ತಿಂಗಳೊಳಗೆ ಕೇರಳ ಆದೇಶ ಹಿಂಪಡೆಯಬೇಕು, ಇಲ್ಲವಾದಲ್ಲಿ ಕಾಸರಗೋಡಿಗೆ ಮುತ್ತಿಗೆ : ವಾಟಾಳ್‌

ಕಾಸರಗೋಡು : ಒಂದು ತಿಂಗಳೊಳಗೆ ಕೇರಳ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಆದೇಶವನ್ನ ಹಿಂಪಡೆಯಬೇಕು, ಇಲ್ಲವಾದಲ್ಲಿ  ಕಾಸರಗೋಡಿಗೆ ಮುತ್ತಿಗೆ ಹಾಕುತ್ತೇವೆ, ಕರ್ನಾಟಕದಲ್ಲಿರುವ ಎಲ್ಲ ಮಲಯಾಳಿಗಳನ್ನ ಕೇರಳಕ್ಕೆ ವಾಪಾಸ್ ಕಳಿಸುತ್ತೇವೆ ಎಂದು ವಾಟಾಳ್‌ ನಾಗರಾಜ್‌ ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಸರಗೋಡು ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ತಿಂಗಳಲ್ಲಿ ಆದೇಶ ವಾಪಾಸ್ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ, ಕೇರಳ ಸರ್ಕಾರದ ದಬ್ಬಾಳಿಕೆ ವಿರೋಧಿಸಿ ಜೂ.12ಕ್ಕೆ ಕರ್ನಾಟಕ ಬಂದ್ ಮಾಡಲಿದ್ದೇವೆ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com