ಬಂದ್ ವಿಫಲವಾಗುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ : ವಾಟಾಳ್ ನಾಗರಾಜ್

ಬೆಂಗಳೂರು : ಸೋಮವಾರ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲವಾಗುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ, ಸೋಮವಾರ ಬೆಳಗ್ಗೆ 10 ಗಂಟೆ ಸಮಯ ನೀಡಿದ್ದ ಅವರು, ತಾವೇ ಒಂದೂವರೆ ಗಂಟೆ ತಡವಾಗಿ ಸಾ.ರಾ ಗೋವಿಂದ್‌, ಕೆ.ಆರ್‌ ಕುಮಾರ್‌ ಮತ್ತು ತಮ್ಮ ಬೆಂಬಲಿಗರೊಂದಿಗೆ ಟೌನ್‌ಹಾಲ್‌ಗೆ ಆಗಮಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಯಾಗುವುದಕ್ಕಾಗಿ ಫಲಾನುಭವಿ ಜಿಲ್ಲೆಗಳ ಹೋರಾಟಗಾರರು ಕಳೆದ ೨ ವರ್ಷಗಳ ಕಾಲ ಸತ್ಯಾಗ್ರಹ ಮಾಡಿದ್ದಾರೆ. ಆದರೆ ಅವರ ಪ್ರತಿಭಟನೆಯನ್ನ ಯಾರೂ ಕೇಳಿಲ್ಲ. ಗೋವಾದಿಂದ ನೀರು ಬಿಟ್ಟಿಲ್ಲ, ಮಹಾರಾಷ್ಟ್ರ ಮಧ್ಯಸ್ಥಿಕೆ ವಹಿಸಿಲ್ಲ. ಪ್ರಧಾನ ಮಂತ್ರಿಗಳೂ ರೈತರ ಕಷ್ಟಕ್ಕೆ ಕಿವಿಗೊಡಲಿಲ್ಲ. ಬೆಂಗಳೂರು, ರಾಮನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೋಲಾರಗಳಿಗೆ ಕುಡಿಯುವ ನೀರಿಲ್ಲ. ಬೆಳಗಾವಿಯಲ್ಲಿ ಮರಾಠಿ ಪುಂಡರು ಅಲ್ಲಿಯ ಕನ್ನಡಿಗರಿಗೆ ತೊಂದರೆ ಕೊಡುತ್ತಿದ್ದಾರೆ, ಅವರನ್ನ ಗಡಿಪಾರು ಮಾಡಬೇಕು ಎಂಬುದು ನಮ್ಮ ಒಂದು ಬೇಡಿಕೆ. ಆದರೆ ಆ ಬೇಡಿಕೆಯೂ ಸರ್ಕಾರ ಈಡೇರಿಸಿಲ್ಲ. ಇನ್ನು ಕಾಸರಗೋಡಿನಲ್ಲಿ ಮಲಯಾಳಮ್ ಅನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಸರಿಯಲ್ಲ. ಇನ್ನು ಕೇಂದ್ರದ ಕಾರ್ಖಾನೆಗಳನ್ನ ಖಾಸಗಿ ಕರಣ ಮಾಡುತ್ತಿರುವುದಕ್ಕೂ ನಮ್ಮ ವಿರೋಧವಿದೆ. ‘ರೈತರ ಸಾಲ ಮನ್ನಾ’ ಕೂಡ ಪ್ರಮುಖವಾದ ವಿಚಾರ. ಈ ಎಲ್ಲ ಬೇಡಿಕೆಗಳನ್ನೂ ಸರ್ಕಾರಕ್ಕೆ ಮನದಟ್ಟು ಮಾಡುವ ಉದ್ದೇಶದಿಂದ ಬಂದ್‌ಗೆ ಕರೆ ನೀಡಿದ್ದೆವು. ಇವೆಲ್ಲ ನನ್ನ ವೈಯಕ್ತಿಕ ಬೇಡಿಕೆಗಳಲ್ಲ. ಸಮಗ್ರ ಕನ್ನಡಿಗರಿಗೆ ಬೇಕಾದ ಬೇಡಿಕೆಗಳು ಎಂದಿದ್ದಾರೆ.

ಬೆಂಗಳೂರಿನಲ್ಲಿ ಬಂದ್‌ ಯಶಸ್ವಿಯಾಗದಂತೆ ಸರ್ಕಾರವೇ ಪಿತೂರಿ ನಡೆಸಿದೆ ಅದಕ್ಕೋಸ್ಕರವೇ ಪೊಲೀಸ್‌ ಇಲಾಖೆ ಸೆಕ್ಷನ್‌ 107ರ ಪ್ರಕಾರ 500 ಜನರಿಗೆ ನೋಟೀಸ್‌ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಭಟನೆ ಶುರುವಾಗುದಕ್ಕೂ ಮುಂಚೆಯೇ 2 ಸಾವಿರ ಜನರನ್ನ ಬಂಧಿಸಿದ್ದಾರೆ. ಇದೆಲ್ಲ ದೃಷ್ಟಿಯಿಂದಲೂ ನಮ್ಮ ಹೋರಾಟ ಗಂಭೀರವಾಗಿದೆ ಎಂದು ವಾಟಾಳ್‌ ಅಭಿಪ್ರಾಯಪಟ್ಟಿದ್ದಾರೆ.

3 thoughts on “ಬಂದ್ ವಿಫಲವಾಗುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ : ವಾಟಾಳ್ ನಾಗರಾಜ್

 • October 20, 2017 at 7:20 PM
  Permalink

  Nice post. I learn something new and challenging on blogs I stumbleupon every day.
  It’s always useful to read content from other writers and practice
  something from their websites.

 • October 20, 2017 at 7:35 PM
  Permalink

  You’re so cool! I do not believe I’ve read through a single thing like
  that before. So good to find another person with unique thoughts on this issue.
  Really.. thanks for starting this up. This web site is something that is
  needed on the internet, someone with some originality!

Comments are closed.

Social Media Auto Publish Powered By : XYZScripts.com