ಮಳೆಯ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋದ ಕಾರು : ಕಾರ್‌ನಲ್ಲಿದ್ದ ನಾಲ್ವರ ದುರ್ಮರಣ..

ಬಾಗಲಕೋಟೆ: ಮಳೆಯ ರಭಸಕ್ಕೆ ಹಳ್ಳದಲ್ಲಿ ಕಾರು ಕೊಚ್ಚಿಕೊಂಡು ಹೋಗಿ ಕಾರ್‌ನಲ್ಲಿದ್ದ ನಾಲ್ವರು ಮೃತಪಟ್ಟು ಸಿನಿಮೀಯ ರೀತಿಯಲ್ಲಿ ಓರ್ವ ಪಾರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅನವಾಲ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಯಂಡಿಗೇರಿ ಗ್ರಾಮದ ಹೊಳಬಸಪ್ಪ ಬಸಪ್ಪ ಶಿರಗುಪ್ಪಿ (55) , ಯಮನಪ್ಪ ಬಸಪ್ಪ ಹಡಪದ (45), ಅಶೋಕ  ಸಾತಪ್ಪನವರ (40), ರುದ್ರಪ್ಪ ಗುರಪ್ಪನವರ (55)  ಎಂದು ಗುರುತಿಸಲಾಗಿದ್ದು, ಇದೇ ಕಾರ್‌ನಲ್ಲಿದ್ದ ಯಂಡಿಗೇರಿಯ ಬಸಲಿಂಗಪ್ಪ ಶಿರಗುಂಪಿ ಎಂಬಾತ ಕಾರಿನಿಂದ ಜಿಗಿದು ಪ್ರವಾಹದ ನೀರಲ್ಲಿ ಈಜಿ ಅದೃಷ್ಷವಶಾತ್ ಪಾರಾಗಿದ್ದಾನೆ.
ವಿಷಯ ತಿಳಿದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಎ.ಎಸ್.ಪಿ ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಕಾರ್ ಪತ್ತೆ ಹಚ್ಚಿ, ನಾಲ್ವರ ಶವ ಹೊರ ತೆಗೆದಿದ್ದಾರೆ. ಸಧ್ಯ ಶವಗಳನ್ನ ಕೆರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಶವ ಪರೀಕ್ಷೆ ನೆಡೆಸಲಾಗುತ್ತಿದೆ. ಸಾವಿಗೀಡಾದವ್ರಲ್ಲಿ ಯಂಡಿಗೇರಿ ಇಬ್ಬರು ಹಾಗೂ ಬೆಳಗಾಂವಿ ಜಿಲ್ಲೆ ರಾಮದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮದ ಇಬ್ಬರು ವ್ಯಕ್ತಿಗಳಾಗಿದ್ದಾರೆ. ಮುಂಗಾರು ಆರಂಭಿಕ ಮಳೆಯ ಅವಧಿಯಲ್ಲಿ ಏಕಾಏಕಿ ಸಂಭವಿಸಿದ ಭೀಕರ ದುರಂತ ಇದಾಗಿದ್ದು, ಮೃತರ ಊರಾದ ಯಂಡಿಗೇರಿ ಹಾಗೂ ಕರಡಿಗುಡ್ಡದಲ್ಲಿ ಸೂತಕದ ಚಾಯೆ ಆವರಿಸಿದೆ.

Comments are closed.

Social Media Auto Publish Powered By : XYZScripts.com