ನೇಣಿಗೆ ಶರಣಾದ ಮಂಡ್ಯದ ಅನ್ನದಾತ : ಬೆಳೆಹಾನಿಯಿಂದ ಮನನೊಂದು ಆತ್ಮಹತ್ಯೆ

ಮಂಡ್ಯ : ಮಂಡ್ಯದಲ್ಲಿ  ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತಲೇ ಇದ್ದು, ಸಾಲಬಾಧೆ ತಾಳಲಾರದೇ ಮತ್ತೊಬ್ಬ ರೈತ ನೇಣಿಗೆ ಕೊರಳೊಡ್ಡಿದ್ದಾನೆ. ಮೃತ ದುರ್ದೈವಿಯ ಹೆಸರು ಕೃಷ್ಣೇಗೌಡ (45) ಎಂದಾಗಿದ್ದು, ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ, ಆಬಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಶುಕ್ರವಾರ ಬೆಳಗ್ಗೆ ಜಮೀನಿನ ಬಳಿ ತೆರಳಿದ್ದ ಕೃಷ್ಣೇಗೌಡ, ಜಮೀನಿನ ಬಳಿಯೇ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
 ಒಂದೂವರೆ ಎಕರೆ ಜಮೀನು ಹೊಂದಿದ್ದ ಈತಬೋರ್‌ವೆಲ್ ಕೊರೆಸಿ ಅದೇ ನೀರಿನ್ನ ನಂಬಿಕೊಂಡು ಭತ್ತ, ಕಬ್ಬು ಬೆಳೆದಿದ್ದು, ಈ ಬಾರಿಯ ಬರಗಾಲದಿಂದ ಬೋರ್ ವೆಲ್ ಬತ್ತಿ ಹೋದ ಪರಿಣಾ ಬೆಳೆ ಒಣಗಿಹೋಗಿತ್ತು. ತನ್ನ ಬೆಳೆಗಾಗಿ ಸುಮಾರು ೫ ಲಕ್ಷ ಸಾಲ ಮಾಡಿಕೊಂಡಿದ್ದ ಕೃಷ್ಣೇಗೌಡ ಬೆಳೆಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com