ಜೈಲಿನಲ್ಲಿದ್ದುಕೊಂಡೇ ಕಂಟ್ರೋಲ್, ಹಣ ನೀಡದಿದ್ದಕ್ಕೆ ಕಾರಿನ ಗಾಜು ಪೀಸ್ ಪೀಸ್ !

ವಿಜಯನಗರದ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿ ಅವರ ಮನೆಯ ಮುಂದಿನ ಕಾರ್‌ಗಳ ಗಾಜು ಪುಡಿ ಪುಡಿ ಮಾಡಿದ್ದ ಜೈಲಿನಲ್ಲಿರುವ ಕ್ರಿಮಿನಲ್‌ ಒಬ್ಬನ ಸಹಚರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.  ನವೀನ್ ಅಲಿಯಾಸ್ ಮುನಿರತ್ನಂ ಉರುಫ್ ಬಂಕ್ ಸೀನಾ, ಗುರು, ಆಕಾಶ್,  ಕಿರಣ್ ಅಲಿಯಾಸ್ ತೊಟ್ಟೆ ಬಂಧಿತ ಆರೋಪಿಗಳಾಗಿದ್ದು, ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
⁠⁠⁠⁠ಕೊಲೆ ಪ್ರಕರಣದಲ್ಲಿ ಭಾಗಿಯಾಗಿ  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿ ರವಿ ಅಲಿಯಾಸ್‌ ಗುಂಡ ತನ್ನ ಹಿಂಬಾಲಕರಿಂದ ಕೆಲಸ ಮಾಡಿಸುತ್ತಿದ್ದು,  ಹಣ ನೀಡಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಉದ್ಯಮಿಯೊಬ್ಬರ ಮನೆ ಮುಂದೆ ನಿಲ್ಲಿಸಿದ ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿಸಿರುವ ಘಟನೆ ಶನಿವಾರ ತಡರಾತ್ರಿ 12.30 ರ ಸಮಯದಲ್ಲಿ ಬೆಂಗಳೂರಿನ ವಿಜಯನಗರ ಬಳಿಯ ಅಮರಜೋತಿನಗರದಲ್ಲಿ ನಡೆದಿತ್ತು.  ಜೈಲಿನಲ್ಲಿರುವ ಅಪರಾಧಿ ಗುಂಡ, ಪೋನ್ ಮುಖಾಂತರ 50 ಸಾವಿರ ಹಣಕ್ಕಾಗಿ ಬೆಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದ್ದು, ಸ್ಥಳ ಪರಿಶೀಲಿಸಿದ ಬಳಿಕೆ ವಿಜಯನಗರ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದರು. ಇದೀಗ ಗೂಂಡಾನ ಸಹಚರರನ್ನ ಬಂಧಿಸಿದ್ದಾರೆ.

Comments are closed.

Social Media Auto Publish Powered By : XYZScripts.com