ಅಮೀರ್‍ಖಾನ್‍ ದಂಗಲ್‍ಗೆ ಫಿದಾ ಆದ್ರು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ….!

ಇತ್ತೀಚೆಗೆ ತೆರೆ ಕಂಡ ಅಮೀರ್‍ಖಾನ್‍ ಅಭಿನಯದ “ದಂಗಲ್‍” ಚಿತ್ರ ಸಾಕಷ್ಟು ಜನರ ಪ್ರೀತಿಯನ್ನು ಗಳಿಸಿತ್ತು. ದಂಗಲ್‍ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಮೇ 5ರಂದು ಚೀನಾದಲ್ಲಿ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ವೀಕ್ಷಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಅವರು ಮನಸಾರೆ ಹೊಗಳಿದ್ದಾರೆ.

ಕಜಕಿಸ್ತಾನದ ರಾಜಧಾನಿ ಆಸ್ಥಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍, ಮೋದಿಯವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. “ನಾನು ಅಮೀರ್‍ಖಾನ್‍ ನಟಿಸಿರುವ ಕ್ರೀಡಾ ಚಿತ್ರ ದಂಗಲ್‍ ನೋಡಿದೆ”. ಚಿತ್ರ ಇಷ್ಟವಾಯಿತು. ಇಂತಹ ಚಿತ್ರಗಳು ಮತ್ತಷ್ಟು ಬಿಡುಗಡೆಯಾಗಲಿ ಎಂದು ಪ್ರಶಂಸಿದ್ದಾರೆ. ಚೀನಾದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ದಂಗಲ್‍ ಇಲ್ಲಿಯವರೆಗೆ 1,100 ಕೋಟಿ ಹಣ ಗಳಿಸಿದೆ ಎಂದು ತಿಳಿದು ಬಂದಿದೆ.

One thought on “ಅಮೀರ್‍ಖಾನ್‍ ದಂಗಲ್‍ಗೆ ಫಿದಾ ಆದ್ರು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ….!

  • October 24, 2017 at 2:18 PM
    Permalink

    Have been taking little over a month.

Comments are closed.