ಚಾಂಪಿಯನ್ಸ್ ಟ್ರೋಫಿ : ಆತಿಥೇಯ ಇಂಗ್ಲೆಂಡ್ ನ್ನು ಮಣಿಸಿ ಪಾಕ್ ಫೈನಲ್ ಗೆ

ಸಂಘಟಿತ ಆಟದ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ 2017ನೇ ಸಾಲಿನ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಟೂರ್ನಿಯ ಫೈನಲ್​ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಈ ಮೂಲಕ ಚಾಂಪಿಯನ್ಸ್​ ಟ್ರೋಫಿ ಎತ್ತುವ ಬಹುದಿನಗಳ ಕನಸಿಗೆ ಪುಷ್ಠಿ ನೀಡಿದೆ. ಈ ಬಾರಿ ಚಾಂಪಿಯನ್ಸ್​ ಟ್ರೋಫಿ ಏಷ್ಯಾ ಖಂಡ ಸೇರುವದಂತೂ ಬಹುತೇಕ ಖಚಿತವಾಗಿದೆ.
ಕಾರ್ಡಿಫ್​ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್​ 49.5 ಓವರ್​​ಗಳಲ್ಲಿ 211 ಆಲ್​ಔಟ್​ ಆಯಿತು.. ಇದಕ್ಕುತ್ತರವಾಗಿ 37.1 ಓವರ್​​ಗಳಲ್ಲಿ 2 ವಿಕೆಟ್​ಗೆ 215 ರನ್​​ ಕಲೆ ಹಾಕಿ ಭರ್ಜರಿ ಜಯ ಸಾಧಿಸಿತು. ಇಂಗ್ಲೆಂಡ್​​ ತಂಡ ಎರಡನೇ ಬಾರಿ ಫೈನಲ್​​ಗೆ ಏರುವ ಕನಸು ನೂಚ್ಚು ನೂರಾಗಿದೆ..
ಸಾಧರಣ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿತ್ತು, 21.1 ಓವರ್​​ಗಳಲ್ಲಿ ಅಜರ್​ ಅಲಿ ಹಾಗೂ ಫಕ್ಹಾರ್​ ಜಮನ್​​ ಮೊದಲ ವಿಕೆಟ್​​ಗೆ 118 ರನ್​ಗಳ ಕಾಣಿಕೆ ನೀಡಿದ್ರು. ಉಭಯ ಆಟಗಾರರು ಅರ್ಧಶತಕದ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬಾಬರ್ ಆಜಮ್​​ (ಅಜೇಯ 38) ಹಾಗೂ ಮೊಹಮದ್​ ಹಫೀಜ್​ (ಅಜೇಯ 31) ತಂಡಕ್ಕೆ ಗೆಲುವಿನ ಹಾರವನ್ನು ತೊಡಿಸಿದ್ದರು.
ಈ ಮೂಲಕ ತವರಿನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​​ ಟೂರ್ನಿಯನ್ನು ಗೆಲ್ಲುವ ಹಾಟ್​ ಫೇವರಿಟ್​ ತಂಡ ಎನಿಸಿಕೊಂಡಿದ್ದ ಇಂಗ್ಲೆಂಡ್​ ತಂಡದ ಪ್ರಶಸ್ತಿ ಎತ್ತುವ ಆಸೆಗೆ ಪಾಕ್​ ತಣ್ಣೀರು ಎರಚಿದೆ..

ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ತಂಡದ ಆರಂಭವ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಜಾಸನ್​​ ರಾಯ್​ ಅವರ ಬದಲಿಗೆ ಇನಿಂಗ್ಸ್​ ಆರಂಭಿಸುವ ಹೊಣೆಯನ್ನು ಹೊತ್ತ ಜಾನಿ ಬೇರ್​​ಸ್ಟೋ (43) ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡ್ರು.. ಟೂರ್ನಿಯಲ್ಲಿ ಆಕರ್ಷಕ ಬ್ಯಾಟಿಂಗ್​ ನಡೆಸುತ್ತಿದ್ದ ಅಲೆಕ್ಸ್​​ ಹೇಲ್ಸ್​ (13) ಅವರು ರನ್​ ಬರವನ್ನು ಅನುಭವಿಸಿದ್ರು.. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಜೋ ರೂಟ್​ ತಂಡ ಸಂಕಷ್ಟದಲ್ಲಿದ್ದಾಗ ಎಚ್ಚರಿಕೆಯ ಆಟವನ್ನು ಆಡಿದರು.. ಇವರು 56 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 46 ರನ್​ ಬಾರಿಸಿ ಶಾಬಾದ್​ ಖಾನ್​ ಅವರಿಗೆ ವಿಕೆಟ್​ ಒಪ್ಪಿಸಿದರು.
ನಾಯಕ ಇಯಾನ್​ ಮಾರ್ಗನ್​​ (33), ಬೆನ್​ ಸ್ಟೋಕ್ಸ್​​ (34) ಕೊಂಚ ಮಟ್ಟಿಗೆ ಪಾಕ್​ ಬೌಲರ್​​ಗಳನ್ನು ಕಾಡಿದರು. ಜೋಸ್​ ಬಟ್ಲರ್​​, ಮೋಯಿನ್​ ಅಲಿ, ಆದಿಲ್​ ರಶೀದ್​​, ಸೇರಿದಂತೆ ಕೆಳ ಕ್ರಮಾಂಕದ ಆಟಗಾರರು ರನ್​ ಕಲೆ ಹಾಕಲಿಲ್ಲ.
ಹಸನ್​ ಮಿಂಚು
ಪಾಕಿಸ್ತಾನ ತಂಡದ ಮಧ್ಯಮ ವೇಗಿ ಹಸನ್​ ಅಲಿ ಕಮಾಲ್​ ಬೌಲಿಂಗ್​ ಪ್ರದರ್ಶನ ನೀಡಿದರು. ಇವರು 35 ರನ್​ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್​ ಕಬಳಿಸಿದರು. ಉಳಿದಂತೆ ಜುನೈದ್​ ಖಾನ್​​, ರುಮನ್​​ ರೇಸ್​​ ತಲಾ ಎರಡು ವಿಕೆಟ್​ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್​
ಇಂಗ್ಲೆಂಡ್​ 49.5 ಓವರ್​​ಗಳಲ್ಲಿ 211
ಪಾಕಿಸ್ತಾನ 37.1 ಓವರ್​ಗಳಲ್ಲಿ 2 ವಿಕೆಟ್​ಗೆ 215

Comments are closed.

Social Media Auto Publish Powered By : XYZScripts.com