ಹಾಲು ತರಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಉತ್ತರಕನ್ನಡ : ಹಾಲು ತರಲು ಹೋಗಿದ್ದ ಯುವತಿ ಮೇಲೆ  ಓರ್ವ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.  21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಅತ್ಯಾಚಾರದ ಆರೋಪಿ ಸುಬ್ರಹ್ಮಣ್ಯ ರೊಬೆಲ್‌ ಶೆಟ್ಟಿ (29) ಎಂಬಾತನನ್ನು ಹೊನ್ನಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆರೋಪಿಯ ಮನೆಯಿಂದ ಹಾಲು ತೆಗೆದುಕೊಂಡು ಹೋಗಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು,  ಈ ಸಂಬಂಧ ಹೊನ್ನಾವರ ಠಾಣೆಗೆ ಯುವತಿಯ ತಾಯಿ ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಆರೋಪಿ ಸುಬ್ರಹ್ಮಣ್ಯನ ಬಂಧನವಾಗಿದೆ.⁠⁠⁠⁠

Comments are closed.

Social Media Auto Publish Powered By : XYZScripts.com