿಗ್ರಹದ ಮುಂದೆ ಪ್ರದರ್ಶಿಸಿರೋದು ಎಷ್ಟ ಸರಿ ಅಂತ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಈ ಆಲ್ಬಮ್ ಸಾಂಗ್ ಕೆಳಗೆ ವೀಕ್ಷಕರು ಮಾಡಿರೋ ಕಾಮೆಂಟ್‍ಗಳನ್ನ ಡಿಲೀಟ್ ಮಾಡಲಾಗಿದೆ. ವೀಡಿಯೋದಲ್ಲಿ ರೊಮ್ಯಾನ್ಸ್ ಮಾಡ್ತಾ ಕೊನೆಗೆ ಮತ್ತೆ ಆಕೆ ಸನ್ಯಾಸಿನಿ ವೇಷದಲ್ಲಿ ಆಕೆಯ ಪತಿ ಹಿಂದೂ ಪೂಜಾರಿಯ ವೇಷದಲ್ಲಿ ದರ್ಶನ ಕೊಟ್ಟಿರೋದನ್ನ ನೋಡಬಹುದು.

ಈ ಆಲ್ಬಮ್‍ನಲ್ಲಿ ರೊಮ್ಯಾನ್ಸ್‍ಗೆ ಭಜನೆಯನ್ನ ಮಿಕ್ಸ್ ಮಾಡಿರೋದು ಮಾತ್ರವಲ್ಲದೇ, ಸಾಕಷ್ಟು ವಿವಾದಾತ್ಮಕ ಅಂಶಗಳು ಕಾಣಸಿಗುತ್ತದೆ. ರೊಮ್ಯಾನ್ಸ್ ಮಾಡೋ ಸಮಯದಲ್ಲಿ ಹಿನ್ನೆಲೆಯಲ್ಲಿ ಮಸೀದಿಯ ಅಜಾನ್ ಸಹ ಕೇಳಿಸುತ್ತೆ. ಈ ಹಿಂದೆ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನ ಕೊಟ್ಟು ಸುದ್ದಿಯಾಗಿದ್ದ ಸೋಫಿಯಾ ಸದ್ಯ ಈ ಲವ್ ಮೇಕಿಂಗ್ ವೀಡಿಯೋದಿಂದ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾಳೆ.

One thought on “ಗಣೇಶ, ಬುದ್ಧನ ಮುಂದೆ ಲಿಪ್ ಲಾಕ್, ರೊಮ್ಯಾನ್ಸ್..ಸಂಚಲನ ಸೃಷ್ಟಿಸಿದ ಚೆಲುವೆ !

  • October 24, 2017 at 2:18 PM
    Permalink

    Hey there, I think your website might be having browser compatibility issues. When I look at your website in Ie, it looks fine but when opening in Internet Explorer, it has some overlapping. I just wanted to give you a quick heads up! Other then that, terrific blog!

Comments are closed.

Social Media Auto Publish Powered By : XYZScripts.com