ಪೌರಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿದವರನ್ನ ಜೈಲಿಗೆ ಹಾಕಿ : ಎಂ.ವಿ ವೆಂಕಟೇಶ್..

ಮೈಸೂರು: ಮೈಸೂರಿನಲ್ಲಿ ಪೌರಕಾರ್ಮಿಕನನ್ನು ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಿದ ಪ್ರಕರಣವನ್ನ ಖಂಡಿಸಿರುವ ಸಪಾಯಿ ಕರ್ಮಚಾರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ ವೆಂಕಟೇಶ್, ಬಲವಂತವಾಗಿ ಮ್ಯಾನ್‌ಹೋಲ್‌ ಒಳಕ್ಕೆ ಇಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾರನ್ನ ಜೈಲಿಗೆ ಹಾಕಬೇಕು ಎಂದಿದ್ದಾರೆ.
 ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟೇಶ್‌,  ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಪೌರಕಾರ್ಮಿಕರನ್ನ ಕಾನೂನು ಬಾಹಿರ ಕೆಲಸಗಳಿಗೆ ಉಪಯೋಗಿಸಿಕೊಂಡಿದ್ದಕ್ಕಾಗಿ ತಾವೂ ಕೂಡ ಗ್ರಾ.ಪಂ ಅಧ್ಯಕ್ಷೆಯ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com