ರೈತ ಬೆತ್ತಲಾಗಿ ಆತ್ಮಹತ್ಯೆಗೆ ಯತ್ನಿಸಿದ್ದು ದೇಶಕ್ಕಾದ ಅವಮಾನ, ಸಿ.ಎಂ, ಪಿ.ಎಂ ರಾಜಿನಾಮೆ ನೀಡಲಿ

ಮಂಗಳೂರು : ಮಂಡ್ಯದಲ್ಲಿ ರೈತ ಬೆತ್ತಲೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದು  ಇಡೀ ದೇಶಕ್ಕಾದ ಅವಮಾನ, ಮನುಷ್ಯನಾದವನು ನೋಡಲು ಸಾಧ್ಯವಾಗದ ಸ್ಥಿತಿಯದು.  ನೈತಿಕ ಹೊಣೆಹೊತ್ತು ನಮ್ಮ ಮುಖ್ಯಮಂತ್ರಿ ಮತ್ತು ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಜನಾರ್ಧನ ಪೂಜಾರಿ ಆಗ್ರಹಿಸಿದ್ದಾರೆ. ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರೈತ ಗೋಳಾಡುತ್ತಿದ್ದಾನೆ, ಬರಗಾಲದಿಂದ ರಾಜ್ಯ ತತ್ತರಿಸಿದೆ,  ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಬದಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವನ್ನ ರಾಜ್ಯಸರ್ಕಾರ ಮಾಡುತ್ತಿದೆ.
ರೈತರ ಸಾಲ ಮನ್ನಾ ಮಾಡಿದ ಮೇಲೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಿ. ಆದರೆ ಇಂದಿನ ರೈತರ ಸ್ಥಿತಿ ನೋಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ಸ್ಪಷ್ಟವಾಗುತ್ತೆ.  ಮಧ್ಯಪ್ರದೇಶ, ಯುಪಿಯಲ್ಲಿ ರೈತ ಸಾಲ ಮನ್ನಾ ಮಾಡಿದ್ದನ್ನು ನೋಡಿಯಾದರೂ ನೀವೂ ಅವರಂತೆ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾರೆ.

Comments are closed.