ಎನ್‍ಡಿಟಿವಿ ಮೇಲೆ ನಡೆದ CBI ದಾಳಿಗೆ ಜಗತ್ತಿನಾದ್ಯಂತ ವಿರೋಧ ….

ಎನ್‍ಡಿಟಿವಿ ಕಚೇರಿ ಮತ್ತು ಸಂಸ್ಥಾಪಕರ ಮನೆ ಮೇಲೆ CBI ದಾಳಿ ಮಾಡಿತ್ತು. ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಆಡಳಿತಾರೂಢ ಸರ್ಕಾರಗಳು ದಾಳಿ ಮಾಡಿರುವುದನ್ನು ದೇಶಾದ್ಯಂತ  ಕಾರ್ಯನಿರ್ವಹಿಸುತ್ತಿರುವ ಮಾಧ್ಯಾಮ ಪ್ರತಿನಿಧಿಗಳು, ಪತ್ರಕರ್ತರು ವಿರೋಧಿಸಿದ್ದರು. ಭಾರತೀಯ ಮಾಧ್ಯಮಗಳ ಮೇಲೆ ಇತ್ತೀಚೆಗೆ ಬೆದರಿಕೆಯೊಡ್ಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜಕಾಣಿಗಳು ಅಡ್ಡಿಪಡಿಸುತ್ತಿದ್ದಾರೆ. ವಾಸ್ತವ ಮತ್ತು ನಿಜಾಂಶವನ್ನು ಬಯಲಿಗೆಳೆದು, ತಪ್ಪಿಸ್ಥರನ್ನು ಶಿಕ್ಷೆಗೆ ಗುರಿಪಡಿಸುತ್ತಿರುವ ಎನ್‍ಡಿಟಿವಿ ಮೇಲೆ ದಾಳಿ ಮಾಡಿದ್ದು ಹೊಸ ರೀತಿಯ ಕಾರ್ಯತಂತ್ರಕ್ಕೆ ಕಾರಣವಾಗಿದೆ. ಅಲ್ಲದೇ ಪತ್ರಕರ್ತರನ್ನು ಮತ್ತು ಮಾಧ್ಯಮವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಮಾಧ್ಯಮ ಮೇಲೆ ಹಿಡಿತ ಸಾಧಿಸಲು ಎನ್‍ಡಿಎ ಸರ್ಕಾರ ಈ ರೀತಿಯ ಬೆದರಿಕೆಯನ್ನೊಡ್ಡುತ್ತಿದೆ.

ಆದರೆ ಈ ಎನ್‍ಡಿಟಿವಿ ಮೇಲೆ ಮಾಡಿರುವ ದಾಳಿಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಎನ್‍ಡಿಟಿವಿ ಸಂಸ್ಥಾಪಕರಿಂದ ಐಸಿಐಸಿಐಗೆ ನಷ್ಟವುಂಟಾಗುತ್ತಿದೆ. ಸಾಲ ಕೊಡುವುದರಿಂದ ಖಾಸಗಿ ಬ್ಯಾಂಕ್‍ಗಳಲ್ಲಿ ನಷ್ಟವುಂಟಾಗುತ್ತಿದೆ. ಸಾಲವನ್ನು ಸಂಪೂರ್ಣವಾಗಿ ಕಟ್ಟಿದ್ದರೂ ಕೂಡ ದಾಳಿ ಮಾಡಲಾಗುತ್ತಿತ್ತು ಎಂಬ ಆರೋಪ ಮತ್ತು ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಎನ್‍ಡಿಟಿವಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿದೆ. 2009ರಲ್ಲಿ ಐಸಿಐಸಿಐ ಟಿಪ್ಪಣಿಯನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಹೇಳಿತ್ತು. ಆಗ ತನಿಖೆ ನಡೆಸಿದಾಗ ಬಡ್ಡಿ ದರದಲ್ಲಿ ಕಡಿತ ಮಾಡಿದ್ದರಿಂದ ನಷ್ಟವುಂಟಾಗಿದೆ. ಇದರಿಂದ ದಾಳಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಭಾರತದಲ್ಲಿ ಬೃಹತ್‍ ನಿಗಮಗಳು ಸಾಲದ ಮೇಲೆ ನಿಯಮಿತವಾಗಿ ಡೀಫಾಲ್ಟ್‍ ಆಗಿರುತ್ತವೆ. ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸುಮಾರು 186 ಶತಕೋಟಿ ಡಾಲರ್‍ನಷ್ಟು ಸಾಲ ಹೊಂದಿವೆ ಎಂಬುದು ಗೊತ್ತಿದ್ದರೂ ಕೂಡ ಮೋದಿ ಸರ್ಕಾರ ಅವುಗಳ ಮೇಲೆ ದಾಳಿ ನಡೆಸಲು ಹಿಂಜರಿದಿದ್ದರು. ಈಗ ಇದ್ದಕ್ಕಿದ್ದಂತೆ ಸಾಲದ ಹೊರೆಯನ್ನು ಕಡಿಮೆ ಮಾಡಿ, ಖಾಸಗಿ ಬ್ಯಾಂಕುಗಳನ್ನು ತೃಪ್ತಿಗೊಳಿಸಿದೆ. ಆದರೆ ಈಗ ಮಾಧ್ಯಮ ಕಂಪನಿಯ ಮೇಲೆ ಹಠಾತ್‍ ದಾಳಿ ನಡೆಸಿರುವುದು, ಮೋದಿ ಸರ್ಕಾರದ ನಾಟಕೀಯ ಬೆಳವಣಿಗೆಗಳನ್ನು ಎತ್ತಿ ತೋರಿಸುತ್ತಿದೆ. ಎನ್‍ಡಿಟಿವಿ ಮೇಲೆ ಮಾಡಿರುವ ದಾಳಿ, ಮೋದಿ ಸರ್ಕಾರ ಪ್ರಚಾರ ಪಡೆಯುವ ತಂತ್ರದ ಇನ್ನೊಂದು ಭಾಗವಾಗಿದೆ ಎಂದು ಎನ್‍ಡಿಟಿವಿ ಪ್ರತಿಕ್ರಿಯಿಸಿದೆ.

