ಫ್ರೆಂಚ್ ಓಪನ್ : ಜೆಲೆನಾ ಒಸ್ಟಾಪೆಂಕೊ ಗೆ ಮಹಿಳೆಯರ ಸಿಂಗಲ್ಸ್ ಕಿರೀಟ

ಪ್ಯಾರಿಸ್ : ಲ್ಯಾಟ್ವಿಯಾ ದೇಶದ 20 ರ ಹರೆಯದ ಜೆಲೆನಾ ಒಸ್ಟಾಪೆಂಕೊ ಫ್ರೆಂಚ್ ಓಪನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ. 4 ನೇ ಶ್ರೇಯಾಂಕಿತ ಆಟಗಾರ್ತಿ ರೊಮೇನಿಯಾ ದೇಶದ ಸಿಮೋನಾ ಹಾಲೆಪ್ ಅವರ ವಿರುದ್ಧ 4-6, 6-4, 6-3 ಸೆಟ್ ಗಳಿಂದ ಜಯಗಳಿಸಿ ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಮೊದಲ ಸೆಟ್ ಅನ್ನು 6-3 ರಿಂದ ಸೋತು, ಹಿನ್ನಡೆ ಅನುಭವಿಸಿದರೂ, ಎದೆಗುಂದದ ಜೆಲೆನಾ 2 ಹಾಗೂ 3ನೇ ಸೆಟ್ ಗಳಲ್ಲಿ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ.

ಜೆಲೆನಾ ಯಾವುದೇ ಶ್ರೇಯಾಂಕವನ್ನು ಹೊಂದಿಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಜೂನ್ 8 ರಂದೇ ತಮ್ಮ 20 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಜೆಲೆನಾಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆಲುವು ಖುಶಿಯನ್ನು ನೂರ್ಮಡಿಗೊಳಿಸಿದಂತಾಗಿದೆ. ಜೆಲೆನಾ ಫ್ರೆಂಚ್ ಓಪನ್ ಗೆದ್ದಿರುವ ಲ್ಯಾಟ್ವಿಯಾ ದೇಶದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅಲ್ಲದೇ ಅತಿ ಚಿಕ್ಕ ವಯಸ್ಸಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆಯೂ ಈಗ ಇವರದ್ದಾಗಿದೆ. ಈ ಮೊದಲು ಈ ದಾಖಲೆ ಕ್ರೋವೇಶಿಯಾದ ಇವಾ ಮಜೋಲಿ ಅವರ ಹೆಸರಲ್ಲಿತ್ತು.
ಇನ್ನು ಪುರುಷರ ಡಬಲ್ಸ್ ವಿಭಾಗದ ಫಯನಲ್ ಪಂದ್ಯದಲ್ಲಿ ಅಮೇರಿಕಾದ ರಯಾನ್ ಹ್ಯಾರಿಸನ್ ಹಾಗೂ ನ್ಯೂಜಿಲೆಂಡ್ ನ ಮೈಕಲ್ ವೀನಸ್ ಜೋಡಿ, ಅಮೇರಿಕದ ಡೊನಾಲ್ಡ್ ಯಂಗ್ ಹಾಗೂ ಸ್ಯಾಂಟಿಯಾಗೊ ಗೊಂಜಾಲೆಜ್ ಜೋಡಿಯ ವಿರುದ್ಧ 7-6, 6-7, 6-3 ಸೆಟ್ ಗಳಲ್ಲಿ ಜಯಗಳಿಸಿ ಫ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 thoughts on “ಫ್ರೆಂಚ್ ಓಪನ್ : ಜೆಲೆನಾ ಒಸ್ಟಾಪೆಂಕೊ ಗೆ ಮಹಿಳೆಯರ ಸಿಂಗಲ್ಸ್ ಕಿರೀಟ

 • October 18, 2017 at 1:28 PM
  Permalink

  I am trying to start my own blog, but I want to make certain it is on the popular site where people will read it. We plan on discussing sports, video gaming and other things is interesting at the time. What are the best/most popular sites to blog on?.

 • October 18, 2017 at 1:44 PM
  Permalink

  How can i start a internet site for free or cheap?

 • October 18, 2017 at 3:12 PM
  Permalink

  I have always been looking intended for creative composing training(novel writing), cause you can only instruct yourself a lot until you will need outside help!.. Has anyone had any positive experience of such something that they would recommend?.

 • October 25, 2017 at 10:16 AM
  Permalink

  I have fun with, lead to I discovered just what I used to be having a look for. You have ended my 4 day lengthy hunt! God Bless you man. Have a great day. Bye

Comments are closed.