ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ : ಕೃತ್ಯ ಎಸಗಿದ ಆರೋಪಿ ಅರೆಸ್ಟ್‌…

ರಾಮನಗರ : ವಿವಾಹಿತ ಯುವತಿ ಮೇಲೆ ಅದೇ ಊರಿನ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಪೂರ್ಣಿಮಾ (22) ಎಂಬ ಯುವತಿ ಅತ್ಯಚಾರಕ್ಕೊಳಗಾದ ವಿವಾಹಿತ ಯುವತಿಯಾಗಿದ್ದು,  ಅದೇ ಗ್ರಾಮದ ಯುವಕ ಗಿರೀಶ್ (25) ಎಂಬಾತ ಕೃತ್ಯ ಎಸಗಿದ್ದಾನೆ.
 ಪೂರ್ಣಿಮಾ ಮನೆಯ ಪಕ್ಕದ ಮನೆಯವನೇ ಆಗಿರುವ ಗಿರೀಶ, ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಪೂರ್ಣಿಮಾ ಮೇಲೆ ಬಲಾತ್ಕರಿಸಿದ್ದಾನೆ.  ಚನ್ನಪಟ್ಟಣ ತಾಲೂಕು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಸಧ್ಯ ಆರೋಪಿ ಗಿರೀಶ್‌ ಪೊಲೀಸರ ವಶದಲ್ಲಿದ್ದಾನೆ. ಸಂತ್ರಸ್ಥೆ ಪೂರ್ಣಿಮಾ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ⁠⁠⁠⁠

2 thoughts on “ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ : ಕೃತ್ಯ ಎಸಗಿದ ಆರೋಪಿ ಅರೆಸ್ಟ್‌…

Comments are closed.

Social Media Auto Publish Powered By : XYZScripts.com