‘ ಕ್ವೀನ್ ‘ ಕನ್ನಡದ ರೀಮೇಕ್ ‘ ಬಟರ್ ಫ್ಲೈ’ ನಲ್ಲಿ ಪಾರುಲ್ ಯಾದವ್

ಪಾರುಲ್‌ ಪ್ಯಾರ್ಗೆ ಹುಡಗಿ ಅಂತಲೇ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿರುವ ನಟಿ ಮಣಿ. ಸ್ಯಾಂಡಲ್‌ವುಡ್‌ ಅಂಗಳದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಪಾರುಲ್‌ ಯಾದವ್‌, ಇದೀಗ ಚಿಟ್ಟೆಯಂತೆ ಹಾರುವುದಕ್ಕೆ ಹೊರಟಿದ್ದಾರೆ.
ಬಾಲಿವುಡ್‌ ಅಂಗಳದಲ್ಲಿ ಕ್ವೀನ್‌ ಅನ್ನೋ ಸಿನಿಮಾ ಬಂದಿದ್ದೇ ಬಂದಿದ್ದು, ಆ ಸಿನಿಮಾ ಮಾಡಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಕಂಗನಾ ರಣಾವತ್ ನೋಡಿ, ನಾನು ಈ ಸಿನಿಮಾ ರಿಮೇಕ್‌ ಮಾಡಬೇಕು, ನಾನು ಈ ಸಿನಿಮಾ ರಿಮೇಕ್‌ ಮಾಡಬೇಕು ಅಂತ, ಸೌತ್‌ ಇಂಡಿಯಾ ನಟಿಯರೆಲ್ಲಾ ಸಾಲು ಸಾಲಾಗಿ ಕನಸು ಕಂಡರು. ಅಂತಹ ಕನಸು ಕಂಡವರಲ್ಲಿ ಕನ್ನಡದ ನಟಿ ಎನಿಸಿಕೊಂಡಿರುವ ಪ್ಯಾರ್ಗೇ ಪಾರುಲ್‌ ಯಾದವ್ ಕೂಡ ಒಬ್ಬರು. ಇಂತಹ ಪಾರುಲ್‌ ಕ್ವೀನ್‌ ಆಗುವ ಕನಸು ಇದೀಗ ನಿಜವಾಗಿದೆ.
ಕ್ವೀನ್‌ ರಿಮೇಕ್‌ಗೆ ರಮೇಶ್‌ ಅರವಿಂದ್‌ ನಿರ್ದೇಶನ ಮಾಡುತ್ತಿದ್ದಾರೆ.
ಪಾರುಲ್‌ ಹುಟ್ಟುಹಬ್ಬದಂದೇ, ಕ್ವೀನ್‌ ರಿಮೇಕ್‌, ಕನ್ನಡದಲ್ಲಿ ಸೆಟ್ಟೇರಿದೆ. ಹಿಂದಿಯಲ್ಲಿ ಕಂಗನಾ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್‌ ಯಾದವ್‌ ಮಾಡುತ್ತಿದ್ದಾರೆ. ಪಾರುಲ್‌ ಸಿನಿಮಾಗೆ ಬಟರ್‌ ಫ್ಲೈ ಅಂತ ನಾಮಕರಣ ಮಾಡಿದ್ದು, ಪಾತರಗಿತ್ತಿ ಅನ್ನೋ ಟ್ಯಾಗ್‌ಲೈನ್‌ ಅನ್ನು ಕೊಡಲಾಗಿದೆ. ವಿಶೇಷ ಅಂದರೆ ಈ ಸಿನಿಮಾವನ್ನ ರಿಮೇಕ್‌ ಸಿನಿಮಾಗಳ ಸ್ಪೆಷಲಿಸ್ಟ್‌ ರಮೇಶ್ ಅರವಿಂದ್‌ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡದ ಜೊತೆಗೆ ಬಟರ್‌ಫ್ಲೈ ತಮಿಳಿನಲ್ಲೂ ಶುರುವಾಗಿದೆ. ತಮಿಳಿನ ಕ್ವೀನ್‌ಗೂ ರಮೇಶ್‌ ಅರವಿಂದ್ ನಿರ್ದೇಶಕರು. ಬಟರ್‌ ಫ್ಲೈ ಸಿನಿಮಾವನ್ನು ಲಂಡನ್‌ ಮೂಲದ ಮನೋಜ್‌ ಕೇಶವನ್ ಮತ್ತು ಮನುಕುಮಾರನ್‌ ಅನ್ನುವವರು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಒಟ್ಟು ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದ್ದು, ನಾಲ್ಕು ಭಾಷೆಯಲ್ಲಿ ಕನ್ನಡ ಮತ್ತು ತಮಿಳು ಚಿತ್ರಗಳನ್ನು ಮಾತ್ರ ರಮೇಶ್‌ ಅರವಿಂದ್‌ ನಿರ್ದೇಶನ ಮಾಡುತ್ತಿದ್ದಾರಂತೆ. ಅಂದಹಾಗೆ, ಈ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾರುಲ್‌ ಹುಟ್ಟುಹಬ್ಬದ ಪ್ರಯುಕ್ತ ಕಲರ್‌ಫುಲ್ ಆಗಿ ಸೆಟ್ಟೇರಿಸಿದರು. ಸಿನಿಮಾ ಸೆಟ್ಟೇರಿಸುವುದರ ಜೊತೆಗೆ ಚಿತ್ರದ ಬಗ್ಗೆ ವಿವರವಾಗಿ ಮಾತನಾಡಿದರು.

