ರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್, ಯಾರಾಗ್ತಾರೆ ಪ್ರಥಮ ಪ್ರಜೆ ?

ರಾಷ್ಟ್ರಪತಿ ಚುನಾವಣೆಗಾಗಿ ಎನ್ ಡಿ ಎ ಹಾಗು ಯುಪಿಎ ಕಸರತ್ತು ಆರಂಭಿಸಿದೆ. ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾವಧಿ ಜುಲೈ 25ಕ್ಕೆ ಕೊನೆಗೊಳ್ಳುವುದರಿಂದ ಅವರ ಸ್ಥಾನಕ್ಕೆ ಸೂಕ್ತ  ವ್ಯಕ್ತಿಯ ಆಯ್ಕೆಗೆ ಮುಹೂರ್ತ ಫಿಕ್ಸಾಗಿದ್ದು ಜುಲೈ 17ಕ್ಕೆ ಚುನಾವಣೆ ನಡೆಯಲಿದೆ.

ಬಿಜೆಪಿ ಪ್ರಾಬಲ್ಯದ ಎನ್ ಡಿ ಎ ಕಡೆಯಿಂದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಲೋಕಸಭೆಯ ಸ್ಪೀಕರ್ ಸುಮಿತ್ರ ಮಹಾಜನ್ ಹಾಗು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೆಸರುಗಳು ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ ಕೆ ಅಡ್ವಾಣಿ, ಉಮಾಭಾರತಿ ಹೆಸರುಗಳು ಹರಿದಾಡ್ತಿರೋದ್ರಿಂದ ಅವರನ್ನು ಈ ರೇಸಿನಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಆದ್ರೆ ಈಗ ಎನ್ ಡಿ ಎ ಕಡೆಯಿಂದ ಮತ್ತೊಂದು ಹೆಸರು ಕೇಳಿಬಂದಿದೆ. ಸದ್ಯ ಜಾರ್ಖಂಡ್ ನ ರಾಜ್ಯಪಾಲರಾಗಿರೋ ದ್ರೌಪತಿ ಮುರ್ಮು ಅವ್ರ ಹೆಸರು ಕೂಡ ಹರಿದಾಡ್ತಿದೆ.

ಇನ್ನೊಂದು ಕಡೆ ಯುಪಿಎ ಕೂಡ ಒಳಗೊಳಗೆ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲು ತಂತ್ರ ರೂಪಿಸುತ್ತಿದೆ. ಆದ್ರೆ ಇನ್ನೂ ತನ್ನ ಅಭ್ಯರ್ಥಿಯನ್ನ ಘೋಷಿಸಿಲ್ಲ. ಕೆಲವು ದಿನಗಳ ಹಿಂದೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲ ಪಕ್ಷಗಳ ಸಭೆ ಸೇರಿದ್ದು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಚರ್ಚೆ ನಡೆಸಲಾಗಿದೆ. ಈ ಸಭೆಗೆ ನಿತೀಶ್ ಕುಮಾರ್ ಗೈರು ಹಾಜರಾಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಹೀಗಾಗಿ ಪ್ರಣಬ್ ಮುಖರ್ಜಿ ಸ್ಥಾನವನ್ನ ಯಾರು ತುಂಬ್ತಾರೋ ಎನ್ನುವ ಕುತೂಹಲವಂತೂ ಸಹಜವಾಗಿ ಇದ್ದೇ ಇದೆ. ಆದ್ರೆ ಜುಲೈ 17ಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಈ ಕ್ಯೂರಿಯಾಸಿಟಿಗೆ ತೆರೆಬೀಳಲಿದೆ.

One thought on “ರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್, ಯಾರಾಗ್ತಾರೆ ಪ್ರಥಮ ಪ್ರಜೆ ?

  • October 24, 2017 at 8:48 PM
    Permalink

    There are certainly a number of particulars like that to take into consideration. That could be a great level to deliver up. I provide the ideas above as normal inspiration but clearly there are questions just like the one you deliver up the place an important factor will likely be working in trustworthy good faith. I don?t know if finest practices have emerged round issues like that, but I am sure that your job is clearly identified as a fair game. Both girls and boys really feel the influence of just a moment’s pleasure, for the remainder of their lives.
    love compatibility by full name http://www.youtube.com/watch?v=8S3lFuJcFHI

Comments are closed.