ಬೆಳಗಾವಿ : ಖಾರದ ಪುಡಿ ಎರಚಿ ದರೋಡೆ ಮಾಡಿದ್ದ ಖದೀಮರ ಬಂಧನ

ಬೆಳಗಾವಿ : ಹಾಡ ಹಗಲೇ ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದ ಖತರನಾಕ್ ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಜೂನ್ 1 ರಂದು ಉದ್ಯಮಿ ಅನಿಲ್ ಪೋರವಾಲ್ ಎಂಬುವರ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿದ್ದರು.  ಉದ್ಯಮಿ ಅನಿಲ್ ಪೋರವಾಲ್ ಪಾನ್ ಮಸಾಲಾಹೊಲ್ ಸೇಲ್ ವ್ಯಾಪಾರಿ.  ಇವರ ಅಂಗಡಿ ಬಳಿ ತಳ್ಳು ಗಾಡಿಯಲ್ಲಿ ಬಾಳೆಹಣ್ಣು ಮಾರುತ್ತಿದ್ದ ವ್ಯಕ್ತಿಯಿಂದ ಮಾಹಿತಿ ಪಡೆದು ಈ ದರೋಡೆಗೆ ಸಂಚು ರೂಪಿಸಲಾಗಿರುತ್ತದೆ.

ಅದರಂತೆ ಜೂನ್ 1 ರಂದು ಅನಿಲ್ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಕೈಯಲ್ಲಿದ್ದ ಬ್ಯಾಗ್ ಕಸಿದುಕೊಂಡು ಆರೋಪಿಗಳು ಪರಾರಿಯಾಗುತ್ತಾರೆ.
ಈ ಬ್ಯಾಗ್ ನಲ್ಲಿ 9.88 ಲಕ್ಷ ಹಣವನ್ನು ಎಗರಿಸಲಾಗುತ್ತದೆ. ಸ್ಥಳೀಯ ಸಿಸಿಟಿವಿ ದೃಶ್ಯಗಳ ಮಾಹಿತಿಯ ಆಧಾರದ ಮೇಲೆ ಪ್ರಕರಣ ತನಿಖೆ ನಡೆಸಿದ ಸಿಸಿಬಿ ಪೊಲೀಸರು
5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿರಣ್ ಮದನ್ನವರ್, ರವಿ ತಳವಾರ್, ಜ್ಯೋತಿಬಾ ಹಂಚಿನಮನಿ, ಅನಿಲ್ ಮಡಿವಾಳ್
ಹಾಗೂ ರಾಜೇಶ ಕಿರಣ್ ವರೂರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಪಿಯುಸಿ ವಿದ್ಯಾರ್ಥೀಗಳು ಸೇರಿಕೊಂಡಿದ್ದಾರೆ.
ಅಪರಾಧಕ್ಕೆ ಬಳಸಿದ್ದ ಬೈಕ್ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

Comments are closed.

Social Media Auto Publish Powered By : XYZScripts.com