2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪತ್ರಕರ್ತರು ಮತ್ತು ಮಾಧ್ಯಮದವರು ಹೆಚ್ಚಿನ ಒತ್ತಡ ಎದುರಿಸುವಂತಾಗಿದೆ. ಸರ್ಕಾರವನ್ನು ವಿಮರ್ಶಿಸುವ ಸುದ್ದಿಗಳು ಪ್ರಕಟವಾದಾಗೆಲ್ಲಾ ಪತ್ರಕರ್ತರು ತೊಂದರೆಗೆ ಒಳಗಾಗಿದ್ದಾರೆ. ಪ್ರಬಲ ರಾಜಕಾರಣಿಗಳು ನಡೆಸುತ್ತಿರುವ ವ್ಯಾಪಾರ ವಹಿವಾಟಿನ ಮೇಲೆ ಎನ್‍ಡಿಟಿವಿ ವರದಿಗಳು ಪರಿಣಾಮ ಬೀರುತ್ತಿವೆ. ಅವರ ಭ್ರಷ್ಟಾಚಾರ ಬಯಲು ಮಾಡುತ್ತಿರುವ ಮಾಧ್ಯಮದ ಮೇಲೆ ಈ ರೀತಿಯ ಅಸ್ತ್ರ ಪ್ರಯೋಗಿಸಿದ್ದಾರೆ. ಸೆನ್ಸಾರ್‍ ವಿಷಯಗಳು ಬಹಿರಂಗಗೊಳ್ಳುತ್ತಿದ್ದು, ರಾಷ್ಟ್ರೀಯ ಸುದ್ದಿ ವರದಿಗಳು ಹೆಚ್ಚಗುತ್ತಿವೆ. ಅಲ್ಲದೇ ಕಳೆದ ವರ್ಷ ಹಿಂದಿ ಭಾಷಾ ಕೇಮದ್ರ ಏರ್‍ಬೇಸ್‍  ಮೇಲೆ ಮಾಡಲಾಗಿದ್ದ ದಾಳಿಯ ಬಗ್ಗೆ ವರದಿ ಮಾಡಲು ಹೋದಾಗ ಅದಕ್ಕೆ ನಿರ್ಬಂಧಿಸಲಾಗಿತ್ತು.

ದಿ ಇಂಡಿಯನ್‍ ಎಕ್ಸ್‍ಪ್ರೆಸ್‍ ವೃತ್ತ ಪತ್ರಿಕೆಯ ವರದಿಗಾರ “ಪ್ರವೀಣ್‍ ಸ್ವಾಮಿ” ಅವರು ಈ ದಾಳಿಯನ್ನು ಖಂಡಿಸಿ, ಟ್ವೀಟ್‍ ಮಾಡಿದ್ದರು. ಈ ಹಿಂದೆ ಇದೇ ರೀತಿಯಾದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. 1975 ರಿಂದ 1977ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ  ತುರ್ತುಪರಿಸ್ಥಿತಿ ಘೋಷಿಸಿದ್ದರು. ಮುಂದೆ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ಸ್ವಾಮಿ ಸ್ಪಷ್ಟ ಸಂದೇಶ ರವಾನಿಸಿದ್ದರಿಂದ ಬುಧವಾರ ಕೇಂದ್ರೀಯ ತನಿಖಾ ದಳ “ ನಾವು ಮಾಧ್ಯಮದ ವಾಕ್‍ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ” ಎಂದು ಹೇಳಿದೆ.

4 thoughts on “ಎನ್‍ಡಿಟಿವಿ ಮೇಲೆ ನಡೆದ CBI ದಾಳಿಗೆ ಜಗತ್ತಿನಾದ್ಯಂತ ವಿರೋಧ ….

 • October 18, 2017 at 2:29 PM
  Permalink

  If you desire to grow your know-how simply keep visiting this web page and be updated with the most up-to-date news update posted here.|

 • October 18, 2017 at 4:15 PM
  Permalink

  Hi my friend! I wish to say that this post is awesome, nice written and include almost all vital infos. I’d like to see extra posts like this .|

 • October 20, 2017 at 7:39 PM
  Permalink

  Hi to every body, it’s my first pay a quick visit of this webpage; this website carries amazing and really fine data in support of readers.|

 • October 21, 2017 at 4:30 AM
  Permalink

  After I initially left a comment I seem to have clicked on the -Notify me when new comments are added- checkbox and from now on every time a comment is added I recieve 4 emails with the same comment. Perhaps there is an easy method you are able to remove me from that service? Thank you!|

Comments are closed.