ಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ಸ್ಥಾನಕ್ಕಾಗಿ ನಾಳೆ ಭಾರತ – ದಕ್ಷಿಣ ಆಫ್ರಿಕಾ ಸೆಣಸಾಟ

ಲಂಡನ್ : ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಾಳೆ ಲಂಡನ್ನಿನ ಕೆನ್ನಿಂಗ್ಟನ್ ಓವಲ್ ನಲ್ಲಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸೆಮಿಫೈನಲ್ ಗಾಗಿ ಕಾದಾಟ ನಡೆಯಲಿದೆ. ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ಭಾರತ, ಸೆಮಿಫೈನಲ್ ನಲ್ಲಿ ಸ್ಥಾನ ಪಡೆಯಲು ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ತವಕದಲ್ಲಿದೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ವೈಫಲ್ಯದ ನಂತರ ನಾಳಿನ ಪಂದ್ಯದ ಬಾರತದ ‘ಪ್ಲೇಯಿಂಗ್ 11’ ನಲ್ಲಿ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅತ್ತ ದಕ್ಷಿಣ ಆಫ್ರಿಕಾ ಕೂಡ ತನ್ನ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿ ‘ಮಾಡು ಇಲ್ಲವೆ ಮಡಿ’ ಎಂಬ ಸ್ಥಿತಿಗೆ ತಲುಪಿದೆ. ‘ಬಿ’ ಗುಂಪಿನ ಎಲ್ಲ ನಾಲ್ಕೂ ತಂಡಗಳೂ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿವೆ. ನಾಲ್ಕೂ ತಂಡಗಳೂ ಎರಡೆರಡು ಪಾಯಿಂಟ್ ಗಳನ್ನು ಹೊಂದಿದ್ದು ರನ್ ರೇಟ್ ಆಧಾರದ ಮೇಲೆ ಭಾರತ ಇನ್ನೂ ಅಗ್ರಸ್ಥಾನದಲ್ಲಿದೆ. ‘ಎ’ ಗುಂಪಿನಿಂದ ಇಂಗ್ಲೆಂಡ್ ಈಗಾಗಲೇ ಸೇಮಿಸ್ ಸ್ಥಾನ ಭದ್ರಪಡಿಸಿಕೊಂಡಿದ್ದು ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

ತಂಡಗಳು ಹೀಗಿವೆ :

ಭಾರತ : ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾಹ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್.

ದಕ್ಷಿಣ ಆಫ್ರಿಕಾ : ಕ್ವಿಂಟನ್ ಡಿ ಕಾಕ್, ಎ ಬಿ ಡಿವಿಲಿಯರ್ಸ್, ಹಾಶಿಮ್ ಆಮ್ಲಾ, ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಜೆ ಪಿ ಡುಮಿನಿ, ವೇಯ್ನ್ ಪಾರ್ನೆಲ್, ಕ್ರಿಸ್ ಮಾರಿಸ್, ಕಗಿಸೋ ರಬಾಡಾ, ಮಾರ್ನ್ ಮಾರ್ಕೆಲ್, ಇಮ್ರಾನ್ ತಾಹಿರ್, ಅ್ಯಂಡಿಲೆ ಫೆಹ್ಲುಕ್ವಾಯೋ, ಡ್ವೇನ್ ಪ್ರೆಟೋರಿಯಸ್, ಕೇಶವ್ ಮಹಾರಾಜ್, ಫರ್ಹಾನ್ ಬೆಹರ್ದಿಯನ್.

Comments are closed.

Social Media Auto Publish Powered By : XYZScripts.com