ಮದುವೆ ಮಂಟಪದಲ್ಲೇ ಇನ್ಯಾರನ್ನೋ ಮದುವೆಯಾಗುತ್ತಿದ್ದ ಪ್ರಿಯಕರನನ್ನು ವರಿಸಿದಳು..

ತಮಿಳುನಾಡು : ಪ್ರೀತಿಸಿದವರೆಲ್ಲಾ ಮದುವೆಯಾಗಲ್ಲ. ಬಹುತೇಕ ಪ್ರೇಮಿಗಳು, ಮನೆ, ವೃತ್ತಿ, ಜಾತಿ, ಬಡತನ ಹೀಗೆ ನೂರೆಂಟು ಕಾರಣಗಳಿಂದ ಪ್ರೀತಿಸಿದವರನ್ನು ಮದುವೆಯಾಗದೇ, ಇನ್ಯಾರನ್ನೋ ಮದುವೆಯಾಗಿ ಬಿಡುತ್ತಾರೆ. ಎಲ್ಲವನ್ನೂ ಮತ್ತು ಎಲ್ಲರನ್ನೂ ಎದುರಿಸಿ ಮದುವೆಯಾಗುತ್ತೇನೆ ಎಂಬ ತೀರ್ಮಾನ ಮಾಡಿ, ಗಟ್ಟಿಯಾಗಿ ನಿಲ್ಲುವವರು ಕಡಿಮೆ. ಆದರೆ ಇಲ್ಲೊಬ್ಬಳು ಬೇರೆ ಮದುವೆಯಾಗುತ್ತಿದ್ದ ಪ್ರಿಯಕರನನ್ನು ತಡೆದು, ಅವನನ್ನೇ ಮದುವೆಯಾಗಿದ್ದಾಳೆ.

ಹೀಗೆ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ವಿವಾಹ ಮಂಟಪದಲ್ಲಿ ಒಂದಾಗಿದೆ. ಪ್ರೀತಿಸಿದವ ಮನೆಯವರ ಮಾತಿಗೆ ಮಣಿದು ಬೇರೊಬ್ಬಳನ್ನು ವಿವಾಹವಾಗುತ್ತಿದ್ದಾಗ ಪ್ರೀತಿಸಿದವಳನ್ನೇ ಮದುವೆಯಾದ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿಯಲ್ಲಿ ನಡೆದಿದೆ.

ಗೋಪಾಲಕೃಷ್ಣ ಎಂಬುವವನು 21 ವರ್ಷದ ಅರ್ಚನಾ ಎಂಬುವಳನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ. ಇಷ್ಟು ವರ್ಷಗಳ ಕಾಲ ಅರ್ಚನಾಳನ್ನು ಪ್ರೀತಿಸುತ್ತಿದ್ದ ಗೋಪಾಲಕೃಷ್ಣ ಮನೆಯವರ ಮಾತಿಗೆ ಮಣಿದು ಇದ್ದಕ್ಕಿದ್ದಂತೆ ಬೇರೆ ಯುವತಿಯೊಂದಿಗೆ ವಿವಾಹವಾಗುತ್ತಿದ್ದ. ಇದನ್ನು ತಿಳಿದು ಮದುವೆ ಮಂಟಪಕ್ಕೆ ಧಾವಿಸಿ ಬಂದ ಅರ್ಚನಾ ಮದುವೆಯನ್ನು ನಿಲ್ಲಿಸಿದ್ದಾಳೆ. ತಾವಿಬ್ಬರೂ ಆರು ವರ್ಷಗಳಿಂದ ಪ್ರೀತಿಸಿದ್ದೇವೆ. ಈಗ ಇವರು ಬೇರೆ ಮದುವೆಯಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಇದನ್ನು ಕಂಡು ಮದುವೆಗೆ ಆಗಮಿಸಿದ್ದವರು ವರ ಗೋಪಾಲಕೃಷ್ಣನಿಗೆ ಅರ್ಚನಾಳನ್ನು ಕೊಟ್ಟು ಮದುವೆ ಮಾಡಿ ಎಂದು ತಿಳಿ ಹೇಳಿದ್ದಾರೆ. ಇದರಿಂದಾಗಿ ಮದುವೆ ಮಂಟಪದಲ್ಲಿ ಪ್ರೇಮಿಗಳು ಒಂದಾಗಿ ಹಾರ ಬದಲಾಯಿಸಿಕೊಂಡಿದ್ದಾರೆ.

ಈ ಘಟನೆ ನೋಡಲು ಒಂದು ಸಿನೆಮಾ ಕಥೆಯಂತೆ ಭಾಸವಾದರೂ ಇದು ವಾಸ್ತವದಲ್ಲಿ ನಡೆದದ್ದು. ಗೋಪಾಲಕೃಷ್ಣನ ಕುಟುಂಬಸ್ಥರು ಅರ್ಚನಾಳನ್ನು ವಿರೋಧಿಸಿದರೂ ಕೊನೆಗೆ ಸಮ್ಮತಿಸಲೇಬೇಕಾಯಿತು. ಈ ಮದುವೆಗೆ ವಿಕ್ರವಂಡಿ ಪೊಲೀಸರು ಸಾಕ್ಷಿಯಾದರು. ಆದರೆ ಕುಟುಂಬಸ್ಥರು ನೋಡಿದ್ದ ವಧುವಿನ ಸ್ಥಿತಿ ಮಾತ್ರ ಶೋಚ ನೀಯವಾಗಿತ್ತು . ಕೊನೆಗೂ ಅರ್ಚನಾ ತನ್ನ ಪ್ರಿಯಕರನನ್ನೇ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾಳೆ.

4 thoughts on “ಮದುವೆ ಮಂಟಪದಲ್ಲೇ ಇನ್ಯಾರನ್ನೋ ಮದುವೆಯಾಗುತ್ತಿದ್ದ ಪ್ರಿಯಕರನನ್ನು ವರಿಸಿದಳು..

 • October 18, 2017 at 2:13 PM
  Permalink

  Excellent limited accounts and an administrator account on Or windows 7. I would like to import all my Firefox settings from my Limited Account to my Admin Account so they are the exact same..

 • October 18, 2017 at 3:09 PM
  Permalink

  Fundamentally, I want this to be on the main web page where all my articles go but then I also want to be in a position to put it on a separate page of my blog page dedicated to only that subject matter. Hopefully this makes sense!.

 • October 20, 2017 at 11:38 PM
  Permalink

  What blog hosting website should I create a blog page on?

Comments are closed.