ಫ್ರೆಂಚ್ ಓಪನ್ : ರೋಹನ್ ಬೋಪಣ್ಣ ಗೆ ಮಿಕ್ಸ್ಡ್ ಡಬಲ್ಸ್ ಕಿರೀಟ….

ಭಾರತದ ರೋಹನ್ ಬೋಪಣ್ಣ ಕೆನಡಾದ ಗ್ಯಾಬ್ರಿಯೇಲಾ ದಾಬ್ರೋವ್ಸ್ಕಿ ಜೋಡಿಫ್ರೆಂಚ್ ಓಪನ್ ಟೂರ್ನಿಯ ಮಿಕ್ಸ್ಡ್ ಡಬಲ್ಸ್ ಪ್ರಶಸ್ತಿಯನ್ನು  ತನ್ನ ದಾಗಿಸಿಕೊಂಡಿದೆ. ಗುರುವಾರ ಪ್ಯಾರಿಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿಯ ಗ್ರೋನ್ ಫೀಲ್ಡ್ ಹಾಗೂಕೋಲಂಬಿಯಾದ ರಾಬರ್ಟ್ ಫರಾಹ್ ಜೋಡಿಯ ವಿರುದ್ಧ ಜಯಗಳಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

 

ಫೈನಲ್ ನಲ್ಲಿ ಮೊದಲ ಸೆಟ್ ನಲ್ಲಿ 2 – 6 ರಿಂದ ಸೋತು ಹಿನ್ನಡೆಯಾದರೂ, 2 ಹಾಗೂ 3 ರಲ್ಲ 6 – 2, 12 – 10 ಸೆಟ್ ಗಳಲ್ಲಿ ಜಯಗಳಿಸಿದ್ದಾರೆ. ಇದು ರೋಹನ್ ಬೋಪಣ್ಣ ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು 2010 ರಲ್ಲಿ ರೋಹನ್, ಪಾಕಿಸ್ತಾನದ ಐಸಮ್ – ಉಲ್ – ಹಕ್ ಕುರೇಶಿ ಯವರೊಂದಿಗೆ
ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದರೂ ಗೆಲ್ಲಲು ವಿಫಲರಾಗಿದ್ದರು.

ರೋಹನ್, ಲಿಯಾಂಡರ್ ಪೇಸ್, ಮಹೇಶ ಭೂಪತಿ ಹಾಗೂ ಸಾನಿಯಾ ಮಿರ್ಜಾ ಅವರ ನಂತರ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ಎನಿಸಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com