150 ಕೋಟಿ ಗಣಿ ಕಪ್ಪ ಆರೋಪ ಹಿನ್ನೆಲೆ : ತನಿಖಾಧಿಕಾರಿಗಳಿಗೆ ಸಾಕ್ಷ್ಯ ನೀಡಿದ ಜನಾರ್ಧನ ರೆಡ್ಡಿ

ಬೆಂಗಳೂರು: ಹೆಚ್‌.ಡಿ.ಕೆ 150ಕೋಟಿ ರೂಪಾಯಿ ಗಣಿಕಪ್ಪ  ವಿಚಾರವಾಗಿ ಕಿಕ್ ಬ್ಯಾಕ್ ಅರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೇಳಿದ್ದ ಎಲ್ಲಾ ದಾಖಲೆಗಳನ್ನೂ ನೀಡಿದ್ದೇನೆ‌. ಪೆನ್‌ಡ್ರೈವ್‌ನಲ್ಲಿ ನಕಲಿ ಆಡಿಯೋ ಮತ್ತು ವಿಡಿಯೋ ದಾಖಲೆಗಳನ್ನು ಒದಗಸಿಸಿದ್ದೇನೆ ಎಂದು ಜನಾರ್ಧನ ರೆಡ್ಡಿ ತಿಳಿಸಿದ್ದಾರೆ. ಮಂಗಳವಾರ ಹೆಬ್ಬಾಳದ ಎಸ್‌.ಐ.ಟಿ ಕಚೇರಿಗೆ ಹಾಜರಾಗಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಅದೇಶದಂತೆ ನನ್ನ ಬಳಿ ಇರುವ ಸಾಕ್ಷ್ಯಗಳನ್ನೂ ನೀಡಿದ್ದೇನೆ. ಪೆನ್‌ಡ್ರೈವ್‌ನಲ್ಲಿ ಏನಿದೆ ಎಂಬ ಬಗ್ಗೆ ನಾನು ಬಹಿರಂಗಪಡಿಸುವುದಿಲ್ಲ,  ಎಲ್ಲವೂ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.  ಪೇನ್ ಡ್ರೈವ್ ಜೊತೆ ಬ್ಯಾಂಕ್ ವಹಿವಾಟುಗಳ ಪ್ರತಿ ಸಹ ಕೊಟ್ಟಿದೇನೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ 150ಕೋಟಿ ಕಪ್ಪ ಪಡೆದಿರುವ ಆರೋಪದ ಸಂಬಂಧ ಎಸ್ ಐಟಿ ಅಧಿಕಾರಿಗಳಿಗೆ ಸಿಡಿ ಮತ್ತು ದಾಖಲೆಗಳನ್ನ ನೀಡುವುದಾಗಿ ಈ ಮೊದಲೇ ಹೇಳಿದ್ದ ಜನಾರ್ಧನ ರೆಡ್ಡಿ, ಎಸ್ ಐಟಿಗೆ ಹಾಜರಾಗಿ ಮೂರು ವಾರಗಳ  ಸಮಯ ಕೇಳಿದ್ದರು. ದಾಖಲೆ ನೀಡಲು ತಡವಾದ ಕಾರಣ ಎರಡು ಬಾರಿ ಅಧಿಕಾರಿಗಳು ಅವರಿಗೆ ನೋಟಿಸ್ ನಿಡಿದ್ದರು. ಈ ಸಂಬಂಧ ರೆಡ್ಡಿ ಮಂಗಳವಾರ ಎಸ್‌.ಐ.ಟಿ ಕಚೇರಿಗೆ ಹಾಜರಾಗಿದ್ದರು. ಕುಮಾರಸ್ವಾಮಿಯವರ ಜಾಮೀನು ಅರ್ಜಿ

Comments are closed.