ಧಾರವಾಡ : ಕಾರ್ ಪಲ್ಟಿಯಾಗಿ ಜಿಪಂ ಯೋಜನಾಧಿಕಾರಿ ಸಾವು

ಧಾರವಾಡ : ಧಾರವಾಡದ ಮಮ್ಮಿಗಟ್ಟಿ ಬಳಿ ಕಾರ್ ಪಲ್ಟಿಯಾಗಿದ್ದು ಬೆಳಗಾವಿ ಜಿಲ್ಲಾ ಪಂಚಾಯತ್ ನಲ್ಲಿ
ಮುಖ್ಯ ಯೋಜನಾಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಶೋಕ ದೊಡ್ಡಮನಿ ಸಾವಿಗೀಡಾಗಿದ್ದಾರೆ.
ಕಾರಿನಲ್ಲಿ ಪಯಣಿಸುತ್ತಿದ್ದ, ಮೃತ ಅಶೋಕ ದೊಡ್ಡಮನಿ ಅವರ ಪತ್ನಿ ಗೀತಾ ದೊಡ್ಡಮನಿ ಹಾಗೂ
ಚಾಲಕ ಸುನೀಲ್ ಗೆ ಗಾಯಗಳಾಗಿದ್ದು ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗಾವಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments are closed.