ಒಟ್ಟಾರೆ, 2014 ರಲ್ಲಿ ತೆರೆಕಂಡು, ದೇಶಾದಾದ್ಯಂತ ಸುದ್ದಿ ಮಾಡಿದ್ದ ಕ್ವೀನ್‌ ದಕ್ಷಿಣ ಭಾರತದ ಅವತರಣಿಕೆಗಳು ಬಹಳ ಜೋರಾಗಿಯೇ ತಯಾರಾಗುತ್ತಿವೆ. ಇವರು ಹೇಳುತ್ತಿರುವುದನ್ನು ಕೇಳುತ್ತಿದ್ದರೆ, ಕ್ವೀನ್‌ ಕನ್ನಡದ  ರಿಮೇಕ್‌ ‘ ಬಟರ್‌ ಫ್ಲೈ ‘ ಹೊಸ ವರ್ಷಕ್ಕೆ ಪ್ರೇಕ್ಷಕರೆದುರಿಗೆ ಬರುವ ಸಾಧ್ಯತೆ ಇದೆ. ಅದೇನೆ ಇದ್ದರೂ ಐಟಂ ಡ್ಯಾನ್ಸ್‌ನಿಂದ ಹೊರ ಬಂದು ಹೊಸ ಬಗೆಯ ಪಾತ್ರವನ್ನಾರಿಸಿಕೊಂಡು ಪಾರುಲ್‌ ಮಾಡುತ್ತಿರುವ ಈ ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನುವುದೇ ಸದ್ಯದ ಕುತೂಹಲ.

2 thoughts on “‘ ಕ್ವೀನ್ ‘ ಕನ್ನಡದ ರೀಮೇಕ್ ‘ ಬಟರ್ ಫ್ಲೈ’ ನಲ್ಲಿ ಪಾರುಲ್ ಯಾದವ್

  • October 24, 2017 at 7:13 PM
    Permalink

    Heya i am for the first time here. I came across this board and I find It really useful & it helped me out a lot. I hope to give something back and aid others like you helped me.

  • October 25, 2017 at 10:18 AM
    Permalink

    Simply desire to say your article is as astounding. The clearness in your post is simply excellent and i can assume you’re an expert on this subject. Fine with your permission let me to grab your RSS feed to keep updated with forthcoming post. Thanks a million and please carry on the rewarding work.

Comments are closed.