ಅಕ್ರಮ ಹಸು ಸಾಗಣೆ ಆರೋಪ: ತಮಿಳುನಾಡಿನಲ್ಲಿ ಸಿಲುಕಿದ್ದಾರೆ ಕರುನಾಡ ರೈತರು

ತಮಿಳುನಾಡಿನ ಹಿರೋಡ್‌ ಸಂತೆಯಿಂದ 27 ಹಸುಗಳನ್ನ ಖರೀದಿಸಿದ್ದ ಕರ್ನಾಟಕದ ರೈತರು 2 ಲಾರಿಗಳಲ್ಲಿ ಅವುಗಳನ್ನ ಸಾಗಿಸುತ್ತಿದ್ದ ವೇಳೆ ತಮಿಳುನಾಡು ಪೊಲೀಸರು ದಾಳಿ ಮಾಡಿದ್ದು, ಅಕ್ರಮ ಹಸು ಸಾಗಣೆ ಆರೋಪದಡಿ ಅವರು ಕರ್ನಾಟಕದ ರೈತರಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ  ಎನ್ನಲಾಗಿದೆ.  ಹಸು ಖರೀದಿಗಾಗಿ ತಮಿಳುನಾಡಿಗೆ ಹೋಗಿದ್ದ ಕರ್ನಾಟಕ ರೈತರ ಲಾರಿಯನ್ನ ಗೋಪಿ ಬಳಿ ತಡೆಹಿಡಿದಿದ್ದು, ಗುರುವಾರ ಮಧ್ಯಾಹ್ನದಿಂದ ಶುಕ್ರವಾರದವರೆಗೂ ಅಲ್ಲಿಯೇ ಇರುವಂತಾಗಿದೆ.

ಹಿಡಿದಿಟ್ಟುಕೊಂಡಿರುವ ರೈತರಿಗೆ ಆಹಾರ ನೀರು ಕೊಡದೇ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತಮಿಳುನಾಡು ಪೊಲೀಸರು ಮತ್ತು ಕೆಲ ಸಂಘಟನಾಕಾರರಿಂದ ಬಂಧಿಸಲ್ಪಟ್ಟ ರೈತರು ಸಹಾಯಕ್ಕಾಗಿ ಕರ್ನಾಟಕ ಸರ್ಕಾರವನ್ನ ಅಂಗಲಾಚುತ್ತಿದ್ದು, ಇಂದಿಗೂ ಕರ್ನಾಟಕ ಸರ್ಕಾರ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

Comments are closed.

Social Media Auto Publish Powered By : XYZScripts.com