Fitness mantra : ಶಾಹೀದ್ ‍ ಕಪೂರ್‍ ಪತ್ನಿ ಮೀರಾ ರಾಜಪುತ್ ಫಿಟ್ನೆಸ್‍ ಗುರು ಯಾರು…?

ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿಲ್ಲ? ಈಗಿನ ಎಲ್ಲರೂ ಫಿಟ್ನೆಸ್ಮಂತ್ರವನ್ನು ಜಪಿಸುತ್ತಾರೆ. ಅದರಲ್ಲೂ ಸಿನೆಮಾ ನಟ ನಟಿಯರು, ಮಾಡೆಲ್ಗಳಿಗೆ ಫಿಟ್ನೆಸ್ಬಗ್ಗೆ ಹೇಳಿ ಕೊಡಬೇಕಿಲ್ಲ. ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಜಿಮ್‍, ಡಯೆಟ್‍, ನಿಯಮಿತ ಆಹಾರ ಸೇವನೆ, ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಲ್ಲೇನಪ್ಪ ವಿಶೇಷ ಅಂತೀರಾ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ….

ಯಾರೇ ಆಗಲಿ ಗರ್ಭಿಣಿಯರಾದಾಗ ಮಾತ್ರ ಡಯೆಟ್ಪಾಲನೆಗೆ ಗುಡ್ಬೈ ಹೇಳುತ್ತಾರೆ. ಸುಂದರ ಮತ್ತು ಆರೋಗ್ಯವಂತ ಮಗು ಪಡೆಯಲು ಉತ್ತಮ ಆಹಾರ ಸೇವಿಸುತ್ತಾರೆ. ಅದು ತಾಯಿಯ ಆರೋಗ್ಯಕ್ಕೂ ಒಳ್ಳೆಯದು. ಕ್ರಮೇಣವಾಗಿ ಒಂದು ಮಗುವಿನ ತಾಯಿಯಾದಾಗ ತೂಕದಲ್ಲಿ ಹೆಚ್ಚಳವೂ ಆಗಬಹುದು, ತೂಕ ಇಳಿಯಲೂಬಹುದು. ಒಟ್ಟಾರೆ ಮೊದಲಿದ್ದ ಶೇಪ್ನ್ನು ದೇಹ ಕಳೆದುಕೊಳ್ಳುತ್ತದೆ. ತೀರಾ ಬಡಕಲು ದೇಹವಿದ್ದರೂ ನೋಡಲು ಆಕರ್ಷಕವೆನಿಸುವುದಿಲ್ಲ. ಹಾಗಂತ ನಟಿ ಮನಿಯರು ದಪ್ಪವಾದರೆ ಆಗಲಿ ಬಿಡಿ ಅಥವಾ ತೆಳ್ಳಗಿದ್ದೇನಲ್ಲಾ ಇನ್ನೇಕೆ ಜಿಮ್‍, ವರ್ಕೌಟ್ಮಾಡುವುದು ಎಂದುಕೊಳ್ಳುವುದಿಲ್ಲ. ತಮ್ಮ ದೇಹಕ್ಕೆ ಸುಂದರ ಆಕಾರ ನೀಡಲು ಮತ್ತು ಕಾಯ್ದುಕೊಳ್ಳಲು ಶ್ರಮಿಸುತ್ತಾರೆ.

ಈಗ ನಟ ಶಾಹೀದ್ಕಪೂರ್ಮತ್ತು ಪತ್ನಿ ಕೂಡ ಫಿಟ್ನೆಸ್ಮಂತ್ರ ಜಪಿಸುತ್ತಿದ್ದಾರೆ. ಶಾಹೀದ್ತಮ್ಮ ಪತ್ನಿ ದೇಹ ಸೌಂದರ್ಯ ಮತ್ತು ಫಿಟ್ನೆಸ್ಬರುವಂತೆ ಜಿಮ್ನಲ್ಲಿ ವರ್ಕೌಟ್ಮಾಡಿಸುತ್ತಿದ್ದಾರೆ. ಗರ್ಭಿಣಿಯಾದ ನಂತರ ಮೀರಾ ದೇಹದ ತೂಕ ಕಡಿಮೆಯಾಗಿತ್ತು. ತೆಳ್ಳಗಾಗಿದ್ದ ಪತ್ನಿ ಮೀರಾ ಮತ್ತೆ ಆಕರ್ಷಕವಾಗಿ ಕಾಣುವಂತೆ ಮತ್ತು ದೇಹ ಆಕಾರ ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಂತೆ ಶಾಹೀದ್ಖುದ್ದಾಗಿ ಟ್ರೈನಿಂಗ್ನೀಡುತ್ತಿದ್ದಾರೆ. ಮೀರಾಳಿಗೆ ಪ್ರತಿನಿತ್ಯ ತಾಲೀಮು ಮಾಡಿಸುತ್ತಿದ್ದಾರೆ. ಈಗ ಶಾಹೀದ್ಮುಂಬೈನಲ್ಲಿ ಪತ್ನಿಗೆ ಜಿಮ್ತರಬೇತಿ ನೀಡುವುದರಲ್ಲಿ ಬ್ಯುಸಿಯಾಗಿದ್ದಾನೆ.

ಶಾಹೀದ್ಆರೋಗ್ಯವಂತನಾಗಿದ್ದು, ಹೆಚ್ಚು ಫಿಟ್ಆಗಿದ್ದಾನೆ. ಪತ್ನಿ ಮೀರಾಗೂ ತನ್ನಂತೆ ಫಿಟ್ನೆಸ್ಕಾಯ್ದುಕೊಳ್ಳುವ ಕುರಿತು ಹೇಳಿಕೊಡುತ್ತಿದ್ದಾನೆ. ಸಧ್ಯಕ್ಕೆ ಶಾಹೀದ್‍, ನಿರ್ದೇಶಕ ಸಂಜಯ್ಲೀಲಾ ಬನ್ಸಾಲಿ ಅವರು ಚಿತ್ರೀಕರಿಸುತ್ತಿರುವ ಪದ್ಮಾವತಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Comments are closed.

Social Media Auto Publish Powered By : XYZScripts.com