French open : ಪ್ರಿ ಕ್ವಾರ್ಟರ್​​ ಫೈನಲ್ ಗೆ ಸಿಮೋನಾ ಹಾಲೆಪ್​​, ಆ್ಯಂಡಿ ಮರ್ರೆ …

ವಿಶ್ವದ ಅಗ್ರ ಶ್ರೇಯಾಂಕಿತ ಬ್ರಿಟನ್​ನ ಆ್ಯಂಡಿ ಮರ್ರೆ ಅವರು ಫ್ರೆಂಚ್​ ಓಪನ್​ ಟೆನಿಸ್​ ಟೂರ್ನಿಯ ಪ್ರಿ ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ, ವೃತ್ತಿ ಬದುಕಿನ 650ನೇ ಜಯ ಸಾಧಿಸಿ ಎಂಟರ ಘಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.


ಪ್ಯಾರೀಸ್​​ನಲ್ಲಿ ಸೋಮವಾರ ನಡೆದ ಸಿಂಗಲ್ಸ್​ ಪಂದ್ಯದಲ್ಲಿ ಮರ್ರೆ 6-3, 6-4, 6-4 ರಿಂದ ರಷ್ಯಾದ ಕರೆನಾ ಖಚನೊವಾ ವಿರುದ್ಧ ಮೂರು ನೇರ ಸೆಟ್​​ಗಳಲ್ಲಿ ಗೆಲುವು ದಾಖಲಿಸಿದರು.
2 ಗಂಟೆ 4 ನಿಮಿಷ ನಡೆದ ಕಾದಾಟದಲ್ಲಿ ಮರ್ರೆ ಪ್ರಬುತ್ವ ಮೆರೆದರು. ಆಕರ್ಷಕ ಸರ್ವ್​​ ಹಾಗೂ ಗ್ಯಾಪ್​ ಶಾಟ್​ಗಳ ಮೂಲಕ ಅಂಕಗಳನ್ನು ಕಲೆ ಹಾಕಿದ ಮರ್ರೆ, ತಮ್ಮ ನೈಜ ಆಟ ಆಡಿದರು. ಡಬಲ್​ ಫಾಲ್ಟ್​​​ಗಳನ್ನು ಎದುರಾಳಿ ಆಟಗಾರ ಮಾಡಿದ ಪರಿಣಮಾ ಮರ್ರೆ ಖಾತೆಯಲ್ಲಿ 6 ಅಂಕಗಳು ಸೇರ್ಪಡೆಯಾದವು.


ಇನ್ನೊಂದು ಪುರುಷರ ಸಿಂಗಲ್ಸ್​ ಪಂದ್ಯದಲ್ಲಿ ಮಾಜಿ ಟೂರ್ನಿಯ ಚಾಂಪಿಯನ್​​ ಸ್ಟಾನಿಸ್ಲಾಸ್​ ವಾವ್ರಿಂಕ 7-5, 7-6,6-2 ಸೆಟ್​​ಗಳಿಂದ ಸ್ಥಳೀಯ ಆಟಗಾರ ಗಯಲ್​ ಮೋನ್ಫಿಲ್ಸ್​​ ವಿರುದ್ಧ, ಜಪಾನ್​​ನ ಕಿ ನಿಶಿಕೋರಿ 0-6, 6-4,6-4, 6-0 ಸೆಟ್​​ಗಳಿಂದ ಸ್ಪೇನ್​ ವೆಂಡ್ರಸ್ಕಾ ವಿರುದ್ಧ, ಗೆಲುವಿನ ನಗೆ ಬೀರಿ ಮುಂದಿನ ಹಂತ ಪ್ರವೇಶಿಸಿದರು.
ವನಿತೆಯರ ಸಿಂಗಲ್ಸ್​​ ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ 4-6, 6-3, 7-5 ರಿಂದ ಕ್ರೂವೆಷಿಯಾದ ಪೆಟ್ರಾ ಮಾರ್ಟಿಕ್​ ವಿರುದ್ಧ, ಸಿಮೋನಾ ಹಾಲೆಪ್​​ 6-1, 6-1 ಸೆಟ್​​ಗಳಿಂದ ಸ್ಪೇನ್​​ನ ಕಾರ್ಲ್​​ ಸೂರೆಜ್​ ವಿರುದ್ಧ ಗೆಲುವು ದಾಖಲಿಸಿದರು.

3 thoughts on “French open : ಪ್ರಿ ಕ್ವಾರ್ಟರ್​​ ಫೈನಲ್ ಗೆ ಸಿಮೋನಾ ಹಾಲೆಪ್​​, ಆ್ಯಂಡಿ ಮರ್ರೆ …

 • October 18, 2017 at 1:30 PM
  Permalink

  How do I hide my extended network & sites, without leaving a huge white gap throughout the bottom?

 • October 18, 2017 at 2:08 PM
  Permalink

  I want to begin a blog that deals with moral issues. I want people to be able to see it, and also be simple to use and post..

 • October 20, 2017 at 10:58 PM
  Permalink

  How can I get the computer in a single room to send stuff to the printer upon my computer in one more room. Internet?

Comments are closed.

Social Media Auto Publish Powered By : XYZScripts.com